ಶ್ರೀನಿವಾಸಪುರ : ನರೇಗಾ ಯೋಜನೆಯು ಗ್ರಾಮಗಳ ಅಭಿವೃದ್ದಿಗೆ ಸಹಕಾರಿಯಾಗಿದ್ದು, ಗ್ರಾಮಗಳಲ್ಲಿನ ನಾಗರೀಕರು ಗ್ರಾಮಗಳ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಜಿ.ಪಂ ಸಿಇಒ ಡಾ.ಪ್ರವೀನ್ಕುಮಾರ್ ಪಿ.ಬಾಗೇವಾಡಿ ಎಂದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಗೆ ಬುಧವಾರ ಬೇಟಿ ನೀಡಿ ದಾಖಲೆ ಪರಿಶೀಲಿಸಿ ಮಾತನಾಡಿದರು.
ಗ್ರಾಮಸಭೆ, ವಾರ್ಡ್ಸಭೆಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮಗಳ ಸಮಸ್ಯೆಗಳನ್ನು ಚರ್ಚಿಸಿ ಆಯಾ ಗ್ರಾಮಗಳಿಗೆ ಸಂಬಂದಿಸಿದಂತೆ ಸಮಾಲೋಚಿಸಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬೀದಿ ದೀಪಗಳು, ಹಾಗೆಯೇ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಬಾಕಿ ಇರುವಕಾಮಗಾರಿಯ ಪಟ್ಟಿಯನ್ನು ಮಾಡಬೇಕು. ಅಲ್ಲದೆ ಕೊಳಾಯಿಗಳ ಪೈಪ್ಲೈನ್ ಅಳವಡಿಕೆ ಮಾಡಬೇಕು.
ಇ-ಸ್ವತ್ತುಖಾತೆಗೆ ಅರ್ಜಿಗಳು ಬಂದರೆ ಸಕಾಲಕ್ಕೆ ಸಾರ್ವಜನಿಕರಿಗೆತೊಂದರೆಯಾಗದಂತೆ ಪರಿಹರಿಸಿ ಎಂದುಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಇದೇ ಸಮಯದಲ್ಲಿ ಜೆ.ತಿಮ್ಮಸಂದ್ರ ಗ್ರಾಮಪಂಚಾಯಿತಿ ಕಚೇರಿಯಲ್ಲಿ ತರಬೇತಿ ಕಾರ್ಯಾಗಾರಕ್ಕೆ ಬೇಟಿ ನೀಡಿದರು. ಆಲವಾಟ ಶಾಲೆಗೆ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದರು. ಶಾಲೆಯ ನಿರ್ಮಣವಾಗುತ್ತಿರುವ ಕಾಂಪೌಂಡ್ ಶೌಚಾಲಯ ಕಾಮಗಾರಿಯನ್ನು ಪರಿಶೀಲಿಸಿದರು. ಹಾಗು ಗ್ರಾಮಪಂಚಾಯಿತಿಯಲ್ಲಿನ ನರೇಗಾ ಕಾಮಗಾರಿಗಳ ದಾಖಲೆಗಳನ್ನು ಹಾಗು ಇತರೆ ದಾಖಾಲೆಗಳನ್ನು ಪರಿಶೀಲಿಸಿದರು. ಕಲ್ಲೂರು ಗ್ರಾಮದಲ್ಲಿನ ಜೆಜೆಎಂ ಕಾಮಗಾರಿಯನ್ನು ಪರಿಶೀಲಿಸಿದರು.
ಇಒ ಎಸ್.ಶಿವಕುಮಾರಿ , ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಬಿಆರ್ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಸುಲೋಚನ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ, ಇಸಿಒ ಸುಬ್ರಮಣಿ, ಪಿಡಿಒ ವಿನೋಧ, ಗ್ರಾ.ಪಂ ಸದಸ್ಯ ನಾಗೇಶ್ರೆಡ್ಡಿ, ಜೆಜೆಎಂ ಅಭಿಯಂತರ ಗೌತಮ್ ಇದ್ದರು.