ಕೇರಳ:ಜುಲಾಯ್ 30, ಇಂದು ಬೆಳಿಗ್ಗೆ ನಡೆದ ಭೀಕರ ವಯನಾಡಿನಲ್ಲಿ ಅತೀ ಮಳೆಯಿಂದಾಗಿ, ಗುಡ್ಡ ಕುಸಿತ ಅರಿಣಾವಾಗಿ ಇಷ್ಟರ ವರೆಗೆ ಸುಮಾರು 74 ಮೃತದೇಹಗಳು ಗುಡ್ಡ ಕುಸಿತದ ನಂತರದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಗಂಟೆ-ಗಂಟೆಗೂ ಮರಣದ ಸಂಖ್ಯೆಗಳು ಹೆಚ್ಚುತ್ತಾಗಲಿದ್ದು, ಇನ್ನೂ ಹೆಚ್ಚು ಸಾವನ್ನಪ್ಪಿರುವ ಶಂಕೆ ಇದೆ.
ಚಾಲಿಯಾರ್ ನದಿಯಲ್ಲಿ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಮಂದಿ ಘಟನೆ ಸಿಲುಕಿ ಗಾಯಗೊಂಡಿದ್ದಾರೆ. ಇದೀಗ ಸಮೀಪದ ಮದ್ರಸ ಮತ್ತುಮಸೀದಿಗಳನ್ನು ಆಸ್ಪತ್ರೆಗಳಾಗಿ ಬದಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿಯಂತೆ ಇನ್ನೂ ಹಲವು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ NDRF ನೇತೃತದಲ್ಲಿ ಜಾರಿಯಲ್ಲಿದೆ.
ಕರ್ನಾಟದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಘಟನೆಯ ಕುರಿತು ದುಃಖ ತೋರ್ಪಡಿಸಿ ತಮ್ಮಿಂದಾದ ಸಹಾಯ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಯನಾಡಿನ ಜನರೊಂದಿಗೆ ಭಾರತ ಸ್ಪಂದಿಸುತ್ತಿದ್ದು ಅವರಿಗಾಗಿ ಪ್ರಾರ್ಥಿಸುತ್ತಿದೆ.