ಮಳೆ ಚಳಿ ಗಾಳಿ ಎನ್ನದೆ ಪತ್ರಿಕೆ ವಿತರಿಸುವರ ಸೇವೆ, ಪತ್ರಿಕೆಗಳ ಅಬಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 347.99847; hist255: 0.0; hist252~255: 0.0; hist0~15: 0.0;

ಮಳೆ ಚಳಿ ಗಾಳಿ ಎನ್ನದೆ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಸೇವೆ ಪತ್ರಿಕೆಗಳ ಅಬಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ|| ವೈ.ವಿ. ವೆಂಕಟಾಚಲ ತಿಳಿಸಿದರು.
ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿ ಮಾತನಾಡಿದ ವೆಂಕಟಾಚಲ ಪ್ರತಿನಿತ್ಯ ಬೆಳಗಾಗುವಷ್ಟರಲ್ಲಿ ಮಳೆ ಚಳಿ ಯಾವುದನ್ನೂ ಲೆಕ್ಕಿಸದೆ ಪ್ರತಿದಿನ ಮನೆ ಮನೆಗೂ ಪತ್ರಿಕೆಯನ್ನು ತಲುಪಿಸುತ್ತಿರುವುದು ಇವರ ಕಾರ್ಯ ಶ್ಲಾಘೀನಿಯವಾಗಿದೆ. ಒಂದು ಕಾಲದಲ್ಲಿ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ ರವರು ಸಹ ಮನೆಮನೆಗೂ ನಿತ್ಯ ಪತ್ರಿPಗಳನ್ನು ಹಂಚಿಕೆ ಮಾಡುತ್ತಿದ್ದರು ಅವರು ಸಹ ರಾಷ್ಟ್ರಪತಿ ಉನ್ನತ ಹುದ್ದೆಗೆ ಏರಿದವರು ಯಾರೂ ಸಹ ಎದೆಗುಂದದೆ ಛಲ ಮತ್ತು ವಿಶ್ವಾಸದಿಂದ, ಶ್ರದ್ದಾಭಕ್ತಿಯಿಂದ ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೆ ಏರಲು ಯಾವುದು ಅಡ್ಡಿ ಬರುವುದಿಲ್ಲ. “ಲರ್ನಿಂಗ್ ವಿತ್ ಅರ್ನಿಂಗ್” ಎಂಬ ಗಾದೆ ಮಾತಿನಂತೆ ತಾವು ಎಲ್ಲರೂ ಕೆಲಸ ಮಾಡುತ್ತಿದ್ದೀರಿ ಹಣ ಗಳಿಕೆಯ ಮಹತ್ವ ತಿಳಿದಿರುವ ನಿಮಗೆ ಬದುಕಿನಲ್ಲಿ ಸಾದನೆ ಮಾಡುವ ಛಲ ಸಹಜವಾಗಿ ಮೂಡತ್ತದೆ ಎಂದರು.
ಪತ್ರಿಕೆಯನ್ನು ತಮ್ಮ ನಿತ್ಯ ಕಾಯಕದಲ್ಲಿ ಓದಿ ಸಾಕಷ್ಟು ಜನ ಕೆ.ಎ.ಎಸ್, ಐ.ಎ.ಎಸ್ ಉನ್ನತ ಹುದ್ದೆಯಲ್ಲಿ ಇದ್ದಾರೆ ನೀವು ಸಹ ಇಂತಹ ವ್ಯಕ್ತಿಯಾಗಿ ರೂಪಗೊಳ್ಳಬೇಕು. ನಮ್ಮ ರೋಟರಿ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ ಎಂದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ. ಬೈರೇಗೌಡ ಮಾತನಾಡಿ ಈ ರೋಟರಿ ಸಂಸ್ಥೆ ಯಾವುದೇ ಅಪೇಕ್ಷೆ ಇಲ್ಲದೆ ಸಾಮಾಜಿಕಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತದೆ. ಇಂದು ಪತ್ರಿಕಾ ವಿತರಕರಿಗೆ ಜರ್ಕಿನ್‍ನ್ನು ವಿತರಣೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಕರೋನಾ ಸಮಯದಲ್ಲಿ ಯಾವುದನ್ನೂ ಲೆಕ್ಕಿಸದೆ ಪ್ರತಿಯೊಂದು ಮನೆಗೊ ಪತ್ರಿಕೆಯನ್ನು ವಿತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಮಾಜ ಇವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕನ್ನಡದಲ್ಲಿ ಪತ್ರಿಕೋದ್ಯಮ ಬೆಳೆದಂತೆ ಉದ್ಯೋಗÀ ಅವಕಾಶ ಸೃಷ್ಠಿಯಾಗುತ್ತದೆ ಅದರಲ್ಲೂ ಪತ್ರಿಕೆ ವಿತರಣೆ ಕೆಲಸದಿಂದ ಅನೇಕ ಬಡಕುಟುಂಬ ಮಕ್ಕಳಿಗೆ ಉದ್ಯೋಗ ಅವಕಾಶ ದೊರೆಯುತ್ತಿದೆ.. ಚಳಿಗಾಲದಲ್ಲಿ ಅವರ ಕಷ್ಟ-ಸುಖ ಹೇಳಿಕೊಳ್ಳಲು ಸಾಧ್ಯವಿಲ್ಲ ಇದನ್ನು ಮನಗೊಂಡು ರೋಟರಿ ಸಂಸ್ಥೆ ಬೆಚ್ಚನಿಯ ಜರ್ಕಿನ್‍ಗಳನ್ನು ವಿತರಿಸುತ್ತಿರುವುದು ಒಳ್ಳೆಯ ಕೆಲಸ ಇದೇ ರೀತಿ ದಾನಿಗಳು, ಸಂಘ ಸಂಸ್ಥೆಗಳು. ನೇರವಾಗಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ರೋಟರಿ ಡಿಸ್ಟಿಕ್ ಅಸಿಸ್ಟೆಂಟ್ ಗರ್ವನರ್ ಹೆಚ್. ರಾಮಚಂದ್ರಪ್ಪ, ಕಾರ್ಯದರ್ಶಿ ಹೆಚ್.ಆರ್. ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಗೋಪಾಲಗೌಡ, ರೋಟರಿ ಸೆಂಟ್ರಲ್‍ನ ಮಾಜಿ ಅಧ್ಯಕ್ಷ ಶಿವಮೂರ್ತಿ, ರೋಟರಿ ಸೆಂಟ್ರಲ್‍ನ ಸದಸ್ಯರಾದ ಸೀತಾರೆಡ್ಡಿ, ಶ್ರೀನಿವಾಸರೆಡ್ಡಿ, ಸುಬ್ರಮಣಿ, ಮುದುವಾಡಿ ಟಿ.ಮಂಜುನಾಥರೆಡ್ಡಿ, ವಿಶ್ವನಾಥರೆಡ್ಡಿ, ಮಂಜು, ಹಾಗೂ ಪತ್ರಿಕಾ ವಿತರಕರು ಹಾಜರಿದ್ದರು.