ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಇತ್ತೀಚೆಗೆ ಹೈದರಾಬಾದಿನಲ್ಲಿ ಜಿ.ಎಸ್.ಕೆ. ಗೋಜೂ- ರೈ ಡೂ ಶಾಲೆಯಲ್ಲಿ ನಡೆದಿರುವ ಅಂತರ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಶ್ರೀನಿವಾಸಪುರದ ಒಕಿನೋವಾ ಗೋಜೂ-ರೈ ಕರಾಟೆ ಶಾಲೆಯ ಸ್ಪರ್ದಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ ಶ್ರೀ ವೇಣು ವಿದ್ಯಾ ಸಂಸ್ಥೆಯ 10ನೇ ತರಗತಿಯ ನಮೀಷ್ ಹೆಚ್.ಎನ್. ಬಿ. ವಿಭಾಗ ಪ್ರಥಮ ಸ್ಥಾನ ಹಾಗೂ (ಐ.ಸಿ.ಎಸ್.ಇ) ವಿಭಾಗದ ವಿದ್ಯಾರ್ಥಿನಿ
6ನೇ ತರಗತಿಯ ತನುಶ್ರೀ ಬಿ.ವಿ. ಪ್ರಥಮ ಸ್ಥಾನ ಗಳಿಸಿದ್ದಾರೆ.
ಶ್ರೀನಿವಾಸಪುರದ ಒಕಿನೋವಾ ಗೋಜೂ-ರೈ ಕರಾಟೆ ಶಾಲೆಯ ಸ್ಪರ್ದಾರ್ಥಿಗಳು ಭಾಗವಹಿಸಿ ವಿಜೇತರಾಗಿ ಹಾಗೂ ಮೆಡಲ್ ಮತ್ತು ಪ್ರಶಸ್ತಿ ಪತ್ರಗಳ ಜೊತೆಗೆ ಮೆಡೆಲ್,ಟ್ರೋಫಿಯನ್ನು ಪಡೆದಿರುತ್ತಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಬಿ. ಗೋಪಾಲಗೌಡ ಹಾಗೂ ಕರ್ನಾಟಕ ಸರ್ಕಾರಿ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬೈರೇಗೌಡರವರು ಉಪಸ್ಥಿತರಿದ್ದು, ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಮಕ್ಕಳು ಭಾಗವಹಿಸಬೇಕೆಂದು ತಿಳಿಸಿದರು.ಕರಾಟೆ ತರಬೇತುದಾರ ಗ್ರಾಂಡ್ ಮಾಸ್ಟರ್ ಹೆಚ್. ಎನ್. ನರಸಿಂಹಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,
ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂತೊಷದಿಂದಿರಲು ಕ್ರೀಡೆಗಳಲ್ಲಿ ಹಾಗೂ ಕರಾಟೆಯನ್ನು ಅರಿಯುವುದು ಉತ್ತಮವೆಂದು ತಿಳಿಸುತ್ತಾ, ಮುಖ್ಯವಾಗಿ ಹೆಣ್ಣು ಮಕ್ಕಳು ಕರಾಟೆ ಅರಿಯಿವುದು ಉತ್ತಮವೆಂದು ಹೇಳಿದರು.