“ಸುಗಂಧಿ ಚಲನ ಚಿತ್ರ ಕಾರಂತರ ಜೀವಂತಿಕೆಯನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ. ಸರ್ವರೂ ಚಿತ್ರ ನೋಡಿ, ತಂಡದದವರನ್ನು ಪ್ರೋತ್ಸಾಹಿಸ ಬೇಕು” ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟದ ಸಮಾನ ಮನಸ್ಕ ಆಸಕ್ತರು ಕೂಡಿ ನಿರ್ಮಿಸಿದ “ಸುಗಂಧಿ” ಕನ್ನಡ ಚಲನ ಚಿತ್ರದ ಪ್ರೀಮಿಯರ್ ಶೋ ವನ್ನು ಕೋಟೇಶ್ವರದ ಭಾರತ್ ಸಿನಿಮಾಸ್ ನ ಮಲ್ಟಿಪ್ಲೆಕ್ಸ್ ನಲ್ಲಿ ಆದಿತ್ಯವಾರ ಉದ್ಘಾಟಿಸಿ ಅವರು ಶುಭ ಹಾರೈಸಿದರು.
ನಿರ್ಮಾಪಕ, ಶಿಕ್ಷಕ ನರೇಂದ್ರ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೀಕೆಂಡ್ ಶೋ ಅಂತ ಕಾರಂತ್ ಥೀಮ್ ಪಾರ್ಕ್ ನ ಮಿನಿ ಹೋಂ ಥಿಯೇಟರ್‍ನಲ್ಲಿ ಶೋ ಇರುತ್ತದೆ ಇದು ಈ ವರ್ಷ ಅಂತ್ಯದವರೆಗೆ ಪ್ರದರ್ಶನ ಗೊಳ್ಳಲಿದೆ. ಅಲ್ಲದೆ ನವಂಬರ್ 1 ರಿಂದ ಪರಿಸರದ ಎಲ್ಲಾ ಶಾಲೆಯ ಮಕ್ಕಳಿಗೆ ಪ್ರದರ್ಶನ ನೀಡುವ ಯೋಜನೆಯನ್ನು ಹೊಂದಿದ್ದೇವೆ ಎಂದು ನರೇಂದ್ರ ಕುಮಾರ್ ಹೇಳಿದರು.
ಮಾನ್ಯ ಸಚಿವರು ಸುಗಂಧಿ ಚಲನಚಿತ್ರವನ್ನು ವೀಕ್ಷಿಸಿ ಎಲ್ಲರಿಗೂ ಶುಭ ಹಾರೈಸಿದರು. ಸುಗಂಧಿ ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಸಿನಿಮಾದ ಕುರಿತು ಶ್ಲಾಘಿಸಿದರು.
ಬಾಲ ಕಲಾವಿದೆ ವೈಷ್ಣವಿ ಅಡಿಗ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಕುಂದಪ್ರಭ ಸಂಪಾದಕ ಯು. ಎಸ್. ಶೆಣೈ, ಕೋಟತಟ್ಟು ಗ್ರಾ. ಪಂ. ಅಧ್ಯಕ್ಷೆ ಅಶ್ವಿನಿ ದಿನೇಶ್, ಕೋ. ಸ. ವ. ಸಂ. ಅಧ್ಯಕ್ಷರಾದ ಜಿ. ತಿಮ್ಮಪೂಜಾರಿ, ವಿವೇಕ ವಿದ್ಯಾ ಸಂಸ್ಥೆ ಪ್ರಾಂಶುಪಾಲರು ಜಗದೀಶ ನಾವುಡ, ಕಾರ್ಯದರ್ಶಿ ರಾಮದೇವ್ ಐತಾಳ್, ತಾರಾನಾಥ್ ಹೊಳ್ಳ ಕಾರ್ಕಡ, ರವಿ ಐತಾಳ್ ಪಾರಂಪಳ್ಳಿ ಹಾಗೂ ಹಲವಾರು ಊರ ಪ್ರಮುಖರು ಉಪಸ್ಥಿತರಿದ್ದರು.