ರಾಜ್ಯದಲ್ಲಿ ಹೇರಲಾಗಿದ್ದ ನೈಟ್ ಕಫ್ರ್ಯೂ ತೆರವು – ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು

JANANUDI.COM NETWORK


ಬೆ0ಗಳೂರು: ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ನೈಟ್ ಕಫ್ರ್ಯೂವನ್ನು ಹಿ0ತೆಗೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದರಂತೆ ಜನವರಿ 31ರಿ0ದ ನೈಟ್ ಕಫ್ರ್ಯೂ ರದ್ದಾಗಲಿದೆ ಎ0ದು ಕ0ದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಅದೇ ರೀತಿ 50-50 ನಿಯಮ ಕೂಡ ರದ್ದು ಪಡಿಸಲು ತೀರ್ಮಾನಿಸಲಾಗಿದೆ ಎ0ದು ಅವರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕೆಲವು ವಲಯಗಳಿಗೆ ಮಾತ್ರ ಈ ನಿಟ್ಟಿನಲ್ಲಿ ವಿನಾಯಿತಿ.ನೀಡಲಾಗಿದೆ.
ಹಾಗೇ ರಾಜ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದಕ್ಕೆ ಯಾವುದೇ ನಿಬರ್ಂಧ ವಿಧಿಸಲಾಗಿಲ್ಲ ಎ0ದು ಸರ್ಕಾರ ಸೃಷ್ಟಪಡಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ ಜತೆ ಮಾತುಕತ ನಡೆಸಿದ ಬಳಿಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
ಅರಣ್ಯಗಳಲ್ಲಿ ಸಫಾರಿ ಸೇರಿದ0ತೆ ಎಲ್ಲ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಪ್ರವಾಸಿಗರು ಕೊರೋನಾದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆಯೆಂದು ಅವರು ತಿಳಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ನಿಬರ್ಂಧಿಸಲಾಗಿತ್ತು.