ಉತ್ತರ ಕನ್ನಡದ ಕುಮಟಾದಲ್ಲಿ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಅವರಿಗೆ ಅಭಿನಂದನೆಯ ಮಹಾಪುರ

JANANUDI.COM NETWORK

“135 ವರ್ಷಗಳಿಂದ ಕಾಂಗ್ರೆಸ್ ರಾಷ್ಟ್ರದ ಏಕತೆ. ಅಖಂಡತೆ, ಅಭಿವ್ರದ್ದಿಗೆ ಮಹತ್ವದ ಕೊಡುಗೆ ನೀಡಿದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ. ರಾಮ ರಾಜ್ಯದ, ಕಲ್ಪನೆಗೂ ಸಾಕಷ್ಟು ವತ್ಯಾಸವಿದೆ. ಗಾಂಧೀಜಿಯವರ ರಾಮ ರಾಜ್ಯದಲ್ಲಿ ಎಲ್ಲ ಧರ್ಮಿಯರೂ ಸೌಹಾರ್ದತೆಯಿಂದ ಬದುಕುವ ಕನಸಿದೆ.ಮಹಿಳೆ ನಡುರಾತ್ರಿಯಲ್ಲಿ ಏಕಾಂಕಿಯಾಗಿ. ಸುರಕ್ಷಿತವಾಗಿ ಮನೆ ಸೇರಬೇಕು ಎಂಬ ಕಲ್ಪನೆಯಿದೆ. ಆದರೆ ಬಿ ಜೆ ಪಿ ಯವರ ರಾಮ ದಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದೆ. ಜಾತಿ, ಧರ್ಮಗಳ ನಡುವೆ ವಿಷ ಬಿತ್ತಲಾಗಿದೆ. ರಾಷ್ಟ್ರದ ಐಕ್ಕತೆಗೆ ಧಕ್ಕೆ ಉಂಟಾಗಿದೆ” ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಬಿ.ಜೆ .ಪಿ ವಿರುದ್ದ ಹರಿಹಾಯ್ದರು.


ಕುಮಟಾದ ಗಿಬ್ ಹೈಸ್ಕೂಲಿನ ಲಕ್ಷ್ಮೀಬಾಯಿ ಬರ್ಡೆಕರ್ ಸಭಾ ಭವನದಲ್ಲಿ ‘ಅಭಿನಂದನೆ’ ಸ್ವೀಕರಿಸಿ ಅವರು ಮಾತನಾಡಿದರು.


‘ಕೈಯಲ್ಲಿ ದೊಣ್ಣೆ ಹಿಡಿದು, ಖಾಕಿ ಚಡ್ಡಿ ಕರಿ ಟೋಪಿ ಹಾಕಿದವರಿಂದ ದೇಶ ಕಾಪಾಡಲು ಸಾಧ್ಯವಿಲ್ಲ. ನಮ್ಮ ದೇಶ ಕಾಪಾಡಲು ಮಿಲಿಟರಿ, ನೇವಿ, ವಾಯು ಸೇನೆ, ಪೊಲೀಸ್  ಸೇನೆಗಳಿವೆ. ಇವರ ನಡುವೆ ಖಾಕಿ ಚಡ್ಡಿ ಕರಿ ಟೋಪಿ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದುಕೊಳ್ಳುವವರಿಂದ. ದೇಶ ಕಾಪಾಡಲು ಸಾಧ್ಯವಿಲ್ಲ’ ಎಂದು ಆರ್ ಎಸ್ ಎಸ್ ವಿರುದ್ದ ಕೆಂಡ ಕಾರಿದರು.


“ನಮ್ಮ ರಾಷ್ಟ್ರದಲ್ಲಿ ಹಲವು ಧರ್ಮೀಯರು ಶಾಂತಿ ನೆಮ್ಮದಿಯಿಂದ ಬದುಕಿದ್ದಾರೆ. ಆದರೆ, ಅವರ ನೆಮ್ಮದಿ ಕಸಿಯಲು ಸುಂವಿಧಾನ ಬದಲಿಸುವ ಮಾತು ಈ ಜಿಲ್ಲೆಯ ಜನಪ್ರತಿನಿಧಿಗಳಿಂದ ಕೇಳಿ ಬಂದಿದೆ. ಜನರ ಧಾರ್ಮಿಕ ಭಾವನೆ ಕೆರಳಿಸಿ, ಅಧಿಕಾರಕ್ಕೆ ಬಂದ ಬಿಜಿಪಿ ಸರ್ಕಾರದ ಸಾಧನೆ ಶೂನ್ಯ” ಎಂದರು. ಶಿಕ್ಷಣ ಆರೋಗ್ಯ ಭಾರತದ ಉನ್ನತಿಗಾಗಿ ಕಾಂಗ್ರೆಸ್ ಬೆಂಬಲಿಸಿ. ದ್ವೇಷ ಅಸೂಯೆ, ಧರ್ಮಗಳ ನಡುವಿನ ಕಲಹ ಬೇಕಾದರೆ ಬಿಜೆಪಿ ಗೆ ಬೆಂಬಲಿಸಿ. ಎಂದರು.


ಹರಿಪ್ರಸಾದರ ಅಭಿನಂದನಾ ಸಮಿತಿ ಅಧ್ಯಕ್ಷ ಮಂಜುನಾಥ ಎಲ್. ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಹರಿಪ್ರನಾದ್ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳ ಕಾಲ ಸಂಘಟನೆಗಾಗಿ ದುಡಿದವರು. 17 ರಾಜ್ಯಗಳ ಉಸ್ತುವಾರಿಯಾಗಿ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಅವರನ್ನು ಪಕ್ಷ ನಿಷ್ಠೆ ಪ್ರಾಮಾಣಿತೆಗೆ ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದೆ’ ಎಂದರು.


ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, “ಹರಿಪ್ರಸಾದ್ ಹಿರಿಯ ರಾಜಕಾರಣಿ ವಿರೋಧ ಪಕ್ಷದವರಿಗೆ ತಮ್ಮ ನೇರ ನುಡಿಯ ಮೂಲಕ ದಿಟ್ಟ ಉತ್ತರ ನೀಡುವ ಸಾಮಥ್ರ್ಯ ಅವರಲ್ಲಿದೆ’ ಎಂದರು. ಬಿಕೆ ಹರಿಪ್ರಾದ ಅಭಿನಂದನಾ ಸಮಿತಿಯ ಸಂಚಾಲಕರಾದ ಶಿವಾನಂದ ಹೆಗಡೆ ಕಡತೋಕ ಮಾತಾಡಿ ‘ಹರಿಪ್ರಸಾದ ಅವರ ವ್ಯಕ್ತಿತ್ವ ಎಲರ್ಲನ್ನೂ ಆಕರ್ಷಿಸುತ್ತದೆ, ಇಂತಹ ಪ್ರಭಾವಿ ನಾಯಕರನ್ನು ಸನ್ಮಾನಿಸುವುದು ನಮಗೆ ಹಮ್ಮೆಯ ಸಂಗತಿ ಎಂದರು. ಮಾಜಿ ಸಚಿವರಾದ ಆರ್.ಎನ್. ನಾಯ್ಕ, ಸಾಂಬಾರು ಮಂಡಳಿಯ ಮಾಜಿ ಅಧ್ಯಕ್ಷ ಮಜಾಮಿಲ್ ಖಾಜಿಯಾ, ಕಾಂಗೆಸಿನ ಹಿರಿಯ ಮುಖಂಡ ರಮಾನಂದ ನಾಯಕ ಅಂಕೋಲ, ಮಾಜಿ ಶಾಸಕ ಜೆ.ಡಿ. ನಾಯ್ಕ್ ಮಾತಾಡಿದರು.

ಮಾಜಿ ಸಚಿವ ಮತ್ತು ಹಳಿಯಾಳದ ಶಾಸಕ ಆರ್. ವಿ. ದೇಶ್ ಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾ ಸಮಿತಿ ಕಿಸಾನ್ ಕಾಂಗ್ರೆಸ್ ಮತ್ತು. ವಿವಿಧ ಸಂಘ ಸಂಸ್ಥೆಗಳಿಂದ ಹರಿಷ್ಪಸಾದ ಆವರನ್ನು ಗೌರವಿಸಲಾಯಿತು.


ಕಾಂಗ್ರೆಸ್ ಜಿಲಾಧ್ಯಕ್ಷ ಭೀಮಣ್ಣ ನಾಯ್ಕ. ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ, ಆಭಿನಂದನಾ ಸಮಿತಿಯ ಗೌರವಾಧ್ಯಕ್ಷ ಆರ್ ಜಿನಾಯ್ಕ, ಕಾಂಗ್ರೆಸ್ ಮುಖಂಡರಾದ ನಾಗರಾಜ ನಾರ್ವೇಕರ್, ಹೊನ್ನಪ್ಪ ನಾಯಕ, ನಾಗೇಶ ನಾಯ್ಕ ಕಲಭಾಗ, ಭಾಸ್ಕರ ಪಟಾರ, ಆರ್ ಎಚ್.ನಾಯ್ಕ್, ಕೃಷ್ಣ ಗೌಡ ಮತ್ತು ಇತರರು. ಉಪಸ್ಥಿತರಿದ್ದರು. ವಿವಿಧ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ಸುಗ್ಗಿ ಕುಣಿತ, ಡೊಳ್ಳು ಕುಣಿತ, ಗುಮಟೆ ಪಾಂಗ್, ಗಮನ ಸೆಳೆಯತು.