ಕುಂದಾಪುರ, ಅ.9: ಬಹಳ ಹಳೆಯ ಬ್ಯಾಂಕ್ ಆದ ಎಮ್.ಸಿ.ಸಿ.ಬ್ಯಾಂಕ್ ಲಿ. ತನ್ನ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಕುಂದಾಪುರ ಶಾಖೆಯ ಗ್ರಾಹಕರ ಸಮಾವೇಶವನ್ನು ಅ.9 ರಂದು ಸೈಮನ್ ಕಂಫರ್ಟ್ ಸಭಾಂಗಣದಲ್ಲಿ ಎರ್ಪಡಿಸಿತ್ತು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅ|ವಂ|ಸ್ಟ್ಯಾನಿ ತಾವ್ರೊ ದೀಪ ಬೆಳಗಿಸಿ ಉದ್ಘಾಟಿಸಿ “ಎಮ್.ಸಿ.ಸಿ.ಬ್ಯಾಂಕ್ ಲಿ.ಗೆ ಬಹಳ ದೊಡ್ಡ ಚರಿತ್ರೆ ಇದೆ. ಇದರ ಸೇವೆ ತುಂಬ ಅಮೋಘವಾದುದು, ಬೇರೆ ಬ್ಯಾಂಕುಗಳಲ್ಲಿ ಕೌಂಟರ್ಗಳು ಇರುತ್ತವೆ, ಉದ್ಯೋಗಿಗಳು ಇರುತ್ತಾರೆ, ಆದರೆ ಅಲ್ಲಿ ಯಾವ ಸೇವೆ ಎಲ್ಲಿ ಸಿಗುತ್ತದೆ ಎಂದು ಗ್ರಾಹಕರಿಗೆ ತಿಳಿಯುವುದಿಲ್ಲ, ಗ್ರಾಹಕರು ಅಸಹಾಯಕರಾಗುತ್ತಾರೆ, ಉದ್ಯೋಗಿಗಳು ಗ್ರಾಹಕರ ಕಡೆ ಹೆಚ್ಚು ಗಮನ ಕೊಡುವುದಿಲ್ಲ, ಆದರೆ ಎಮ್.ಸಿ.ಸಿ.ಬ್ಯಾಂಕ್ ಲಿ. ನಗುಮುಖದಿಂದ ಸೇವೆಗೆ ಮುಂದಾಗುತ್ತಾರೆ, ಅನೇಕ ಸಂದರ್ಭಗಳಲ್ಲಿ ಮನೆ ಬಾಗಿಲಿಗೆ ಬಂದು ಸೇವೆ ನೀಡುವುದು ಈ ಬ್ಯಾಂಕಿನ ವಿಶೇಷೆತೆಯಾಗಿದೆ” ಎಂದು ಪ್ರಂಶಸಿದರು.
ಮುಖ್ಯ ಅಥಿತಿ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷರಾದ ವಿಜಯ್ ಎಸ್. ಪೂಜಾರಿ ಎಮ್.ಸಿ.ಸಿ.ಬ್ಯಾಂಕ್ ಲಿಮಿಟೆಡಿನ ಸೇವೆಯ ಬಗ್ಗೆ ಶ್ಲಾಘಿಸಿದರು. ಅತಿಥಿಗಳಾದ ವಿಲ್ಫ್ರೆಡ್ ಡಿಸೋಜಾ, ಹುಸೈನ್ ಹೈಕಾಡಿ, ಪ್ರಭು ಕೆನಡಿ ಕುಂದಾಪುರ ಪುರಸಭೆ ಸದಸ್ಯೆ ರೋಹಿಣಿ ಉದಯಕುಮಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಎಮ್.ಸಿ.ಸಿ.ಬ್ಯಾಂಕ್ ಲಿ.ನ ಅಧ್ಯಕ್ಷರಾದ ಅನಿಲ್ ಲೋಬೊ ‘ನಮಗೆ ಗ್ರಾಹಕರೆ ದೇವರು, ನೀವು ಸಕಾಲಕ್ಕೆ ಸಾಲದ ಮರುಪಾವತಿಯನ್ನು ಮಾಡಿದ್ದರಿಂದ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿ ಲಾಭ ಗಳಿಸಿದೆ, ರಾಶ್ಠ್ರೀಕರಣಗಳ ಬ್ಯಾಂಕುಗಳಂತೆ ಎಲ್ಲಾ ಸೇವೆಗಳು ನಮ್ಮ ಬ್ಯಾಂಕಿನಲ್ಲಿ ಲಭ್ಯವಿದೆ, ಕಾಲ ಕಾಲಕ್ಕೆ ಗ್ರಾಹಕರ ಸೇವೆಗಾಗಿ ನಮ್ಮ ಉದ್ಯೋಗಿಗಳನ್ನು ತರಬೇತಿ ನೀಡುತಿದ್ದೇವೆ, ನಮ್ಮ ಉದ್ಯೋಗಿಗಳು ನಗುಮುಖದ ಜೊತೆ ಉತ್ತಮ ಸೇವೆ ನೀಡುತ್ತಾರೆಂದು ಗ್ರಾಹಕರ ಅನುಭವವೇ ಹೇಳುತ್ತದೆ, ಕುಂದಾಪುರ ಶಾಖೆಯ ವ್ಯವಸ್ಥಾಪಕರು ಸೇವೆಗಾಗಿ ಹೆಸರು ಗಳಿಸಿದ್ದಾರೆ ಎಂದು ಗ್ರಾಹಕರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಈ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿದವರಿಗೆ, ಹಿರಿಯ ಗ್ರಾಹಕರಿಗೆ ಹಾಗೂ ಉತ್ತಮ ಶಿಕ್ಷಣ ಪಡೆದ ಗ್ರಾಹಕರ ಮಕ್ಕಳನ್ನು ಗೌರವಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ಪ್ರಧಾನ ವ್ಯವಸ್ಥಾಪಕ ಸುನೀಲ್ ಐವನ್ ಮಿನೇಜೆಸ್, ನಿರ್ದೇಶಕರಾದ ಡಾ|ಜೆರಾಲ್ಡ್ ಪಿಂಟೊ, ಸುಶಾಂತ್ ಸಲ್ದಾನ್ಹಾ, ಫೆಲಿಕ್ಸ್ ಡಿಕ್ರೂಜ್, ಉಪ ವ್ಯವಸ್ಥಾಪಕರದಾದ ರಾಜ್ ಎಫ್. ಮಿನೇಜೆಸ್ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ಶಾಖಾ ನಿರ್ದೇಶಕರಾದ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಮಾಲಿನಿ ಕೆ., ಜ್ಯೋತಿ ಬರೆಟ್ಟೊ ಮತ್ತು ಜೋನಿಟಾ ರೆಬೆಲ್ಲೊ ನಿರೂಪಿಸಿದರು. ಕುಂದಾಪುರ ಶಾಖಾ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ವಂದಿಸಿದರು.