

ಕುಂದಾಪುರ : ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಹಾಗೂ ಎಸ್.ಜಿ.ಜಿ.ಜಿ.ಡಿ ಚಾರಿಟೆಬಲ್ ಟ್ರಸ್ಟ್ ಕೋಟೇಶ್ವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಅಂಗವಾಗಿ ನ.12 ರಂದು ರವಿವಾರ ಮುಂಜಾನೆ 6:30 ರಿಂದ ಭಕ್ತಿ ಸಂಗೀತ ಲಹರಿ ಕಾರ್ಯಕ್ರಮ ಕುಂದಾಪುರದಲ್ಲಿ ಏರ್ಪಡಿಸಲಾಗಿದೆ.
ಕುಂದಾಪುರ ವಿಠಲವಾಡಿಯ ಗೋವಿಂದ ನಗರದ ಡೌನ್ ಟೌನ್ ರೆಸಿಡೆನ್ಸಿಯಲ್ ಲೇಔಟ್‍ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ಸಂಗೀತಗಾರ ಸಿದ್ಧಾರ್ಥ ಬೆಳ್ಮಣ್ಣು ಹಾಡಲಿದ್ದು, ತಬಲಾದಲ್ಲಿ ವಿಘ್ನೇಶ್ ಕಾಮತ್ ಕೋಟೇಶ್ವರ, ಹಾರ್ಮೋನಿಯಂನಲ್ಲಿ ಪ್ರಸಾದ ಕಾಮತ್ ಸಹಕರಿಸಲಿದ್ದಾರೆ. ನಿರಂತರ ಎರಡೂ ಗಂಟೆಗೂ ಹೆಚ್ಚು ಕಾಲ ಶಾಸ್ತ್ರೀಯ ಭಕ್ತಿ, ಭಾವಗೀತೆಗಳನ್ನು ಕೇಳುವ ಅವಕಾಶ ಸಂಗೀತಾಸಕ್ತರಿಗೆ ಲಭ್ಯವಾಗಲಿದೆ.
ಈ ವಿಶೇಷ ದೀಪಾವಳಿ ಕಾರ್ಯಕ್ರಮಕ್ಕೆ ಊರ, ಪರವೂರ ಶ್ರೋತವರ್ಗ ಉತ್ಸಾಹದಿಂದ ಭಾಗವಹಿಸಬೇಕೆಂದು ಸಂಘಟಕರು ಆಹ್ವಾನಿಸಿದ್ದಾರೆ.