ಕುಂದಾಪುರ, ಜ.2: ಸ್ಥಳೀಯ ಸಂತ ಜೋಸೆಫ್ ವಸತಿ ಶಾಲಾ ಮಕ್ಕಳೊಂದಿಗೆ ಹೊಸವರ್ಷಾಚರಣೆಯನ್ನು ಕುಂದಾಪುರದ ಐವನ್ ಆಲ್ಮೇಡ ಕುಟುಂಬದ ವತಿಯಿಂದ 2024, ಜನವರಿ 1 ರಂದು ಸಂಜೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನಮಗೆ ನಿಮ್ಮ ಜೊತೆ ಹೊಸವರ್ಷಾಚರಣೆಯನ್ನು ಆಚರಿಸಲು ತುಂಬಾ ಸಂತೋಷವಾಗುತ್ತದೆ. ನೀವು ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ಇಲ್ಲಿ ನೆಲಸಿ ಎಲ್ಲರೂ ಒಟ್ಟಾಗಿ ಪ್ರೀತಿ ಪ್ರೇಮದಿಂದ ಬಾಳುತಿದ್ದಿರಿ. ಇಲ್ಲಿ ನಿಮಗೆ ಉತ್ತಮ ಶಿಕ್ಷಣ ದೊರೆಯುತ್ತದೆ. ಈ ವಸತಿಶಾಲೆಯಲ್ಲಿ ಎಲ್ಲಾ ಕಡೆಗಳಿಂದಲೂ ಬಂದ ಹೆಣ್ಣು ಮಕ್ಕಳು, ಚೆನ್ನಾಗಿ ಕಲಿತು ನೆಮ್ಮದಿಯ ಜೀವನ ನಡೆಸುತ್ತಾರೆ, ನೀವು ಕೂಡ ವಸತಿ ಶಾಲೆಯ ಮಕ್ಕಳು ಚೆನ್ನಾಗಿ ಕಲಿತು ಶಾಲೆಗೆ ಕೀರ್ತಿ ತರಬೇಕು, ನಿಮಗೆ ಉರಿನಲ್ಲೊಂದು ತಾಯಿ ಇದ್ದರೆ, ಇಲ್ಲಿ ನಿಮ್ಮನ್ನು ನೋಡಿಕೊಳ್ಳುವ ಭಗಿನಿ ನಿಮ್ಮನ್ನು ಎರಡೆನೇ ತಾಯಿಯಾಗಿ ಅದೇ ಥರಹ ನೋಡಿಕೊಳ್ಳುತ್ತಾರೆ” ಎಂದು ಮೆಚ್ಚುಗೆಯ ನುಡಿಗಳನ್ನಾಡಿ ಹೊಸವರ್ಷದ ಶುಭಾಶಯಗಳನು ಕೋರಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮಾತನಾಡುತ್ತಾ ‘ಈ ವಸತಿಶಾಲೆಯಲ್ಲಿದ್ದು ಕಲಿಯುವ ಹೆಣ್ಣುಮಕ್ಕಳು ಹೆಚ್ಚಾಗಿ ಬಡವರು. ಅವರಿಗೆ ಸಂತ ಜೋಸೆಫ್ ಶಾಲೆಯಲ್ಲಿ ಕಲಿಯುವ ಉತ್ತಮ ಅವಕಾಶ ಲಭಿಸಿದೆ. ಯೇಸು ಕ್ರಿಸ್ತರ ಸಾಕು ತಂದೆ ಸಂತ ಜೋಸೆಫರು ನಿಜವಾಗಿಯೂ ಕೂಲಿನ ಮನೆತವವರಲ್ಲಾ, ಅವರು ರಾಜಾ ದಾವಿದನ ಮನೆತನದವರು, ದೇವರು ದಾವಿದ ರಾಜಾನಿಗೆ ವಾಗ್ದಾನ ನೀಡಿದ್ದನು, ನಿನ್ನ ಕುಲದಲ್ಲಿ ದೇವರ ಮಗ ಹುಟ್ಟುತ್ತಾನೆಂದು, ಹಾಗೇಯೆ ಮುಂದೆ ಯೇಸುಕ್ರಿಸ್ತನೂ ಪವಿತ್ರ ಆತ್ಮನ ಶಕ್ತಿಯ ಮುಖಾಂತರ ಮೇರಿ ಮಾತೆಯ ಗರ್ಭದೊಳಗೆ ಹುಟ್ಟುತ್ತಾನೆ, ಆದರೆ ಅವನು ಹುಟ್ಟಿದ್ದು ಬಡವನಾಗಿ ಆನಾಥರಂತೆ. ಯಾಕೆಂದರೆ ಯೇಸು ಕ್ರಿಸ್ತರಿಗೆ ಬಡವರೆಂದರೆ ಪ್ರೀತಿ, ಸಂತ ಜೋಸೆಫ್ ದಾವಿದ ಅರಸನ ವಂಶಸ್ಥನಾಗಿದ್ದರೂ, ಕೊನೆಗೆ ಆ ವಂಶಸ್ಥನಾದರು ಬಡವಾರಾದರೂ, ಅಂದರೆ ಈ ಪ್ರಪಂಪಚದ ಶ್ರೀಮಂತಿಕೆ ಅಧಿಕಾರ ಎಂದೂ ಶಾಸ್ವತವಲ್ಲಾ ಎಂದು ತಿಳಿದುಕೊಳ್ಳಬೇಕು. ಎಲ್ಲವೂ ಬುಡ, ಮೇಲೆ ಕೆಳಗೆ ಆಗುತ್ತೆ, ಆದರೆ ನಮ್ಮ ದಾನ ಧರ್ಮ, ನ್ಯಾಯ ನೀತಿ, ಇಲ್ಲದವರಲ್ಲಿ ಹಂಚಿಕೊಳ್ಳುವ ಗುಣ ಮಾತ್ರ ಮುಕ್ತಿಯ ಮಾರ್ಗಕ್ಕೆ ಕೊಡಯ್ಯುವುದಲ್ಲದೆ, ಅದುವೇ ಶಾಸ್ವತ ಎಂಬುದನ್ನು ಅರಿತು, ಮುಂದೆ ನೀವು ಕೂಡ ದಾನ ಧರ್ಮಿಗಳಾಬೇಕು’ ಎಂದು ತಿಳಿಸಿದರು. ಮತ್ತೊರ್ವ ಅತಿಥಿ ಕುಂದಾಪುರ ಫೆಡರಲ್ ಬ್ಯಾಂಕಿನ ಸೀನಿಯರ್ ವ್ಯವಸ್ಥಾಪಕರಾದ ಅನೀಷ್ ಕುಮಾರ್ ಮಾತಾನಾಡಿ ಮಕ್ಕಳಿಗೆ ತಿಳಿವಳಿಕೆಯನ್ನು ನೀಡಿದರು.
ವಸತಿಶಾಲೆಯ ಮಕ್ಕಳ ಜೊತೆ ಹೊಸವರ್ಷಾಚರಣೆಯನ್ನು ನಡೆಸಿಕೊಡುತ್ತೀರುವ ದಾನಿ ಪೆÇೀಷಕರರಾದ ಐವನ್ ಆಲ್ಮೇಡಾ ಮಾತನಾಡಿ ‘ನನಗೆವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಲು ತುಂಬ ಸಂತೋಷ. ಇಲ್ಲದವರ ಜೊತೆ ನಾವು ಹಂಚಿಕೊಳ್ಳಬೇಕು. ಬಡ ಮಕ್ಕಳು ತಮ್ಮ ತಂದೆ ತಾಯಿಗಳಲ್ಲಿ ಮಿತಿ ಮೀರಿದ ವಸ್ತುಗಳಿಗಾಗಿ ಒತ್ತಾಯ ಮಾಡಬಾರದು, ಅದು ಅನರ್ಥಗಳಿಗೆ ಕಾರಣಾವಾಗ ಬಹುದು, ಅದಕ್ಕೆ ನಾವೇ ಉತ್ತಮವಾಗಿ ಕಲಿತು, ಅಭಿವ್ರದ್ದಿ ಹೊಂದಿ, ಮುಂದೆ ಅವಗಳನ್ನು ನಿವೇ ಪಡೆದುಕೊಳ್ಳುವ ಕ್ಷಮತೆ ಬೆಳಸಿಕೊಳ್ಳಬೇಕು. ಹಾಗೇ ಜೀವನದಲ್ಲಿ ಒರ್ವ ವಿದ್ಯಾರ್ಥಿಯ ಶಿಕ್ಷಣಕ್ಕಾಗಿಯಾದರೂ, ಸಹಾಯಧನ ನೀಡಲು ನೀವು ಪಣತೊಡಗಬೇಕು’ ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಅಧ್ಯಕ್ಷತೆಯನ್ನು ವಹಿಸಿ ನಮ್ಮ ಸಂತ ಜೋಸೆಫ್ ವಸತಿಶಾಲೆಯ ಮಕ್ಕಳ ಮೇಲೆ ಪ್ರೀತಿ ಇಟ್ಟು ಕಾರ್ಯಕ್ರಮ ನಡೆಸಿಕೊಟ್ಟದಕ್ಕೆ, ತುಂಬು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಮುಂದಿದ್ದ ವಸತಿ ಶಾಲೆಯ ಹಲವು ವಿದ್ಯಾರ್ಥಿಗಳಿಗೆ ಐವನ್ ಆಲ್ಮೇಡಾ ಮತ್ತು ಕುಟುಂಬದವರು ನಗದು ಬಹುಮಾನವನ್ನು ವಿತರಿಸಿದರು. ಕಿರು ಆಟಗಳನ್ನು ನಡೆಸಲಾಯಿತು. ಮಕ್ಕಳು ವಿವಿಧ ನ್ರತ್ಯ ಹಾಡುಗಳ ಮೂಲಕ ರಂಜಿಸಿದರು. ಕ್ರಿಸ್ಮಸ್ ಕೇಕ್ ಮತ್ತು ಉಟೋಪಚಾರದಿಂದ ಸಂತೋಷಪಡಿಸಲಾಯಿತು.
ಕಾರ್ಯಕ್ರದಲ್ಲಿ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಕೊಂಕಣಿ ಸಾಹಿತಿ ಕ್ಲೆರನ್ಸ್ ಫೆರ್ನಾಂಡಿಸ್ ಕಾರ್ಯಕ್ರಮದ ಪೆÇೀಷಕಿ ಜಾನೆಟ್ ಆಲ್ಮೇಡಾ, ಕಿಯೋನಾ ಪರ್ಲ್ ಆಲ್ಮೇಡಾ, ಕಾನ್ವೆಂಟಿನ ಎಲ್ಲಾ ಧರ್ಮಭಗಿನಿಯರು ಉಪಸ್ಥಿತರಿದ್ದರು.ವಸತಿ ನಿಲಯದ ಮುಖ್ಯಸ್ಥೆ ಸಿಸ್ಟರ್ ಆಶಾ ಸ್ವಾಗತಿಸಿ, ಭೋಜನದ ಮೇಲೆ ಆಶಿರ್ವಾದವನ್ನು ಬೇಡಿದರು. ವಿಲ್ಸನ್ ಡಿಆಲ್ಮೇಡಾ ಕಾರ್ಯಕ್ರಮವನ್ನು ನಿರೂಪಿಸಿದರು.ವಸತಿ ನಿಲಯದ ವಿದ್ಯಾರ್ಥಿನಿ ವಂದಿಸಿದಳು.