ಶ್ರೀನಿವಾಸಪುರ : ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ, ವಿದ್ಯೆಯನ್ನು ಯಾರು ಶ್ರದ್ಧೆಯಿಂದ ಶ್ರಮವಹಿಸಿ ವಿದ್ಯೆಯನ್ನು ಕಲಿಯುತ್ತಾರೊ ಅವರಿಗೆ ಮಾತ್ರ ವಿದ್ಯೆ ಒಲಿಯುತ್ತದೆ ಪಟ್ಟಣದ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿಗೆ ಶನಿವಾರ ಬೇಟಿ ನೀಡಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾಲಹರಣ ಮಾಡದೆ ಓದಿನ ಕಡೆ ಲಕ್ಷ್ಯವಹಿಸಬೇಕು. ಪೋಷಕರ ಭರವಸೆ ನೆರವೇರಿಸಬೇಕು. ಹಿರಿಯರ ಅನುಕರಣೆ ಮಾಡಬೇಕು ಅವಕಾಶಗಳನ್ನು ಬಳಸಿಕೊಂಡು ಚೆನ್ನಾಗಿ ಓದಬೇಕು ಎಂದರು.
ಇದೇ ಸಮಯದಲ್ಲಿ ಲೋಕಸಭಾ ಚುನಾವಣೆಗೆ ಕಾಲೇಜು ಆವರಣದಲ್ಲಿರುವ ಮತಯಂತ್ರಗಳನ್ನು ಇಡುವ ಭದ್ರತಾಕೊಠಡಿಗಳನ್ನು ಪರಿಶೀಲಿಸಿದರು ಹಾಗೂ ವಿದ್ಯಾರ್ಥಿನಿಯರಿಗೆ ಸಿಹಿ ಹಂಚಿದರು. ಬಿಸಿಯೂಟದ ಕೋಣೆಗೆ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಸುಚಿಯಾದ, ರುಚಿಯಾದ ಊಟವನ್ನು ನೀಡುವಂತೆ ಅಡಿಗೆ ಸಿಬ್ಬಂದಿಗೆ ಹೇಳಿ , ಸ್ವಚ್ಚತೆಯನ್ನು ಕಾಪಾಡುವಂತೆ ಸಲಹೆ ನೀಡಿದರು.
ಎಎಸ್ಐ ಪಿ.ವಿ.ವೆಂಕಟರಮಣಪ್ಪ, ಅಡಿಗೆ ಸಹಾಯಕಿ ಚೌಡಮ್ಮ ಇದ್ದರು.