

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳು ಬುದ್ಧವಾರ ಚಿಂತಾಮಣಿಯಲ್ಲಿನ ತಮ್ಮ ಸ್ವಗೃಹ ಕಚೇರಿಯಲ್ಲಿ ತಾಲೂಕು ಶಾಸಕರಾದ ಜಿ.ಕೆ. ವೆಂಕಟಶಿವಾರೆಡ್ಡಿ ಅವರನ್ನು ಸನ್ಮಾನಿಸಿದರು. ಅಧ್ಯಕ್ಷರಾಗಿ ರೆಡ್ಡಪ್ಪ ಆರ್ ಎಸ್ (ರೋಣೂರು ರೆಡ್ಡಿ), ಪ್ರಧಾನ ಕಾರ್ಯದರ್ಶಿಯಾಗಿ ರಘುನಾಥ ರೆಡ್ಡಿ ಕೆ ನೇಮಕಗೊಂಡಿದ್ದರು. ಪದಾಧಿಕಾರಿಗಳೊಂದಿಗೆ ಅವರು ಶಾಸಕನನ್ನು ಭೇಟಿಯಾಗಿ ತಮ್ಮ ಅಭಿಮಾನ ಸೂಚಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, “ನಿಮ್ಮ ಕೋರಿಕೆಯಂತೆ ಬಿಇಓ ಕಚೇರಿಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣದ ಕಾರ್ಯ ಆರಂಭವಾಗಿದೆ. ಮುಂದಿನ ಆರು ತಿಂಗಳೊಳಗೆ ಈ ಕಟ್ಟಡ ಪೂರ್ಣಗೊಳ್ಳಲಿದೆ,” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಈ ವರ್ಷದ ಹತ್ತನೇ ತರಗತಿಯ ಫಲಿತಾಂಶದಲ್ಲಿ ಶ್ರೀನಿವಾಸಪುರ ತಾಲೂಕು ಕೋಲಾರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಲ್ಲದೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಶ್ರಮವನ್ನು ಹೊಗಳಿದ ಅವರು, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಜೊತೆಗೆ ಶೀಘ್ರದಲ್ಲೇ ಗುರುಭವನ ಸಮಿತಿ ರಚಿಸಿ ಗುರುಭವನ ನಿರ್ಮಾಣದ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಶಿಕ್ಷಕರಿಗೆ ವಸ್ತುನಿಷ್ಠವಾಗಿ ಈಗ ನಡೆಯುತ್ತಿರುವ ಜಾತಿ ಗಣತಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಸೂಚನೆಯನ್ನು ಶಾಸಕರು ನೀಡಿದರು.
ಈ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಬಯ್ಯಾರೆಡ್ಡಿ ವಿ, ಜಿಲ್ಲಾ ಖಜಾಂಚಿ ಸಿವಿ ಶಿವಣ್ಣ, ವೇಣುಗೋಪಾಲ ಎನ್ ವಿ, ಪದಾಧಿಕಾರಿಗಳಾದ ಶ್ರೀರಾಮ ಎಲ್, ಅನಿತಾ ಶಿವಾರೆಡ್ಡಿ, ವೆಂಕಟರಾಮರೆಡ್ಡಿ, ಜಿ ಎನ್ ಶಿವಣ್ಣ, ಚಂದ್ರಶೇಖರ್ ರೆಡ್ಡಿ ಎಂ ಎನ್, ಮಂಜುನಾಥ ರೆಡ್ಡಿ ಎನ್, ಲೋಕೇಶ್, ಮುನಿರಾಜು ಕೆಆರ್, ಜಯರಾಮರೆಡ್ಡಿ, ಶ್ರೀನಿವಾಸ್, ಬೈರೆಡ್ಡಿ, ಸುಧಾಕರ, ವೆಂಕಟೇಶ್ ಜಿ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.