ಕೋಲಾರ: ಕ್ರೀಡೆಗಳನ್ನು ಹಣ ನೀಡಿ ಖರೀದಿಸಲು ಸಾಧ್ಯವಿಲ್ಲ. ಕ್ರೀಡೆಗಳು ಅಭ್ಯಾಸ ಮತ್ತ ಶ್ರಮದಿಂದ ಮಾತ್ರ ಸಾಧನೆಗೈಯಲು ಸಾಧ್ಯ ಎಂದು ಕೋಲಾರ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷ ಎನ್. ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿದೆ. ಸಮರ್ಪಕವಾದ ಸೌಲಭ್ಯಗಳು ಹಾಗೂ ತರಭೇತಿಯ ಕೊರತೆಯಿಂದ ಜಿಲ್ಲೆಯಲ್ಲಿ ಉತ್ತಮವಾದ ಪ್ರತಿಭೆಗಳಿದ್ದರೂ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡೆಸಿದರು,
ನಮ್ಮ ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಅವರಿಗೆ ಉತ್ತಮವಾದ ತರಭೇತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬೆಳಕಿಗೆ ತರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ಮಾಡಲಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು,
ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ ಮಾತನಾಡಿ, ಕಳೆದ 30 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅಥ್ಲೇಟಿಕ್ಸ್ ತರಭೇತಿದಾರರಾದ ಲಿಂಗಪ್ಪ ಮತ್ತು ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಎ.ಎಲ್.ರಾಮ್‍ರಾವ್ ಅವರ ಅವಧಿಯಲ್ಲಿ ಕೋಲಾರದ ಪ್ರತಿಭೆಗಳು ರಾಜ್ಯ ಮತ್ತು ಅಂತರ್‍ರಾಜ್ಯ ಮಟ್ಟದ ಸ್ವರ್ಧೆಗಳಲ್ಲಿ ಪ್ರತಿನಿಧಿಸಿದ್ದರು ಆಗ ಕ್ರೀಡಾಪಟುಗಳಿಗೆ ಅರ್ಥಿಕವಾಗಿ ಸಹಾಯದ ಕೊರತೆ ಕಂಡು ಬಂದರೂ ಪ್ರೋತ್ಸಾಹಕ್ಕೆ ಕೊರತೆ ಇರಲಿಲ್ಲ ಎಂದರು.
ನಿಕಟ ಪೂರ್ವ ಪದಾಧಿಕಾರಿ ಜಗನ್ ಮಾತನಾಡಿ, ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಸಿಂಥೇಟಿಕ್ಸ್ ಟ್ರಾಕ್‍ಗೆ ಸರ್ಕಾರ 7 ಕೋಟಿ ರೂ ಬಿಡುಗಡೆ ಮಾಡಿದ್ದರೂ ಸಹ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿದೆ ವಿಳಂಭ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಅಧ್ಯಕ್ಷರಾಗಿ ಎನ್. ಮುನಿಯಪ್ಪ,ಉಪಾಧ್ಯಕ್ಷ ಗೌಸ್ ಖಾನ್, ಕಾರ್ಯದರ್ಶಿ ಕೆ.ಆರ್. ರಾಘವೇಂದ್ರ, ಜಂಟಿ ಕಾರ್ಯದರ್ಶಿ ರಾಜೇಶ್ ಬಾಬು.ಸಿ, ಖಜಾಂಜಿ ಎಸ್.ಆರ್. ಪುರುಷೋತ್ತಮ್, ಸದಸ್ಯರಾಗಿ ಇಸ್ಮಾಯಿಲ್ ಖಾನ್, ನಾಗೇಶ್ ಎಂ. ಕೆ.ಆರ್. ಸತೀಶ್ ಕುಮಾರ್ ಎಂದು ವೇದಿಕೆಯಲ್ಲಿದ್ದವರನ್ನು ಪರಿಚಯಿಸಿದರು.