

ದಿನಾಂಕ 30.03.2023 ರಂದು ನೂತನ ಕಾಲೇಜು ಕಟ್ಟಡವನ್ನು ಅಧ್ಯಕ್ಷ ಶ್ರೀ ಆರ್.ಎಸ್. ಶೆಟ್ಟಿಯಾನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಳಗ್ಗೆ 11.30ಕ್ಕೆ ಅಥೇನಾ ಆಸ್ಪತ್ರೆಯ ಸಮೀಪ ಫಳ್ನೀರ್ ನಲ್ಲಿ ಉದ್ಘಾಟಿಸಿದರು.
ಧರ್ಮಗುರುಗಳಾದ ವಂ.ಪ್ರಬುರಾಜ್ ಮತ್ತು ರೆ.ಅಡ್ರಿನ್ ದೀಪಕ್ ರವರಿಂದ ಅರ್ಥಪೂರ್ಣವಾದ ಪ್ರಾರ್ಥನಾ ಸೇವೆಯನ್ನು ನಡೆಸಿ ನೂತನ ಕಟ್ಟಡಕ್ಕೆ ದೇವರ ಆಶೀರ್ವಾದವನ್ನು ಕೋರಿದರು. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಪ್ರಾಂಶುಪಾಲರಾದ ಡಾ ನಂದಿನಿ. ಎಂ, ನರ್ಸಿಂಗ್ ಕಾಲೇಜು
ಪ್ರಾಂಶುಪಾಲೆ ರೆ. ವಂ.ದೀಪಾ ಪೀಟರ್, ಉಪಪ್ರಾಂಶುಪಾಲರಾದ ರೆ. ವಂ. ಐಲೀನ್ ಮಥಾಯಾಸ್ ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



