ಶ್ರೀನಿವಾಸಪುರ : ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಉಪ್ಪರಪಲ್ಲಿ ಗ್ರಾಮದಲ್ಲಿ ಗುರುವಾರ 87.50 ಲಕ್ಷ ವೆಚ್ಚದಲ್ಲಿನ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದಲ್ಲಿ ಕೊಳವೆಬಾವಿ ಕೊರೆದು , ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಮನೆ ಮನೆಗೆ ಪೈಪ್ ಲೈನ್ ಹಾಕಿಸಿ ನೀರು ಸರಬರಾಜು ಮಾಡುತ್ತೇವೆ ಎಂದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ನಮ್ಮ ಹೆಣ್ಣು ಮಕ್ಕಳು ನೀರಿಗಾಗಿ ಕೊಡ ಹಿಡಿದುಕೊಂಡು ಮನೆಯಿಂದ ಹೊರ ಹೋಗುವಂತಿಲ್ಲ ಎಂದರು.
ಗುತ್ತಿಗೆ ದಾರರು ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಇಲ್ಲದೆ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಮುಗಿಸಿ, ನಿಗದಿತ ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ನೀರು ಹೆಚ್ಚಾಗಿ ಪೋಲ್ ಮಾಡದಂತೆ ಸಾರ್ವಜನಿಕರು ಎಚ್ಚರವಹಸಿ ಸಹಕರಿಸಬೇಕು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ದ ನೀರಿನ ಘಟಕಗಳು ನಿರ್ವಹಿಸುತ್ತಿಲ್ಲ ಎಂಬುದರ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಶುದ್ದನೀರಿನ ಘಟಕಗಳನ್ನು ಗುತ್ತಿಗೆದಾರರು ಕರೆಂಟ್ ಬಿಲ್ಲು ಕಟ್ಟಿರುವುದಲ್ಲವಂತೆ . ಗುತ್ತಿಗೆದಾರರು ಕರೆಂಟು ಬಿಲ್ಲ ಕಟ್ಟಿದ ನಂತರ ಗ್ರಾಮಪಂಚಾಯಿತಿಗಳೇ ಶುದ್ದ ನೀರಿನ ಘಟಕಗಳನ್ನು ನಿರ್ವಹಿಸುತ್ತದೆ ಎಂದರು.
ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ಅಂದಾಜು 600 ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಮುಖೇನ ಮನೆ ಮನೆಗೂ ನಲ್ಲಿಗಳ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ತೂಪಲ್ಲಿ ಆರ್.ನಾರಾಯಣಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತ ನೈರ್ಮಲ್ಯ ಇಲಾಖೆ ಉಪವಿಭಾಗ ಎಇಇ ನಾರಾಯಣಸ್ವಾಮಿ, ತಾಡಿಗೋಳ್ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿಸುರೇಶ್, ನಾಗದೇನಹಳ್ಳಿ ಗ್ರಾ.ಪಂ. ಸದಸ್ಯ ಚೌಡರೆಡ್ಡಿ, ಮುಖಂಡರಾದ ಉಪ್ಪರಪಲ್ಲಿ ಗ್ರಾಮದ ನಾರಾಯಣಸ್ವಾಮಿ, ನರಸಿಂಹ, ಎನ್.ಮಂಜುನಾಥ್, ದೇವರಾಜ್, ಕಶೆಟ್ಟಿಪಲ್ಲಿ ಸುಬ್ಬಾರೆಡ್ಡಿ, ವೆಂಕಟಾಚಲಪತಿ, ಶಂಕರಪ್ಪ, ವೆಂಕಟರೆಡ್ಡಿ, ವೆಂಕಟಲಕ್ಷ್ಮಮ್ಮ, ರಾಯಲ್ಪಾಡಿನ ಎಂ.ಜಿ.ಶ್ರೀನಿವಾಸರೆಡ್ಡಿ, ಗುಂಟಿಪಲ್ಲಿ ಕ್ರಾಸ್ನ ಹನುಮಂತು, ತೂಪಲ್ಲಿ ಮಧು ಹಾಗು ಇತರರು ಇದ್ದರು.