ಕರ್ನಾಟಕದ ಕಥೊಲಿಕ್ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ವೃತ್ತಿಪರರನ್ನು ಒಳಗೊಂಡ ಚಿಂತಕರ ಚಾವಡಿಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
25.09.24 ರಂದು ಬೆಂಗಳೂರಿನ ಸುಬೋಧನಾ, ಕ್ರಾಸ್ ಕೇಂದ್ರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಜಾಕಬ್ ಕ್ರಾಸ್ಟಾ ಮತ್ತು ಎಂಟೋನಿ ಮೆಂಡೋನ್ಸಾ ಉಪಾಧ್ಯಕ್ಷರಾಗಿ, ಕ್ಲಾರಾ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಮತ್ತು ನಿರ್ಮಲ ಜತೆ ಕಾರ್ಯದರ್ಶಿಯಾಗಿ ನೇಮಕಗೊಂಡರು. ಈ ವೇಳೆ ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಮಚಾದೊ ಹಾಗೂ ಕರ್ನಾಟಕದ 15 ಧರ್ಮಾಧ್ಯಕ್ಷರು ಉಪಸ್ಥಿತರಿದ್ದರು.
ಕರ್ನಾಟಕ ಕ್ಯಾಥೋಲಿಕ್ ಚಿಂತಕರ ಚಾವಡಿಯು ಕಾನೂನು, ನಾಗರಿಕ ಸೇವೆಗಳು, ಶಿಕ್ಷಣ, ಮಾಧ್ಯಮ, ಮತ್ತು ಆರೋಗ್ಯ ಸೇವೆಗಳು ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳ ವೃತ್ತಿಪರರನ್ನು ಒಗ್ಗೂಡಿಸಿ, ಈ ಮೂಲಕ ಕರ್ನಾಟಕದ ಕ್ಯಾಥೊಲಿಕ್ ಧರ್ಮಸಭೆಗೆ ಅಗತ್ಯ ಪರಿಣತ ಬೆಂಬಲ ಹಾಗೂ ತಾಂತ್ರಿಕ ಸಲಹೆ ನೀಡುತ್ತದೆ.
New Leadership Elected at Karnataka Catholic Think Tank’s Strategic Meeting
Bengaluru, 25 September 2024:The Karnataka Catholic Think Tank, a collective of professionals from various sectors, held elections during its annual meeting at Subodhana, KROSS, Bangalore, aimed at strengthening its role in addressing societal challenges in the Karnataka. Mr. Roy Castelino was unanimously elected as the President of the think tank, with Mr. Jacob Crasta and Mr. Antony Mendonsa chosen as Vice Presidents. Mrs. Clara Fernandes, serving as the Regional Secretary for Laity, will also assume the role of Secretary, while Mrs. Nirmala was appointed Joint Secretary.
The Karnataka Catholic Think Tank brings together professionals from diverse fields such as law, civil services, education, media, and healthcare to provide expert counsel and support to the Church in Karnataka.