


ಚಿತ್ರಗಳು ಎರವಲು
ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಭೀಕರ ಕೊಲೆ ಪ್ರಕರಣದ ಮ್ರತರ ಅಂತಿಮ ಸಂಸ್ಕಾರ ಇಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.ಇದಕ್ಕೂ ಮೊದಲು ಮ್ರತ ದೇಹಗಳ ಪೋಸ್ಟ್ ಮಾರ್ಟಮ್ ನೆಡೆಸಿ ಮ್ರತ ದೇಹಗಳನ್ನು ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಯಿತು.
ಮ್ರತ ಶರೀರಗಳನ್ನು ನೇಜಾರಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು, ದರ್ಶನ ಪಡೆದ ನಂತರ ನಾಲ್ಕು ಮೃತದೇಹವನ್ನು ಕೋಡಿಬೆಂಗ್ರೆ ಮಸೀದಿಗೆ ಸಾಗಿಸಿ ಜನಾಝ ನಮಾಝ್ ನಿರ್ವಹಿಸಲಾಯಿತು. ನಮಾಝಿನಲ್ಲಿ ಸಾವಿರಾರು ಜನ ಪಾಲ್ಗೊಂಡರು. ನಂತರ ಸಮೀಪದ ದಫನ ಭೂಮಿಯಲ್ಲಿ ನಾಲ್ವರನ್ನು ದಫನ ಮಾಡಲಾಯಿತು. ಈ ಸಂದರ್ಭದಲ್ಲಿ ಪತಿ, ಮಗ ಮತ್ತು ಸಂಬಂಧಿಕರ ಮತ್ತು ಹಾಜರಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಉಡುಪಿ ಡಿವೈಎಸ್ಪಿ ದಿನಕರ ಮತ್ತು ಕಾರ್ಕಳದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸ್ಥಳದಲ್ಲಿ ಉಪಸ್ಥಿತರಿದ್ದರು.

ಕುಟುಂಬದ ಚಿತ್ರ (ಎರವಲು)