

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭಾ ಕಚೇರಿಯ ಸಭಾಂಗಣದಲ್ಲಿ 2025-26ನೇ ಸಾಲಿನ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪುರಸಭಾ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಈ ಹರಾಜಿನಲ್ಲಿ ದಿನವಹಿ ಮಾರುಕಟ್ಟೆ, ವಾರದ ಸಂತೆ, ಬಸ್ ಸ್ಟ್ಯಾಂಡ್ ಶುಲ್ಕ, ಮುಸಾಫೀರ್ ಖಾನ್ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿ (ಸೆಲ್ಲರ್) ದ್ವಿಚಕ್ರ ವಾಹನ ನಿಲುಗಡೆ ಶುಲ್ಕ ವಸೂಲಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜು ಪ್ರಕ್ರಿಯೆಯಿಂದ ₹20,40,000 (ಇಪ್ಪತ್ತು ಲಕ್ಷ ನಲವತ್ತು ಸಾವಿರ ರೂಪಾಯಿ) ಸಂಗ್ರಹಗೊಂಡಿದೆ.
ಹರಾಜಿನಲ್ಲಿ ಪುರಸಭಾ ಮುಖ್ಯಾಧಿಕಾರಿ ವಿ. ನಾಗರಾಜು, ಪುರಸಭಾ ಸದಸ್ಯರಾದ ಆನಂದ್ ಗೌಡ, ಎಂ.ಬಿ. ಸರ್ದಾರ್, ಉನಿಕಿಲಿ ನಾಗರಾಜ್, ಹೇಮಂತ್ ಕುಮಾರ್, ಕಂದಾಯ ಅಧಿಕಾರಿ ಎನ್. ಶಂಕರ್, ಆರೋಗ್ಯ ನಿರೀಕ್ಷಕ ಟಿ.ವಿ. ಸುರೇಶ್ ಕುಮಾರ್, ಕಂದಾಯ ವಸೂಲಿಗಾರ ಎಸ್. ಪ್ರತಾಪ್ ಸೇರಿದಂತೆ ಹರಾಜು ಬಿಡ್ದಾರರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಈ ಹರಾಜಿನಿಂದ ಪುರಸಭೆಯ ಆದಾಯ ಹೆಚ್ಚಳವಾಗಿದ್ದು, ನಗರಾಭಿವೃದ್ಧಿಗೆ ಈ ಹಣ ಬಳಸುವ ಸಾಧ್ಯತೆ ಇದೆ.