ಕುಂದಾಪುರಃ ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ ಹಾಗೂ ಪಶು ಸಂಗೋಪನಾ ಇಲಾಖೆ ಕುಂದಾಪುರ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 2 ರಿಂದ 6 ರ ತನಕ ಕುಂದಾಪುರದ ಪಶು ಆಸ್ಪತ್ರೆ ವಠಾರದಲ್ಲಿ, ಮನೆಯಲ್ಲಿ ಸಾಕಿದ 27 ಗಂಡು ಮತ್ತು 63 ಹೆಣ್ಣು ಒಟ್ಟು 90 ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕುಂದಾಪುರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ, WVS ಸಂಸ್ಥೆಯ ನುರಿತ ವೈದ್ಯರ ಮತ್ತು ಸಿಬ್ಬಂದಿಯಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇನ್ನರ್ ವ್ಹೀಲ್ ಅಧ್ಯಕ್ಷೆ ಸುರೇಖ ಪುರಾಣಿಕ್, ಕಾರ್ಯದರ್ಶಿ ಸುಮ ಪುತ್ರನ್,ಸದಸ್ಯರಾದ ಸುಜಾತ ನಕ್ಕತ್ತಾಯ, ಅಂಬುಜ ಶೆಟ್ಟಿ, ಶಾಂತಾ ಕಾಂಚನ್,ಸುಜಾತ ಶೆಟ್ಟಿ, ಮಮತಾ, ಆಶಾ ಲುವಿಸ್, ರೋಟರಿ ಕ್ಲಬ್ಬಿನ ಅಧ್ಯಕ್ಷೆ ರೊ.ಜುಡಿತ್ ಮೆಂಡೋನ್ಸ, ಸದಸ್ಯರಾದ ರೊ.ಸತ್ಯನಾರಾಯಣ ಪುರಾಣಿಕ, ರೊ.ಜಾನ್ಸನ್ ಅಲ್ಮೇಡ, ರೊ.ವಾಸುದೇವ ಕಾರಂತ, ರೊ.ಮನೋಹರ, ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟಿನ ಪೃಥ್ವಿ ಪೈ, ಮಂಜುಳಾ ಕರ್ಕೇರಾ, ಪಶು ವೈದ್ಯಾಧಿಕಾರಿ ಡಾ. ಬಾಬಣ್ಣ ಮತ್ತು ಅಲ್ಲಿನ ಸಿಬ್ಬಂದಿ ಉಪಸ್ಥಿತರಿದ್ದರು.