

ಕುಂದಾಪುರ; ಮಹಾ ಶಿವರಾತ್ರಿಯ ಪ್ರಯುಕ್ತ ಕೋಟೇಶ್ವರ ಕೋಡಿ ಬೀಚ್ನಲ್ಲಿ ಬಿಲ್ವಪತ್ರೆ, ರುದ್ರಾಕ್ಷಿಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳುಶಿಲ್ಪಾಕೃತಿಯು ಕುಂದಾಪುರದ ತ್ರಿವರ್ಣ ಕಲಾ ತರಗತಿಯ 23 ವಿದ್ಯಾರ್ಥಿಯರಿಂದ ರಚಿಸಲ್ಪಟ್ಟಿದ್ದು, ಸಮಸ್ತ ಜನತೆಗೆ ಕಲಾಕೃತಿಯ ಮೂಲಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಲಾಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾರೊಂದಿಗೆ ಸಂತೋಷ್ ಭಟ್ ಹಾಲಾಡಿ ಮತ್ತು ವಿದ್ಯಾರಾಣಿಯವರು ಮಾರ್ಗದರ್ಶನಗೈದಿದ್ದರು.
ಕಲಾ ವಿದ್ಯಾರ್ಥಿಯರಾದ ಅದ್ವಿತ್ ಕುಮಾರ್, ಆರಾಂಶ್ ಪೂಜಾರಿ, ಶರಣ್ ಆರ್. ಕುಮಾರ್, ಅಯಾಂತಿಕ, ಕೃತಿ ದೇವಾಡಿಗ, ಸುಯೋಗ್ ಶೆಟ್ಟಿ, ಆಶಿತ್ ಸಂಜಯ್ ಕುಮಾರ್, ನಿಹಾಲ್ ಜಿ, ಶೌರ್ಯ ಎಸ್. ಪಿ., ಸಾನಿಧ್ಯ ಸಂತೋಷ್ ನಾಯ್ಕ್, ರಿಶು ಜೆ. ಶೆಟ್ಟಿ, ಸಾನ್ವಿ ಎಲ್, ಯಕ್ಷತ್ ಶೆಟ್ಟಿ, ಸ್ಕಂದ, ನಿಶ್ಚಿತಾ ವಿ. ಹೆಚ್, ಅಮೃತ ಶೆಟ್ಟಿ, ಸನ್ನಿಧಿ ಜಿ, ಲಕ್ಶ್ಯಾ ಆರ್, ಅದ್ವಿತ್ ಎಸ್, ಅಯಂತಿಕ ಆರ್. ಪೂಜಾರಿ, ಪ್ರಣೀತ್ ಶೆಟ್ಟಿ, ದೃಶಿಕಾ ಪಿ. ಶೆಟ್ಟಿ, ಪ್ರಾಪ್ತಿ ಪಿ. ಶೆಟ್ಟಿ,ಆರ್ಯಾ ಬಿ. ಭಾಗವಹಿಸಿದ್ದರು.


