ಶ್ರೀನಿವಾಸಪುರ : 29 ಮತ್ತು 30 ಕ್ಕೆ ಸಿದ್ಧತಾ ಕಾರ್ಯ ಮುಗಿಸಿ, 31ಕ್ಕೆ ತಳಿರು ತೋರಣಗಳೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಮಾಡಬೇಕು . ನಲಿಕಲಿಗೆ ವಿದ್ಯಾ ಪ್ರವೇಶ, ಮತ್ತು ಸೇತುಬಂಧ 4 ರಿಂದ 10 ರ ವರೆಗೆ ಸೇತು ಬಂದ ಕಾರ್ಯಕ್ರಮವನ್ನು ಸುತ್ತೋಲೆಯಂತೆ ಕ್ರಮ ಕೈಗೊಂಡು ಎಸ್ಎಪಿ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳುವುದು ಎಂದು ಬಿಆರ್ಸಿ ಕೆ.ಸಿ.ವಸಂತಾ ತಿಳಿಸಿದರು.
ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಬಿಆರ್ಪಿ ಮತ್ತು ಕ್ಲಸ್ಟರ್ಗಳ ಸಿಆರ್ಪಿಗಳ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆಯು 2024-25 ನೇ ಸಾಲನ್ನು ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಘೋಷಿಸಿದೆ. ಶೈಕ್ಷಣಿಕ ಮಾರ್ಗದರ್ಶಿ 24- 25 ನ್ನು ಪ್ರತಿ ಶಾಲೆಯಲ್ಲಿ ಇಡುವುದು.ಹಾಗೆ ಓದಿ ಅದರಂತೆ ಅನುಪಾಲನೆ ಮಾಡುವುದು. ಶಾಲಾ ಪ್ರಾರಂಭಕ್ಕೂ ಮುನ್ನಾ ದಿನ ಸ್ವಚ್ಛತಾ ಕಾರ್ಯದ ಅಂಗವಾಗಿ ಶಾಲಾವರಣ,ಕೊಠಡಿ, ಮೇಲ್ಚಾವಣಿ, ಸಂಪು,ಟ್ಯಾಂಕು, ಅಡುಗೆಮನೆ, ಶೌಚಾಲಯ, ಕುಡಿಯುವ ನೀರು, ಹೀಗೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.
3 ರೀತಿಯ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಎಸ್ಡಿಪಿ ಪಂಚಾಂಗ, ಶಿಕ್ಷಕರ ವೈಯಕ್ತಿಕ ದಾಖಲೆಗಳು ಹೀಗೆ ಆಡಳಿತಾತ್ಮಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು. ಪಠ್ಯ ಪುಸ್ತಕ,ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಿಸಿ, ಸ್ಯಾಟ್ಸ್ ನಲ್ಲಿ ಅಪೆÇ್ಲೀಡ್ ಮಾಡುವುದು . ದಾಖಲಾತಿ ಹೆಚ್ಚಳಕ್ಕೆ, ವಿವಿಧ ಆಕರ್ಷಣ ರೀತಿಯಲ್ಲಿದಾಖಲಾತಿ ಆಂದೋಲನವನ್ನು ಕೈಗೊಳ್ಳುವುದು. ಮಕ್ಕಳ ಸುರಕ್ಷತೆಗೆ ಸಂಪು,ವಿದ್ಯುತ್ ತಂತಿ, ಮೊದಲ ಅಂತಸ್ತಿನ ಕೊಠಡಿಗಳಿದ್ದಲ್ಲಿ ಮೆಸ್ ವ್ಯವಸ್ಥೆ ಮಾಡಿ, ಎಚ್ಚರಿಕೆ ವಹಿಸುವುದು.
ಎಸ್ಡಿಎಂಸಿ, ಪೆÇೀಷಕರು ಗ್ರಾಮಸ್ಥರೊಂದಿಗೆ ಸಮೀಕ್ಷೆ ನಡೆಸಿ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದು.
ಹಿಂದಿನ ಸಾಲಿನ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಿರುವುದು. ಹಳೆ ವಿದ್ಯಾರ್ಥಿಗಳ ಸಂಘ ಕಡ್ಡಾಯವಾಗಿ ರಚನೆ ಮಾಡಿರುವ ಮಾಹಿತಿಯನ್ನು ಕಚೇರಿಗೆ ನೀಡುವುದು ಎಂದು ಮಾಹಿತಿ ನೀಡಿದರು.
ಈ ಪೂರ್ವ ಬಾವಿ ಸಭೆಗೆ ಬಿಆರ್ಪಿ, ಸಿಆರ್ಪಿಗಳಿಗೆ ಹೂಗುಚ್ಚುಗಳನ್ನು ನೀಡುವುದರ ಮೂಲಕ ಸ್ವಾಗತವನ್ನು ಕೋರಲಾಯಿತು. ತಾಲೂಕು ಪಠ್ಯ ವಿತರಣಾ ನೋಡಲ್ ಅಧಿಕಾರಿ ಎಲ್.ವಿ.ಲಕ್ಷ್ಮಿನಾರಾಯಣ, ಉರ್ದು ಬಾಷಾ ಇಸಿಒ ಸಾಧಿಕ್ಬಾಷ, ಬಿಆರ್ಪಿಗಳಾದ ಕೆ.ಎಸ್.ನಾಗರಾಜ್, ವೆಂಕಟಾಚಲಪತಿ, ಬಿಐಆರ್ಟಿಇ ಅಧಿಕಾರಿ ಜಿ.ವಿ.ಚಂದ್ರಪ್ಪ ಹಾಗು ತಾಲೂಕಿನ ಕ್ಷೇತ್ರ ಸಂನ್ಮೂಲ ವ್ಯಕ್ತಿಗಳು ಹಾಜರಿದ್ದರು.