ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವಗಳ ಆಧಾರದ ಮೇಲೆ ನಾ.ಸು.ಹರ್ಡೀಕರ್ ಸ್ಥಾಪಿಸಿರುವ ಭಾರತ ಸೇವಾದಳ ಸದಸ್ಯತ್ವ ನೋಂದಣಿ ಕಾರ್ಯವು ಆರಂಭವಾಗಿದ್ದು, ಸೇವಾ ಮನೋಭಾವ ಇರುವವರೂ ಸದಸ್ಯರಾಗಲು ಅವಕಾಶ ಕಲ್ಪಿಸಲಾಗಿದೆ.
ಸೇವಾ ಮನೋಭಾವನೆ ಹೊಂದಿ ಸೇವಾದಳದಲ್ಲಿ ಸದಸ್ಯರಾಗಲು ಇಚ್ಛಿಸುವವರು ಕೋಲಾರ ಬಿಇಒ ಕಚೇರಿ ಆವರಣದಲ್ಲಿರುವ ಕೋಲಾರ ಜಿಲ್ಲಾ ಸೇವಾದಳ ಕಚೇರಿಗೆ ಎರಡು ಭಾವಚಿತ್ರ, ಆಧಾರ್ ಕಾರ್ಡ್ ಸಮೇತ ಅಜೀವ ಸದಸ್ಯತ್ವ ಶುಲ್ಕ 1000 ರೂ. ಅಥವಾ ವಾರ್ಷಿಕ ಸದಸ್ಯತ್ವ ಶುಲ್ಕ 100 ರೂ.ಗಳಲ್ಲಿ ಒಂದನ್ನು ಜಿಲ್ಲಾ ಸಂಘಟಕ ದಾನೇಶ್‍ರ ಬಳಿ ಖುದ್ದಾಗಿ ರಸೀದಿ ಪಡೆದು ಪಾವತಿಸಬೇಕು. ಸದಸ್ಯತ್ವ ಅರ್ಜಿಯನ್ನು ಪರಿಶೀಲಿಸಿ ಸ್ವೀಕರಿಸುವ ಅಥವಾ ಆಂಗೀಕರಿಸುವ ಹಕ್ಕನ್ನು ಭಾರತ ಸೇವಾದಳ ಕೇಂದ್ರ ಸಮಿತಿಯು ಹೊಂದಿರುತ್ತದೆ.
ಸದಸ್ಯತ್ವ ನೋಂದಣಿ ಕಾರ್ಯವು ಜೂ.30 ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದ್ದು, ಜೂ.1 ರಿಂದ 15 ರವರೆಗೆ ವಿವಿಧ ತಾಲೂಕು ಸಮಿತಿಗಳ ರಚನೆ ಮತ್ತು ಜೂ.16 ರಿಂದ ಜೂ.30 ರೊಳಗಾಗಿ ವಿವಿಧ ತಾಲೂಕು ಮತ್ತು ಜಿಲ್ಲಾ ಸಮಿತಿ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಭಾರತ ಸೇವಾದಳಕ್ಕೆ ಸದಸ್ಯರಾಗುವವರು ಈ ಮುಕ್ತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಭಾರತಸೇವಾದಳ ಜಿಲ್ಲಾ ಸಂಘಟಕ ದಾನೇಶ್ ತಿಳಿಸಿದ್ದಾರೆ.