ಕೋಲಾರ:- ಭಾರತದ ಮೊದಲ ಪ್ರಧಾನ ಮಂತ್ರಿ ದಿವಂಗತ ಜವಾಹರಲಾಲ್ ನೆಹರು ಅವರ ಪುಣ್ಯ ಸ್ಮರಣೆಯಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ತಮಿಳುನಾಡು ರಾಜ್ಯದ ಮದುರೈ ನ ತಳ್ಳಕುಳಂ ನಲ್ಲಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯಾಗಿ ಅಲಿಪ್ತ ನೀತಿಯ ನೇತರಾರಾಗಿ, ಶಾಂತಿಧೂತರಾಗಿ, ಪಂಚಮಶೀಲ ತತ್ವಗಳನ್ನು ಜಾರಿಗೆ ತರುತ್ತಾರೆ, ಉತ್ತರ, ಭಾಷಣಕಾರರು, ಲೇಖಕರು ಆಗಿದ್ದರು. 1955 ರಲ್ಲಿ ಭಾರತರತ್ನ, 1964 ರಲ್ಲಿ ಪ್ರಧಾನಿಯಾಗಿದ್ದಾಗಲೇ ಮರಣ ಹೊಂದುತ್ತಾರೆ.
ಸುಮಾರು 17 ವರ್ಷಗಳ ಕಾಲ ಪ್ರಧಾನಿಯಾಗಿ, ಉತ್ತಮ ಕೆಲಸಗಳನ್ನು ರಾಜನೀತಿಯನ್ನು, ಅನೇಕ ರಾಜಕಾರಣಿಗಳಿಗೆ ರಾಜನೀತಿ ಮಾರ್ಗಗದರ್ಶಕರಾಗಿ ಕಂಡ ಬಂದ ನೆಹರು ಅವರ ಆದರ್ಶ ಇಂದಿನ ರಾಜಕಾರಣಿಗಳಿಗೆ ಅಗತ್ಯವಿದೆ ಎಂದರು.
ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನಿಸಿದ ನೆಹರು ಆನಂದ ಭವನದಲ್ಲಿ ಇವರ ಬಾಲ್ಯ ಜೀವನ ಸಾಗುತ್ತದೆ. ದೆಹಲಿಯ ಇವರ ಭವ್ಯ ಭಂಗಲೆಯಲ್ಲಿ ವಾಸವಿರುತ್ತಾರೆ. ತಂದೆ ತಾಯಿಯವರು ನೆಹರು ಎಂದು ನಾಮಕರಣ ಮಾಡುತ್ತಾರೆ. ಕಾಶ್ಮೀರದಲ್ಲಿ ವಾಸವಿದ್ದ ಸಂದರ್ಭದಲ್ಲಿ ರಾಜಕುಲ ಕುಟುಂಬ ಎಂದು ಕರೆಯಲ್ಪಡುತ್ತಿದ್ದರು ಎಂದು ಸ್ಮರಿಸಿದರು.
ನೆಹರು ಇಂಗ್ಲೆಂಡಿನ ಕೆಂಬ್ರಿಡ್ಜ್ನಲ್ಲಿ ಎಂ.ಎ ಪದವಿ ಪಡೆದು ಭಾರತ್ ಲಾದಲ್ಲಿ ಲಾ ಪದವಿ ಪಡೆದು ವಕೀಲ ವೃತ್ತಿ ಆರಂಭಿಸುತ್ತಾರೆ. ತದ ನಂತರ ಸ್ವಾತಂತ್ಯ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ 1947 ರಲ್ಲಿ ಸ್ವಾತಂತ್ರ್ಯ ಪಡೆದು ತದ ನಂತರ ಪ್ರಧಾನಿಯಾಗಿ ನೇಮಕವಾಗುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕೆಯನ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.