ಕುಂದಾಪುರದಲ್ಲಿ ಎನ್.ಎಮ್.ಎ. ಕುಂದಾಪುರ ತಾಲೂಕು ಸಮಿತಿಯ 2021-22 ನೇ ಸಾಲಿನ ಮಹಾಸಭೆ

JANANUDI.COM NETWORK

ಕುಂದಾಪುರ: ಎನ್ ಎಮ್ ಎ ಕುಂದಾಪುರ ತಾಲೂಕು ಸಮಿತಿಯ 2021-22 ನೇ ಸಾಲಿನ ಮಹಾಸಭೆಯು ದಿನಾಂಕ 01/04/2022 ರ ಶುಕ್ರವಾರ  ಕುಂದಾಪುರ ಕೋಡಿಯ ಎನ್ ಎಮ್ ಎ ಸೌಹಾರ್ಧ ಭವನದಲ್ಲಿ ಮಹಮ್ಮದ್ ರಫೀಕ್ ಗಂಗೊಳ್ಳಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಯೂಸುಫ್ ಅಹ್ಮದ್  ಅವರ ಪ್ರವಚನದೊಂದಿಗೆ ಪ್ರಾರಂಭವಾಯಿತು.   

ವೇದಿಕೆಯಲ್ಲಿ ಎನ್ ಎಮ್ ಎ ಕೇಂದ್ರ ಅಧ್ಯಕ್ಷರಾದ ಅಬೂಬಕ್ಕರ್ ಮಹಮ್ಮದ್ ಅಲೀ, ಗೌರವಾಧ್ಯಕ್ಷ ಶೇಖ್ ಅಬೂ ಮಹಮ್ಮದ್ ಹಾಗೂ ಮುಖ್ಯ ಅತಿಥಿ ಇಬ್ರಾಹಿಂ ಹೊಸನಗರ ಇವರು ಉಪಸ್ಥಿತರಿದ್ದರು. ತಾಲೂಕು ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.    ಪ್ರಧಾನ ಕಾರ್ಯದರ್ಶಿ ಬಂದ ಅತಿಥಿಗಳೆಲ್ಲರನ್ನು ಸ್ವಾಗತಿಸಿ  ಸಂಸ್ಥೆಯಲ್ಲಿ ಆದಂತಹ ಕಾರ್ಯಗಳ ವರದಿಯನ್ನು ವಾಚಿಸಿದರು ಮುಖ್ಯ ನಿರ್ವಾಹಕ ಮಹಮ್ಮದ್ ತಾಹಿರ್ ಹಸನ್ ರವರು ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡನೆ ಮಾಡಿ ಸಭೆಯ ಅನುಮೋದನೆ ಪಡೆದರು.   

ಯೂಸುಫ್ ಅಹ್ಮದ್ ರವರು ಹಳೆ ಸಮಿತಿ ಬರ್ಕ್ಸತ್ ಮಾಡಿ 2022-23 ನೇ ಸಾಲಿನ ಹೊಸ ಕಮಿಟಿ ರಚನೆ ಮಾಡಿದರು.   

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಶೈಖ್ ಅಬು ಮೊಹಮ್ಮದ್, ಮೊಹಮ್ಮದ್ ರಫೀಕ್ ಗಂಗೊಳ್ಳಿ ಅಧ್ಯಕ್ಷರು. ಜಿ.ಪಿ.ಮೊಹಮ್ಮದ್ ಗುಲ್ವಾಡಿ ಹಾಗೂ  ಮೊಹಮ್ಮದ್ ಅಲಿ… ಉಪಾಧ್ಯಕ್ಷರಾಗಿ,  ಮುನಾಫ್ ಕೋಡಿ ಪ್ರಧಾನ ಕಾರ್ಯದರ್ಶಿ, ಬಿ ಎಂ. ನಾಸಿರ್ ಜೊತೆ ಕಾರ್ಯದರ್ಶಿ, ಕೆ.ಮೊಹಮ್ಮದ್,  ಶಾಬಾನ್ ಎ. ಎಚ್. ಹಾಗೂ ನಜೀರ್ ಅಹ್ಮದ್ ಆಲಿ ಲೆಕ್ಕ ಪರಿಶೋಧಕರಾಗಿ ಅಬು ಶೇಕ್, ಅಶ್ರಫ್ ಬ್ಯಾರಿ ಹಾಗೂ ಅಬು ಮೊಹಮ್ಮದ್ ಮುಜಾವರ್ ಸಂಚಾಲಕರಾಗಿ,  ಸದಸ್ಯರಾಗಿ ಖಾದರ್ ಹಳೆಅಳ್ವೆ ,  ರೌಫ್ ಎಂ.ಕೆ, ಅಹ್ಮದ್ ಯೂಸುಫ್.ಅಬ್ದುಲ್ಲ ಕೋಟೆ, ರಿಯಾಜ್.ಕೆ.ಎಸ್., ಅಬ್ದುಲ್ ರಜಾಕ್ ಗೋಪಾಡಿ,  ಪಲ್ಲಿ ಉಸ್ಮಾನ್ ಗುಲ್ವಾಡಿ, ಇಬ್ರಾಹಿಂ ಮಣಿಕೋಲು, ಹಸೈನಾರ್ ಗುಲ್ವಾಡಿ, ರಹೀಮ್.ಕೆ.ಎಸ್,  ಕೆ.ಎಚ್.ಸಲಾಮ್. ಹಿಸ್ಸೈನಾರ್ ಜೊಯ್ನಿ,  ಜಿ.ಎಂ.ಮುಸ್ತಫಾ, ಸಲಾಂ ತೆಕ್ಕಟ್ಟೆ. ಹನೀಫ್ ಎಸ್.ಎಸ್.,  ವಾಸಿ, ಬಾಷಾ, ದಸ್ತಗೀರ್ ಕಂಡ್ಲೂರ್, ಹಿಸ್ಸೈನ್ ಹೈಕಡಿ, ರೌಫ್ ಕೋಟೇಶ್ವರ, ಯಾಸಿನ್ ಹೆಮ್ಮಾಡಿ, ಆರಿಸಿ ಬಂದಿದ್ದಾರೆ. 

ಎನ್ ಎಮ್ ಎ ಸಂಸ್ಥೆಯು 2004 ರಲ್ಲಿ ಸೌದಿ ಅರೇಬಿಯಾದಲ್ಲಿ ಪ್ರಾರಂಭಗೊಂಡಿದ್ದು, ಕುಂದಾಪುರ ತಾಲೂಕಿನಾದ್ಯಂತ ಜಾತಿ ಮತ ಭೇದವಿಲ್ಲದೆ ಬಡವ ಅನಾಥ  ಹೆಣ್ಣು ಮಕ್ಕಳ ಮದುವೆಗಳಿಗೆ  ಸಹಾಯ, ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿವೇತನ, ಹಾಗೂ ಇನ್ನಿತರ ಉತ್ತಮ ಕಾರ್ಯಗಳನ್ನು ಮಾಡುತ್ತಾ 18 ವರ್ಷ ಪೂರೈಸಿ ಯಶಸ್ಸು ಗಳಿಸಿದೆ.   

2018 ರಲ್ಲಿ ಕುಂದಾಪುರ ತಾಲೂಕಿನಾದ್ಯಂತ ಜನರಿಗೆ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಸಂಸ್ಥೆ ಕೋಡಿಯಲ್ಲಿ “ಎನ್ ಎಮ್ ಎ ಪಾಲಿಕ್ಲಿನಿಕ್” ಪ್ರಾರಂಬಿಸಿ 3 ವರ್ಷದಿಂದ ಸೇವೆ ನೀಡುತ್ತಾ ಇದೆ.ಆಸೀಫ್ ಕಾರ್ಯಕ್ರಮ ನಿರೂಪಿಸಿದರು, ಮುನಾಫ್ ಕೋಡಿ ಧನ್ಯವಾದ ಸಮರ್ಪಪಿಸಿದರು. ಅಲ್ಲಾಹುಗೆ ಕ್ರತಜ್ಞೆತೆ ಸಲ್ಲಿಸಿ ಸಭೆ ಮುಕ್ತಾಯಗೊಳಿಸಲಾಯತು.