ನೇರಳಕಟ್ಟೆ ರಂಗಪ್ಪ ನಾಯಕ್ ನಿಧನ

JANANUDI.COM NETWORK


ಕರ್ಕುಂಜೆ ಗ್ರಾಮದ ಖ್ಯಾತ ಉದ್ಯಮಿ, ಕೃಷಿಕ, ನೇರಳಕಟ್ಟೆ ರಂಗಪ್ಪ ನಾಯಕ್ (93) ದಿನಾಂಕ 23 ರಂದು ನಿಧನರಾದರು.
ಕೃಷಿ , ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ತಮ್ಮ ವಾಮನ ನಾಯಕ್ ರೈಸ್‍ಮಿಲ್ ಮೂಲಕ ಅಕ್ಕಿ ಉತ್ಪಾದನೆ, ವ್ಯವಹಾರ ನಡೆಸುತ್ತಿದ್ದರು , ಧಾರ್ಮಿಕ , ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಇವರು ಪತ್ನಿ ಹಾಗೂ ಖ್ಯಾತ ಸಾಮಾಜಿಕ ಧುರೀಣ ಎನ್.ನಾರಾಯಣ ನಾಯಕ್ ಸೇರಿದಂತೆ ಮೂವರು ಪುತ್ರರು ಐವರು ಪುತ್ರಿಯರನ್ನು ಅಗಲಿದ್ದಾರೆ.
ಹಲವಾರು ಮಂದಿ ಗಣ್ಯರು, ಗ್ರಾಮಸ್ಥರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.