ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ವಿಧ್ಯಾರ್ಥಿಗಳು ಓದುವ ಸಂದರ್ಭದಲ್ಲಿ ಎಷ್ಟೇ ಅಡಚಣೆ, ಕಷ್ಟಗಳು ಬಂದರೂ ವಿಮುಖರಾಗದೆ ತಮ್ಮ ಗುರಿಯನ್ನು ಮುಟ್ಟಿ ಇತರರಿಗೆ ಮಾದರಿಯಾಗಬೇಕು ಎಂದು ಕಾರವಾರ ಜಿಲ್ಲಾ ಗ್ರಾಹಕ ಆಯೋಗದ ನ್ಯಾಯಾಧೀಶರಾದ ಕೆ.ವಿ.ಸುರೇಂದ್ರಕುಮಾರ್ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಬಂಗಾರಪೇಟೆ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಅಂಬೇಡ್ಕರ್ ನಗರದ ವಿನಾಯಕ ಮಿತ್ರ ಬಳಗದಿಂದ ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಪರಿಣಾಮಕಾರವಾಗಿ ಬಳಸಿಕೊಂಡು ಸಮಾಜದ ಏಳಿಗೆಗಾಗಿ ಚಿಕ್ಕವಯಸ್ಸಿನಿಂದಲೇ ಮುನ್ನುಡಿ ಬರೆಯಬೇಕು. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕಾಗಿರುವುದು ಹಾಗೂ ನೀಡಬೇಕಾಗಿರುವುದು ಪೆÇೀಷಕರ, ವಿದ್ಯಾರ್ಥಿಗಳ ಆದ್ಯ ಕರ್ತವ್ಯವೆಂದರು.
ಸಮಾಜದಲ್ಲಿ ಅಂಕುಡೊಂಕುಗಳು ಸರ್ವೇಸಾಮಾನ್ಯ ಅವನ್ನು ತಿದ್ದುವ ಮತ್ತು ಸರಿಪಡಿಸುವ ಶಕ್ತಿಯನ್ನುಗಳಿಸಿಕೊಳ್ಳಲು ವಿದ್ಯೆ ಒಂದರಿಂದಲೇ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗದೆ ವಿದ್ಯೆ ಪಡೆಯುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ನೀವು ಚೆನ್ನಾಗಿ ಓದಿದಷ್ಟು ನಿಮಗೆ ಪೆÇ್ರೀತ್ಸಾಹಿಸುವ ಹಾಗೂ ಸಹಾಯ ಮಾಡುವ ಕೈಗಳು ಈ ಕಾಲದಲ್ಲಿ ಹೆಚ್ಚಾಗಿ ಸಿಗುತ್ತದೆ ಅದನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ತಂದೆ-ತಾಯಿ ಹಾಗೂ ದೇಶದ ಹಿರಿಮೆಯನ್ನು ಹೆಚ್ಚಿಸಿ ಎಂದು ನುಡಿದರು.
ನಗರಸಭೆ ಸದಸ್ಯೆ ಅಪೂರ್ವ ರಾಮಚಂದ್ರ ಮಾತನಾಡಿ, ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ನಮ್ಮ ವಾರ್ಡಿನ ಯುವಪಡೆ ವಿನಾಯಕ ಮಿತ್ರ ಬಳಗದಿಂದ 30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸುತ್ತಿರುವುದು ಶ್ಲಾಘನೀಯವೆಂದರು.
ಮುಂದಿನ ದಿನಗಳಲ್ಲಿ ಪಿಯುಸಿ, ಪದವಿ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತದೆ. ವಿದ್ಯೆ ಕಲಿತರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಲು ಅಧಿಕಾರ ಪಡೆಯಲು ಹಾಗೂ ನೊಂದವರಿಗೆ ನ್ಯಾಯ ಮತ್ತು ಹಕ್ಕನ್ನು ದೊರಕಿಸಲು ಸಾಧ್ಯವಾಗುತ್ತದೆ. ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯಲೇಬೇಕು ಅದು ಅವರ ಕರ್ತವ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ರಮೇಶ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಮುಖಂಡ ರಾಮಚಂದ್ರ, ಸುರೇಶ್, ನ್ಯಾಯಾಂಗ ಇಲಾಖೆಯ ಎನ್.ಮಂಜುನಾಥ್ ಮುನಿಯಪ್ಪ, ಸಿ.ಎಂ.ವೆಂಕಟೇಶ್ ವಿನಾಯಕ ಮಿತ್ರ ಬಳಗದ ಪದಾಧಿಕಾರಿಗಳಾದ ನವೀನ್, ಲೋಕೇಶ್, ಬಾಬು, ಬಿ.ಕಿರಣ್, ಮನು, ಪ್ರಭು, ರಾಜು, ಎಲ್.ಬಾಬು, ನಂದ ಮುಂತಾದವರು ಹಾಜರಿದ್ದರು.