ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2024 ರ ಸಂಜೆ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸಲಾಯಿತು..
ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಮೂಲತಹ ಕುಂದಾಪುರದವರಾದ, ತ್ರಾಸಿ ಡಾನ್ ಬಾಸ್ಕೊ ಸಂಸ್ಥೆಯ ಯಾಜಕರಾದ ವಂ।ರೋಶನ್ ಡಿಸೋಜಾ “ನಾವು ಹೊಸ ವರ್ಷಕ್ಕೆ ಕಾಲಿಡುತ್ತಂತೆ ನಮಗೆ ಮೇರಿ ಮಾತೆ ನಾನು ನಿಮ್ಮ ಜೊತೆಯಲ್ಲಿ ಇದ್ದೆನೆಂದು ಅಭಯ ನೀಡುತ್ತಾಳೆ, ಮೇರಿ ಮಾತೆ ಪರೋಪಕಾರಿಯಾಗಿದ್ದಾಳೆ, ನಾವು ಕೂಡ ಇತರರಿಗೆ ಪರೋಪಕಾರಿಯಾಗಬೇಕು. ನಾವು ಕಷ್ಟದಲ್ಲಿರುವರ ಭೇಟಿ ಮಾಡಬೇಕು, ಅವರ ಕಶ್ಟವನ್ನು ನೋಡಿ ಹಂಗಿಸಬಾರದು, ಅವರ ಕಶ್ಟವನ್ನು ಆಲಿಸಬೇಕು, ಅವರಿಗೆ ಸಾಂತನ್ವವನ್ನು ನೀಡಬೇಕು ಅವರ ಕಶ್ಟಕ್ಕೆ ಸಹಾಯವಾಗಬೇಕು’ ಎಂದು ಜೊತೆಗೆ ಹೊಸ ವರ್ಷದ ದಿನವನ್ನು ಮೇರಿ ಮಾತೆಗೆ ಅರ್ಪಿಸಿದ ಕಾರಣ ಮೇರಿ ಮಾತೆಯ ಮಹತ್ವವನ್ನು ಸಾರಿದರು.
ಪ್ರಧಾನ ಧರ್ಮಗುರು ಅ|ವಂ| ಪಾವ್ಲ್ ರೇಗೊ ಮೊದಲು ಘತ ವರ್ಷದಲ್ಲಿ ನಮ್ಮನ್ನು ಕಾಪಾಡಿ ಸಲಹಿದಕ್ಕೆ, ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆಗಾಗಿ ಪವಿತ್ರ ಪ್ರಸಾದದ ಆರಾಧನೆಯನ್ನು ನೆಡೆಸಿಕೊಟ್ಟು ಯೇಸು ಕ್ರಿಸ್ತರ ೨೦೨೫ ಜುಬಿಲಿ ಆಚರಣೆಯ ಕೈ ಪಿಡಿಯನ್ನು ಉದ್ಘಾಟಿಸಿದ ಅವರು ಕೊನೆಯಲ್ಲಿ ಹೊಸ ವರ್ಷದ ಶುಭಾಷಯಗಳನ್ನು ಕೋರಿ, ವಂದಿಸಿದರು.
ಈ ಸಂದರ್ಭದಲ್ಲಿ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.