JANANUDI.COM NETWOEK
ಕಳೆದ ವರ್ಷ 2021ರಲ್ಲಿ ರೈಲಿನಲ್ಲಿ 11,900ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಿದೆ ಎಂದು ರೈಲ್ವೇ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಇಲ್ಲದೆ ಪ್ರಯಾಣಿಸುತ್ತಿದ್ದ 25,000 ಮಂದಿಗೆ ದಂಡವನ್ನು ವಿಧಿಸಿದೆ. ಇದರ ಜೊತೆ ಮಾನವ ಕಳ್ಳಸಾಗಾಣೆ ಮಾಡುತ್ತಿದ್ದ ಬರೊಬ್ಬರಿ 11,900ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಿದೆ ಎಂದು ರೈಲ್ವೇ ಇಲಾಖೆ ಹೇಳಿಕೊಂಡಿದೆ.
ರೈಲ್ವೆ ಪೊಲೀಸ್ ಫೋರ್ಸ್ (ಆರ್ ಪಿ ಎಫ್) ಪೊಲೀಸರು ಒಟ್ಟು 601 ಜನರ ಪ್ರಾಣ ರಕ್ಷಣೆಯನ್ನು ಮಾಡಿದ್ದಾರೆ. ಇವುಗಳಲ್ಲಿ ಆತ್ಮಹತ್ಯೆ ಯತ್ನ ಮತ್ತು ಅವಘಢ ಸಂಬವಿತ ಮಕ್ಕಳು ಸೇರಿವೆ ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಕ್ಕಿದ್ದ 630 ಜನರನ್ನು ರಕ್ಷಿಸಿ, ಮನೆಗಳಿಗೆ ಕಳುಹಿಸಿಕೊಡಲಾಗಿದೆ.
ಪೋಷಕರಿಂದ ವಿವಿಧ ಕಾರಣಗಳಿಂದ ತಪ್ಪಿಸಿಕೊಂಡ ಮಕ್ಕಳು, ಸಂಬಂಧಿಕರಿಂದ ದೂರ ತಳ್ಳಲಾದ ಮಕ್ಕಳು, ಕಳ್ಳರ ಕೈಗೆ ಸಿಕ್ಕ ಮಕ್ಕಳು ಸೇರಿದಂತೆ ಒಟ್ಟಾರೆ 11,900 ಮಕ್ಕಳನ್ನು ಕಳೆದ ಒಂದೇ ವರ್ಷದಲ್ಲಿ (ಆರ್ ಪಿ ಎಫ್) ರಕ್ಷಣೆ ಮಾಡಿ ಬಹುತೇಕ ಮಕ್ಕಳನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದು, ಉಳಿದ ಮಕ್ಕಳನ್ನು ಪೋಷಣಾ ಕೇಂದ್ರಗಳಿಗೆ, ಅನಾಥಾಶ್ರಮಗಳಿಗೆ ಒಪ್ಪಿಸಿ ಸೂಕ್ತ ನಿಗಾ ಇರಿಸಲಾಗಿದೆ ಎಂದು ರೈಲ್ವೇ ಇಲಾಖೆ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಕೆಲವು ಸಲ ಪ್ರಯಾಣದ ವೇಳೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಪೋಷಕರ ಕಣ್ತಪ್ಪಿ, ಅಥವಾ ಬೆಜವಾಬ್ದಾರಿಗಳಿಂದ, ಮಕ್ಕಳು ಕಳೆದುಕೊಂಡಾಗ ಅನಾಥತರಾಗುತ್ತಾರೆ, ಅಂತವರ ಜೀವನ ಕಟು ನರಕ ಯಾತನೆಯದಾಗುತ್ತೆ, ಎಷ್ಟೊ ಮಕ್ಕಳನ್ನು ಭೀಕ್ಷುಕರನ್ನಾಗಿ ಮಾಡುತ್ತಾರೆ, ಕೆಲವರನ್ನು ಮಾರಿ ಬಿಡುತ್ತಾರೆ, ಹೆಣ್ಣುಗಳಾದರೆ, ವೇಶ್ಯಾ ಜಾಲಕ್ಕೆ ತಳ್ಳುತ್ತಾರೆ ಅಥವ ಮಾರುತ್ತಾರೆ. ಅದರಿಂದ ಪೋಷಕರು ತಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇರಿಸಬೇಕು.