ಉಡುಪಿ ಜಿಲ್ಲಾ ಬರಹಗಾರರ ಕೋಶ' ಬಿಡುಗಡೆಕಾರ್ಯಕ್ರಮದಲ್ಲಿಉಪನ್ಯಾಸ ಕೋಲಾರ: ಜಗತ್ತಿಗೆ ಅಪಾರ ಪ್ರಮಾಣದಲ್ಲಿ ಚಿನ್ನ ಕೊಟ್ಟ; ನಾಡಿಗೆ ಹಾಲು, ತರಕಾರಿ, ಟೊಮಾಟೋ, ಮಾವು ಕೊಡುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಯ ಶ್ರಮಜೀವಿಗಳ ಹೋರಾಟಗಳೊಂದಿಗೆ ಜಿಲ್ಲಾ ಪತ್ರಿಕೆಗಳು ಹಾಸುಹೊಕ್ಕಾಗಿವೆ. ಪತ್ರಿಕೆಗಳ ಜೊತೆ ಚಳವಳಿಗಳು ಬೆಳೆದಿವೆ, ಆಂದೋಲನಗಳ ಜೊತೆ ಪತ್ರಿಕೆಗಳು ಬೆಳೆದಿವೆ ಎನ್ನುವಷ್ಟರ ಮಟ್ಟಿಗೆ ಅವು ಒಂದಕ್ಕೊಂದು ಬೆಸೆದುಕೊಂಡಿವೆಎಂದು ಹಿರಿಯ ಪತ್ರಕರ್ತ, ಲೇಖಕ ವಿಶ್ವಕುಂದಾಪುರಅಭಿಪ್ರಾಯ ಪಟ್ಟಿದ್ದಾರೆ. ಭಾಷಾ ಅಸ್ಮಿತೆಯ ಹೋರಾಟಕ್ಕೂ ಭಾಷಾ ಸೌಹಾರ್ದತೆಗೂ ಬಯಲುಸೀಮೆಯ ಈ ನೆಲ ಉದಾಹರಣೆಯಾಗಿದೆಎಂದುಉಡುಪಿಯಎಂಜಿಎಂಕಾಲೇಜಿನಅಮೃತ ಮಹೋತ್ಸವದ ಸುಸಂದರ್ಭದಲ್ಲಿಕಾಲೇಜಿನರವೀಂದ್ರ ಭವನದಲ್ಲಿಜನವರಿ 7ರಂದು ಭಾನುವಾರ ನಡೆದ ಡಾ. ಅನಿಲ್ ಕುಮಾರ್ ಶೆಟ್ಟಿ ಸಂಪಾದಕತ್ವದ
ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕೃತಿ ಬಿಡುಗಡೆ ಸಮಾರಂಭದಲ್ಲಿಗಡಿನಾಡು-ಹೊರನಾಡು ಪತ್ರಿಕೆಗಳು ಕುರಿತ ವಿಚಾರಗೋಷ್ಠಿಯಲ್ಲಿಉಪನ್ಯಾಸ ನೀಡಿದ ವಿಶ್ವಕುಂದಾಪುರ ಹೇಳಿದರು. ನೀಲಿ ಮತ್ತು ಕೆಂಪು ಚಳವಳಿಗಳ ದಟ್ಟಇತಿಹಾಸ ಹೊಂದಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೊನ್ನುಡಿ, ಸಂಚಿಕೆ ಮುಂತಾದಜಿಲ್ಲಾ ಪತ್ರಿಕೆಗಳು ಹೋರಾಟಗಳಲ್ಲಿ ವಹಿಸಿದ ಪಾತ್ರ ಮಹತ್ವದ್ದಾಗಿದೆ. ಕೋಲಾರ ಪತ್ರಿಕೆಯಂಥ ಜಿಲ್ಲಾ ಪತ್ರಿಕೆ ಸುವರ್ಣ ಮಹೋತ್ಸವ ಸಂದರ್ಭದಲ್ಲಿರುವುದುಗಮನಾರ್ಹವಾಗಿದೆಎಂದರು. ನೀರಿನಕೊರತೆಅನುಭವಿಸುತ್ತಿರುವಉಭಯ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಗಾಗಿಜನಸಮುದಾಯ ನಡೆಸಿದ ದೀರ್ಘ ಹೋರಾಟಗಳಿಗೆ ಪತ್ರಿಕೆಗಳೂ ತಮ್ಮಕೊಡುಗೆ ಸಲ್ಲಿಸಿವೆ ಎಂದು ಹೇಳಿದರು. ಶ್ರಮಜೀವಿಗಳ ಸಂಕಟಕ್ಕೆದನಿಯಾಗಿ, ಜನಪರ ಚಳವಳಿಗಳ ಮಾರ್ದನಿಯಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಿವೆ ಎಂದರು.
ಬಹುತ್ವದ ಮೇಲೆ ದಾಳಿ ನಡೆಯುತ್ತಿರುವಕಾಲಘಟ್ಟದಲ್ಲಿ ಭಾಷಾ ಹಾಗೂ ಸಾಂಸ್ಕøತಿಕ ವೈವಿಧ್ಯತೆಯನ್ನುಕಾಪಾಡುವಲ್ಲಿ ಪತ್ರಿಕೆಗಳ ಸಹಿತ ಮಾಧ್ಯಮದ ಪಾತ್ರ ಮಹತ್ವದ್ದುಎಂದರು. ಪ್ರಸ್ತುತ ಮಾಧ್ಯಮಕ್ಷೇತ್ರವು ವಾರೆನ್ ಬಫೆಟ್ನಿಂದ ಹಿಡಿದುಗೌತಮ್ಅದಾನಿ ವರೆಗೆಕಾರ್ಪೊರೇಟ್ಜಗತ್ತಿನ ಹಿಡತಕ್ಕೆ ಸಿಲುಕಿ ಪತ್ರಕರ್ತರು ಉಸಿರುಗಟ್ಟಿಸುವ ವಾತಾವರಣದಲ್ಲಿಕಾರ್ಯನಿರ್ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆಎಂದುಆತಂಕ ವ್ಯಕ್ತಪಡಿಸಿದರು.
ಪತ್ರಿಕಾ ವೃತ್ತಿ ಮತ್ತು ಸಾಹಿತ್ಯಕ್ಷೇತ್ರದಅನನ್ಯ ಸಾಧಕ ಡಿ.ವಿ. ಗುಂಡಪ್ಪ (ಡಿವಿಜಿ) ಕೋಲಾರಜಿಲ್ಲೆಯವರೆನ್ನುವುದು ಹೆಮ್ಮೆಯ ಸಂಗತಿಎಂದರು. ಜಿಲ್ಲೆಯಲ್ಲಿಎರಡುಡಜನ್ನಷ್ಟು ಸ್ಥಳೀಯ ಪತ್ರಿಕೆಗಳಿರುವುದು ಕರ್ನಾಟಕರಾಜ್ಯದಲ್ಲೇಅಪರೂಪದದಾಖಲೆಎಂದು ವಿಶ್ವಕುಂದಾಪುರ ಹೇಳಿದರು.
ತಮಿಳು ನಾಡು ಮತ್ತುಆಂಧ್ರ ಪ್ರದೇಶ ರಾಜ್ಯಗಳ ಗಡಿಗಳನ್ನು ಹಂಚಿಕೊಂಡಿರುವಜಿಲ್ಲೆಯಲ್ಲಿ ತಮಿಳು ಮತ್ತುತೆಲುಗು ಪತ್ರಿಕೆಗಳೂ ಪ್ರಸಾರದಲ್ಲಿವೆ. ಅಲ್ಪಸಂಖ್ಯಾತ ಸಮುದಾಯದವರ ನಡುವೆಉರ್ದು ಪತ್ರಿಕೆಗಳ ಪ್ರಸಾರವೂಇದೆ. ಇವೆಲ್ಲವೂಜಿಲ್ಲೆಯಲ್ಲಿನ ಭಾಷಾ ಸೌಹಾರ್ದತೆ ಹಾಗೂ ಅದನ್ನು ಪೋಷಿಸುವಲ್ಲಿ ಮಾಧ್ಯಮದ ಪಾತ್ರವನ್ನುತೋರಿಸುತ್ತವೆಎಂದುಅಭಿಪ್ರಾಯಪಟ್ಟರು.
ಮುದ್ದಣನ ಕಾಲದಿಂದ…
ಮುದ್ದಣನ ಕಾಲದಿಂದ (1870) ಹಿಡಿದು 2020ರವರೆಗಿನ ಒಂದುವರೆ ಶತಮಾನದಅವಧಿಯಉಡುಪಿ ಜಿಲ್ಲಾ ಬರಹಗಾರರ ಮಾಹಿತಿಯನ್ನು ಕೋಶ ಒಳಗೊಂಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಡಾ. ಸುಬ್ಬಣ್ಣರೈಕೃತಿ ಬಿಡುಗಡೆ ಮಾಡಿದರು. ಎಂಜಿಎಂಕಾಲೇಜ್ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣಕಾರಂತ, ವಿದ್ವಾಂಸರಾದಡಾ. ಪಾದೇಕಲ್ಲು ವಿಷ್ಣು ಭಟ್, ಬ್ಯಾಂಕ್ಆಫ್ ಬರೋಡಾಅಧಿಕಾರಿರವೀಂದ್ರರೈ, ಪ್ರಕಾಶಕರಾದ ಬೆಂಗಳೂರಿನ ಬಾಲಾಜಿ ಪಬ್ಲಿಷರ್ಸ್ನಉದಯ್ ಶೆಟ್ಟಿ ಮೊದಲಾದವರು ಮಾತನಾಡಿದರು. ಡಾ. ವರದರಾಜಚಂದ್ರಗಿರಿಅಧ್ಯಕ್ಷತೆ ವಹಿಸಿದ್ದರು. ಕೋಶದ ಸಂಪಾದಕಡಾ. ಅನಿಲ್ ಕುಮಾರ್ ಶೆಟ್ಟಿ-ಪತ್ನಿ ಮಲ್ಲಿಕಾದಂಪತಿಯನ್ನು ಸನ್ಮಾನಿಸಲಾಯಿತು.