ಶ್ರೀನಿವಾಸಪುರ : ನಮ್ಮ ದೇಶದಲ್ಲಿ ಎಲ್ಐಸಿ ಸಂಸ್ಥೆಯಲ್ಲಿ ಒಂದು ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 18 ಲಕ್ಷ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ದೇಶದಲ್ಲಿನ 27 ಖಾಸಗಿ ಕಂಪನಿಗಳ ಪೈಕಿ ಎಲ್ಐಸಿ ಮಾರುಕಟ್ಟೆ ಷೇರಲ್ಲಿ 69.91% ಪ್ರಸ್ತುತ ಷೇರಗಳನ್ನು ಹೊಂದಿದೆ. ಎಲ್ಐಸಿ ಶಾಶ್ವತ ನಿಧಿ 63ಲಕ್ಷ ಕೋಟಿ ಮೀಸಲು ಇಟ್ಟಿದೆ ಎಂದು ಉಪಶಾಖೆ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು..
ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ಎಲ್ಐಸಿ 68 ನೇ ವರ್ಷದ ಸಪ್ತಾಹ ಪ್ರಯುಕ್ತ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೈಮ್ ನಿಧಿಗೆ ಸಂಬಂದಿಸಿದಂತೆ 68.39% ಈಗಾಗಲೇ ನೀಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಐಸಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಳ್ಳುತ್ತಾ ಬಂದಿದೆ. ಗ್ರಾಹಕರಿಗೆ ರಕ್ಷಣೆ ಕೊಡುತ್ತಿದೆ. ಅಲ್ಲದೆ ಪಾಲಿಸಿದಾರರ ಕುಟುಂಬಕ್ಕೆ ಬೆನ್ನಲುಬಾಗಿ ನಿಂತಿದೆ.
ಎಲ್ಐಸಿಯು ಬಂದು 68 ವರ್ಷಗಳು ಕಳೆದಿದೆ, ಎಲ್ಐಸಿ ಬೆಂಗಳೂರು-2 ಶಾಖೆ ಮಾರ್ಗದರ್ಶನದಲ್ಲಿ ಪಟ್ಟಣದ ಉಪಶಾಖೆಯು ಹತ್ತು ಸಾವಿರ ಪಾಲಿಸಿ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಎಲ್ಲಾ ಪ್ರತಿನಿಧಿಗಳು ಶಾಖೆಯ ಆದೇಶದಂತೆ ಏಜಂಟರು ಹತ್ತು ಸಾವಿರ ಪಾಲಿಸಿ ಮಾಡಿಸಲು ಕ್ರಮವಹಿಸಿ ಯೋಜನೆ ಯಶ್ವಿಸಿಗೊಳಿಸುವಂತೆ ಆದೇಶಿಸಿದರು.
ಇದೇ ಸಮಯದಲ್ಲಿ ಏಜೆಂಟರ್ಗಳಿಗೆ ನಡೆದ ಕ್ವಿಜ್ನಲ್ಲಿ ನಡೆಸಲಾಯಿತು. ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಲ್ಐಸಿ ಎಇಒ ರವಿಶಂಕರ್ , ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್, ಲಿಖಿತ್ಕುಮಾರ್ ಹಾಗು ಪ್ರತಿನಿದಿಗಳು ಇದ್ದರು.