ಕುಂದಾಪುರ (ಸೆ . 23) : ಸಂಸ್ಥೆಯಲ್ಲಿ ಕಳೆದ ತನ್ನ ಪ್ರಾಥಮಿಕ ಶಿಕ್ಷಣದ ಕ್ಷಣಗಳನ್ನು ಮೆಲುಕು ಹಾಕುತ್ತಾ, ನನ್ನ ಹಿಂದಿನ ಈ ಸಾಧನೆಗೆ ಅಂದಿನ ನನ್ನ ಪ್ರಾಥಮಿಕ ಶಿಕ್ಷಕರು ನೀಡಿದ ಶಿಸ್ತು, ಸಂಯಮ, ಪ್ರೇರಣೆಯೇ ಕಾರಣ. ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೈನ್ಯಕ್ಕೆ ಪ್ರಪಂಚದ ಯಾವುದೇ ಸೈನ್ಯ ಸರಿಸಾಟಿಯಲ್ಲ ಎಂದು ಇತ್ತೀಚಿಗಷ್ಟೇ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸ್ಥಾನ ಪಡೆದಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಹೇಳಿದರು.
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಜೈ ಹಿಂದ್ – ” ಟಾಕ್ ವಿದ್ ಲೆಫ್ಟಿನೆಂಟ್ ” ಕಾರ್ಯಾಗಾರದಲ್ಲಿ ಮಾತನಾಡುತ್ತ ಹೀಗೆಂದರು. ಇವರೊಂದಿಗೆ ಹಳೆಯ ವಿದ್ಯಾರ್ಥಿಗಳಾದ ಅಜಯ್ ಮತ್ತು ರೋಹಿತ್ ಬಾಬು ದೇವಾಡಿಗ ಆಗಮಿಸಿದ್ದರು. ಲೆಪ್ಟಿನೆಂಟ್ ರವರ ಸಾಧನೆಯನ್ನು ಗುರುತಿಸಿ ಸಂಸ್ಥೆಯು ಇವರನ್ನು ಸನ್ಮಾನಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪಪ್ರಾಂಶುಪಾಲರಾದ ಶುಭಾ ಕೆ ಎನ್ ಮತ್ತು ಇತರ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಗಾಯತ್ರಿ ಕಾರ್ಯಾಕ್ರಮ ನಿರೂಪಿಸಿದರು.