

ಶ್ರೀನಿವಾಸಪುರ : ರಾಯಲ್ಪಾಡು ಕ್ರಾಸ್ ಸಮೀಪ ಭಾನುವಾರ ಮಧ್ಯರಾತ್ರಿ ಸುಮಾರು 12-15 ಗಂಟೆ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ 40 ಅಡಿ ಆಳದ ಕಂದಕ್ಕೆ ಬಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮೃತರಾಗಿದ್ದು ಉಳಿದ 39 ಜನರು ಗಾಯಗಳಾಗಿವೆ .
ಭಾನುವಾರ ರಾತ್ರಿ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಯಲ್ಪಾಡು ಕ್ರಾಸ್ ಬಳಿ 40 ಅಡಿ ಆಲದ ಕಂದಕ್ಕೆ ಬಿದ್ದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕನಿಗಿರಿ ನಗರದ ಅನಿಲ್ರೆಡ್ಡಿ ( 23 ವರ್ಷ) ಮೃತರಾಗಿದ್ದು, ಅನಿಲ್ರೆಡ್ಡಿ ಇವರು ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ರಾಯಲ್ಪಾಡು ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಡಿಷಿನಲ್ ಎಸ್ಪಿ ರವಿಶಂಕರ್, ಡಿವೈಎಸ್ಪಿ ನಂದಕುಮಾರ್, ಸಿಪಿಐ ಶಿವಕುಮಾರ್, ರಾಯಲ್ಪಾಡು ಪಿಎಸ್ಐ ಯೋಗೇಶ್ ಬೇಟಿ ನೀಡಿ ಘಟನೆಯ ಬಗ್ಗೆ ತನಿಖೆ ನಡೆಸಿದರು.
