ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಮರ : ಸರ್ಕಾರ ಯಾವುದೇ ಇರಲಿ ಜನ ಹಿತ ಕಾಪಾಡುವುದು ಸರ್ಕಾರಗಳ ಕರ್ತವ್ಯ ಹಾದಿ ಬೀದಿಗಳಲ್ಲಿ ಮಾತನಾಡಿಕೊಳ್ಳುವುದು ಅವಶ್ಯಕತೆ ಇಲ್ಲ . ಇತ್ತೀಚಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ರಾಜಕಾರಣಿಗಳು ಬಳಸುವ ಭಾಷೆ ವೈಯುಕ್ತಿಕ ನೆಲಗಟ್ಟೆಯಲ್ಲಿ ಮಾಡುವ ಟೀಕೆಗಳು ರಾಜಕೀಯ ಸತ್ವವನ್ನು ಕಡಿಮೆ ಮಾಡುತ್ತಿವೆ . ಇದರಿಂದ ನನಗೆ ಬೇಸರ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ || ವೈ.ಎ. ನಾರಾಯಣಸ್ವಾಮಿ ತಿಳಿಸಿದರು .
ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯ ಕೆ.ಸಿ. ವ್ಯಾಲಿ ಮತ್ತು ಮಳೆ ನೀರು ಸೇರಿ ಕೆರೆಗಳ ಕೋಡಿ ನೋಡಿ ರೈತ ಇಂದು ಸುಖದಲ್ಲಿ ಮಿಂದು ಏಳುತ್ತಿದ್ದಾನೆ . ಸರ್ಕಾರ ರೈತರ ಜೊತೆಗಿದೆ ಸರ್ಕಾರದ ವತಿಯಿಂದ ರೈತರಿಗೆ ಮಳೆಯಿಂದ ಹಾನಿಯಾಗಿರುವ ಎಲ್ಲ ವಿಚಾರಗಳಲ್ಲಿಯೂ ಭಾಗಿಯಾಗಲಿದೆ . ಕೆ.ಸಿ. ವ್ಯಾಲಿ ಎರಡನೇ ಹಂತ 440 ಕೋಟಿ ರೂಗಳು ಬಿಡುಗಡೆ ಮಾಡಿದ್ದು ಶೀಘ್ರವೇ ಟೆಂಡರ್ ಕರೆಯಲಿದೆ . ಇದರಿಂದ ಈ ಭಾಗದ ರೋಣೂರು ಹೋಬಳಿಯ ಕೆರೆಗಳು ಸೇರಿವೆ ಅದಕ್ಕೆ ಹೊಸ ಕಾಯಕಲ್ಪ ಬಿ.ಜೆ.ಪಿ. ಸರ್ಕಾರ ಕೊಟ್ಟಿದೆ . ಇದಕ್ಕೆ ಪೈನಾನ್ಸ್ ಅನುಮೋಧನೆ ದೊರೆತಿದೆ ಮಂತ್ರಿಮಂಡಲದಲ್ಲಿ ಅನುಮೋಧನೆ ದೊರೆತಿದೆ ನೀಲಿನಕ್ಷೆಯು ತಯಾರಾಗಿದೆ . ಮುಂದಿನ ವಾರದಲ್ಲಿ ಟೆಂಡರ್ ಕರೆದು ನಮ್ಮ ಬಿ.ಜೆ.ಪಿ. ಸರ್ಕಾರ 2023 ರ ಚುನಾವಣೆಗೆ ಹೋಗುವ ಮೊದಲೆ ಕೆ.ಸಿ. ವ್ಯಾಲಿಯ ಎರಡನೇ ಯೋಜನೆ ಜಾರಿಗೊಳಿಸಲು ಬದ್ಧವಾಗಿದೆ ಎಂದರು . ಎತ್ತಿನಹೊಳೆ ಯೋಜನೆ ಭಾರತೀಯ ಜನತಾ ಪಕ್ಷದ ಕೂಸು ಅಂದಿನ ಮುಖ್ಯಮಂತ್ರಿಯಾದ ಸದಾನಂದ ಗೌಡರು ಇಂದಿನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸೇರಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದರು . ಬೈರಗೊಂಡ್ಲಹಳ್ಳಿಯ ಬಳಿ ಜಲಾಶಯ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆ ಸದ್ಯದಲ್ಲಿಯೆ ಇತ್ಯರ್ಥ ಮಾಡಲಿದೆ . ಸುಮಾರು 2000 ಕೋಟಿ ರೂಗಳು ಖರ್ಚು ಮಾಡಿ ಕೋಲಾರ ಜಿಲ್ಲೆಗೆ ಬರುವ ಪೀಡರ್ ಚಾನಲ್‌ಗಳನ್ನು ಟೆಂಡರ್ ಕರೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ . ನಮ್ಮ ಬಿ.ಜೆ.ಪಿ. ಪಕ್ಷ ಎತ್ತಿನಹೊಳೆ ಜಾರಿಗೊಳಿಸುವುದಲ್ಲಿ , ಕೆ.ಸಿ. ವ್ಯಾಲಿ ಜಾರಿಗೆಗೊಳಿಸುವುದರಲ್ಲಿ ಯಾವುದೇ ವಿಳಂಭ ಮಾಡಿಲ್ಲ . ಈಗಾಗಲೆ ಸುಮಾರು 400 ಕೋಟಿ ರೂ ಹಣವನ್ನು ಕೆ.ಸಿ. ವ್ಯಾಲಿ ಮೊದಲನೆ ಹಂತಕ್ಕೆ ಬಿಡುಗಡೆ ಮಾಡಲಾಗಿತ್ತು . ಕೆ.ಸಿ. ವ್ಯಾಲಿ ಯೋಜನೆಯಲ್ಲಿ ಬಿ.ಜೆ.ಪಿ. ಸರ್ಕಾರದ ಪಾಲೇನು ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ . ಕೆ.ಸಿ. ವ್ಯಾಲಿಯಲ್ಲಿ ಕಾಂಗ್ರೇಸ್ ಸರ್ಕಾರ ಎಷ್ಟು ಖರ್ಚು ಮಾಡಿತ್ತೊ ಅಷ್ಟೇ ಹಣವನ್ನು ಬಿ.ಜೆ.ಪಿ. ಸರ್ಕಾರ ಖರ್ಚು ಮಾಡಿದೆ ಆದರೆ ಬಿ.ಜೆ.ಪಿಯವರು ಪ್ರಚಾರ ತೆಗೆದುಕೊಳ್ಳುತ್ತಿಲ್ಲ . ಕಾಂಗ್ರೆಸ್‌ನವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು .
ಸಕಾರಾತ್ಮಕವಾಗಿ , ರಚನಾತ್ಮಕವಾಗಿ ಟೀಕೆಗಳನ್ನು ಸಮಾಜ ಬಹಳ ಸಕಾರಾತ್ಮಕವಾಗಿ ಸ್ವೀಕಾರ ಮಾಡುತ್ತವೆ . ವೈಯುಕ್ತಿಕ ಟೀಕೆಗಳು ಲಕ್ಷಣ ರೇಖೆಯನ್ನು ದಾಟಿ ಆಡುವ ಮಾತುಗಳು ಜನ ಸ್ವೀಕಾರ ಮಾಡುವುದಿಲ್ಲ ರಾಜಕಾರಣಿಗಳು ತಮ್ಮ ಮುಂದೆ ಲಕ್ಷ್ಮಣ ರೇಖೆಯನ್ನು ಎಳೆದುಕೊಂಡು ಹಿತಿ – ಮಿತಿಯಲ್ಲಿ ಮಾತನಾಡಿದರೆ ಎಲ್ಲವೂ ಸರಿಹೋಗುತ್ತದೆ . ಆದರೆ ಇತ್ತೀಚಿನ ದಿನಗಳಲ್ಲಿ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಆಡುವ ಮಾತುಗಳು , ನಡೆದುಕೊಳ್ಳುವ ರೀತಿಗಳು ಎಲ್ಲೋ ಒಂದು ಕಡೆ ಸಮಧಾನ ತರುತ್ತಿಲ್ಲ . ಸರ್ಕಾರಗಳು ಯಾವುದೇ ಇರಲಿ ಜನರ ಜೀವನವನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿರುವುದು ಆದ್ಯ ಕರ್ತವ್ಯ ಎಂದರು . ಕೆ.ಸಿ. ವ್ಯಾಲಿಯ ಒಂದನೇ ಹಂತ ಪೂರ್ಣಗೊಳಿಸಲು ಎರಡನೇ ಹಂತ ಕಾರ್ಯಗತಗೊಳಿಸಲು ಬಿ.ಜೆ.ಪಿ ಸರ್ಕಾರ ಬದ್ಧ . ಎತ್ತಿನಹೊಳೆ ಯೋಜನೆಗೆ ಬೇಕಾಗುವ ಹಣಕಾಸನ್ನು ಒದಗಿಸುತ್ತಿದ್ದೇವೆ . ಯರಗೋಳ್ ಯೋಜನೆ ನೆನೆಗೆ ಬಿದ್ದಿದ್ದನ್ನು ಮರುಜೀವ ನೀಡಿ 100 ಕೋಟಿ ರೂಗಳು ಬಿಡುಗಡೆ ಮಾಡಿ ಡ್ಯಾಂನ್ನು ಪೂರ್ಣಗೊಳಿಸಿದ್ದೇನೆ . ಇದರಲ್ಲಿ ನಮ್ಮ ಯೋಜನೆ ನಿಮ್ಮ ಯೋಜನೆ ಎನ್ನುವುದಕ್ಕಿಂತ ಸರ್ಕಾರ ಯೋಜನೆ ಆಯಾ ಸರ್ಕಾರಗಳಲ್ಲಿ ಅವರವರು ಇದ್ದಾಗ ಆ ಯೋಜನೆಗಳನ್ನು ತಂದು ಜನರ ಮನಸ್ಸಿನಲ್ಲಿ ಮುಖದಲ್ಲಿ ನಗುವನ್ನು ಯಾರು ತರುತ್ತಾರೋ ಅವರ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು .
ಮಾಜಿ ಮುಖ್ಯಮಂತ್ರಿ ಸಿದ್ದರಾಮಯಯನವರ ಬಗ್ಗೆ ಲೇವಡಿ : ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ಗೌರವ ಪಡೆದವರು . ಬಜೆಟ್‌ನಲ್ಲಿ ವಿಶೇಷ ಪರಿಣಿತಿ ಪಡೆದವರು ಇತ್ತೀಚಿಗೆ ಅವರ ಹೇಳಿಕೆಗಳು ಪರಿಣಿತಿಯನ್ನು ಕಳೆದುಕೊಳ್ಳುತ್ತಿವೆ . ಈ ದೇಶದ ಪ್ರಧಾನಿ ಮಂತ್ರಿಗಳನ್ನು ಏಕ ವಚನದಲ್ಲಿ ಮಾತನಾಡುತ್ತಿರುವುದು ಸರಿಯಲ್ಲ . ಜಗಮೆಚ್ಚಿದ ನಾಯಕ ಪ್ರಧಾನ ಮಂತ್ರಿಗಳು ಅವರನ್ನು ದೇಶದ ಎಲ್ಲ ಪಕ್ಷಗಳು ಮೆಚ್ಚಿಕೊಳ್ಳುತ್ತಿವೆ . ಅಂತಹ ನಾಯಕರನ್ನು ಏಕವಚನದಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ . ಆನೆ ಹೋಗುತ್ತಿದ್ದರೆ ಹಿಂದೆ ನಾಯಿ ಬೊಗಳಿದಂತೆ ಎಂಬ ಗಾದೆಗೆ ಸಿದ್ದರಾಮಯ್ಯ ಹೋಲಿಕೆಯಾಗುತ್ತಿದ್ದಾರೆ ಎಂದರು . ಆರ್.ಎಸ್.ಎಸ್ . ಬಗ್ಗೆಯೂ ಸಿದ್ದರಾಮಯ್ಯನವರು ಟೀಕೆ ಮಾಡಿದ್ದಾರೆ . ಪ್ರಣಬ್ ಮುಖರ್ಜಿ ಅಂತಹವರೆ ಆರ್.ಎಸ್.ಎಸ್ ಶಿಭಿರಗಳಿಗೆ ಬೇಟಿ ನೀಡಿದ್ದಾರೆ . ಅಂತಹವರನ್ನು ಅರ್ಥ ಮಾಡಿಕೊಂಡು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ . ಮುಂದಿನ ದಿನಗಳಲ್ಲಿ ಅವರ ಗುಂಡಿಯನ್ನು ಅವರ ತೋಡಿಕೊಳ್ಳಲಿದ್ದಾರೆ ಎಂದು ಟೀಕಿಸಿದರು .
ಈ ಸಂದರ್ಭದಲ್ಲಿ ಬಿ.ಜೆ.ಪಿ.ಯ ಹಿರಿಯ ಮುಖಂಡ ಎ.ಎನ್ . ಜಯರಾಮರೆಡ್ಡಿ , ನಾರಾಯಣಸ್ವಾಮಿ ಸೇರಿದಂತೆ ಬಿ.ಜೆ.ಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು .