ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ “ಕುಂದಾಪ್ರ ಕನ್ನಡ ಅಕಾಡೆಮಿಗಾಗಿ ಹೋರಾಟ”ದ ಅಂಗವಾಗಿ ಒಂದು ಸಾವಿರ ಪತ್ರಗಳನ್ನು ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಕಳುಹಿಸುವ ಅಭಿಯಾನ ಮಾರ್ಚ್ 1 ರಿಂದ ಆರಂಭಗೊಂಡಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ “ಗಂಗಾವಳಿ” ಸಮ್ಮೇಳನಾಧ್ಯಕ್ಷ ಕೋ. ಶಿವಾನಂದ ಕಾರಂತರು, ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ ಕಾರ್ಯಗತಗೊಳಿಸಲು ಸರ್ವ ಕುಂದ ಕನ್ನಡಿಗರು ಒಗ್ಗಟ್ಟಿನಿಂದ ಸರಕಾರವನ್ನು ಒತ್ತಾಯಿಸಬೇಕು ಎಂದು ಕರೆ ನೀಡಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಕುಂದ ಕನ್ನಡ ಅಕಾಡೆಮಿ ಸ್ಥಾಪನೆಗೆ ಒತ್ತಾಯಿಸಿ 1 ಸಾವಿರ ಪತ್ರ ಕಳುಹಿಸುವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.
ಅಭಿಯಾನ ಚಾಲನೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು. ಪ್ರೊ. ಎ. ವಿ. ನಾವಡ ಡಾ. ಗಾಯತ್ತಿ ನಾವಡ, ಹಿರಿಯ ಸಾಹಿತಿ ದುಂಡಿರಾಜ್, ರೋಟರಿ ಜಿಲ್ಲಾ ಉಪ ರಾಜ್ಯಪಾಲ ಡಾ. ಉಮೇಶ್ ಪುತ್ರನ್, ಚಿತ್ರ ನಿರ್ದೇಶಕ ರಾಜ್ ಬಲ್ಲಾಳ್, ಗಮಕ ಕಲಾ ಪರಿಷತ್ ಕುಂದಾಪುರ ಘಟಕದ ಅಧ್ಯಕ್ಷ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವಿಶ್ವನಾಥ ಕರಬ, ಡಾ. ಶ್ರೀಕಾಂತ್ ಸಿದ್ಧಾಪುರ, ಕವಿ ಗೋಪಾಲ ತ್ರಾಸಿ, ಪ್ರೊ. ವೆಂಕಟೇಶ ಎ. ಪೈ ಮುಂಬೈ, ಡಾ. ಭಾರತಿ ಮರವಂತೆ, ಪ್ರಕಾಶ ಹೆಬ್ಬಾರ್ ನಾಡ, ಪೂರ್ಣಿಮಾ ಭಟ್ ಕಮಲಶಿಲೆ, ಡಾ. ಕಿಶೋರ್ ಶೆಟ್ಟಿ ಹಕ್ಲಾಡಿ, ಪ್ರತಾಪ ಕೊಡಂಚ ಕಂಬದಕೋಣೆ, ಗಿರಿಧರ ಕಾರ್ಕಳ, ಲತಾ ಸಂತೋಷ ಶೆಟ್ಟಿ ಮುದ್ದುಮನೆ, ಮಂಜುನಾಥ ಮಯ್ಯ ಉಪ್ಪುಂದ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ನಿತ್ಯಾನಂದ ಶೆಟ್ಟಿ ಅಂಪಾರು, ಪತ್ರಕರ್ತ ನಾಗೇಂದ್ರ ತ್ರಾಸಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಹಂದ ಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು, ಕುಂಚ ಕಲಾವಿದ ಕೆ. ಕೆ. ರಾಮನ್, ಲೇಖಕ ಪಿ. ಜಯವಂತ ಪೈ, ಶಂಕರ ನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ಸಾಹಿತಿ ಜಾದೂಗಾರ ಓಂ ಗಣೇಶ ಉಪ್ಪುಂದ, ಕಲಾವಿದ ಅಶೋಕ ಶ್ಯಾನುಭಾಗ್, ಬಿ. ಜಿ. ಸೀತಾರಾಮ ಧನ್ಯ ಗೋಪಾಡಿ, ರಮೇಶ ಭಟ್ ಕೋಟೇಶ್ವರ, ಉಮೇಶ ಶೆಟ್ಟಿ ಪ್ರಾಂಶುಪಾಲರು ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ತರಬೇತುದಾರ ಅಶೋಕ ತೆಕ್ಕಟ್ಟೆ, ಖ್ಯಾತ ಕತೆಗಾರ ಮಂಜುನಾಥ ಹಿಲಿಯಾಣ, ಲೇಖಕ ದಿವಾಕರ ಶೆಟ್ಟಿ ಬಸ್ರೂರು, ಲೇಖಕಿ ನಾಗರತ್ನ ಎಂ. ಜಿ. ಬೆಂಗಳೂರು, ಪತ್ರಕರ್ತ ಕಲಾವಿದ ಕೇಶವ ಸಸಿಹಿತ್ಲು, ಉಡುಪಿ ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಶೋಕ್ ಆಚಾರ್ ಪಾಲ್ಗೊಂಡು ಪತ್ರ ಅಭಿಯಾನ ಆರಂಭಕ್ಕೆ ಸ್ಫೂರ್ತಿ ತುಂಬಿದರು.
ಈ ಅಭಿಯಾನ ನಿರಂತರವಾಗಿ ನಡೆಯಲಿದ್ದು ಈಗಾಗಲೇ ಹಲವು ಸಂಘ ಸಂಸ್ಥೆಗಳ ಸದಸ್ಯರು ಈ ಹೋರಾಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತಿಗಳು, ಕುಂದ ಕನ್ನಡಿಗರೆಲ್ಲರೂ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿಗಾಗಿ ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯಬೇಕೆಂದು ಬಿ. ಅಪ್ಪಣ್ಣ ಹೆಗ್ಡೆ ಕರೆ ನೀಡಿದ್ದಾರೆ.
ಸಂಘಟಕರ ಪರವಾಗಿ ಯು. ಎಸ್. ಶೆಣೈ ಅಭಿಯಾನದ ವಿವರ ನೀಡಿದರು.