ಶ್ರೀನಿವಾಸಪುರ : ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ . ಪರಮಾತ್ಮನ ಶಕ್ತಿಯೇ ಪ್ರಕೃತಿಯ ಮೂಲಕ ಅಭಿವ್ಯಕ್ತವಾಗಿದೆ . ಇಂಥ ಪರಿಸರವನ್ನು ಆರಾಧಿಸುವುದು ಭಾರತೀಯ ಸಂಸ್ಕøತಿಯಾಗಿದ್ದು ನಾವೆಲ್ಲರೂ ಸೇರಿ ಪರಿಸರವನ್ನು ಆರಾಧಿಸಿ , ಉಳಿಸಿಬೆಳಸೊಣವೆಂದು ಎಂದು ಪರಿಸರ ಪ್ರೇಮಿ ಬೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ವಿತರಿಸಿ ಮಾತನಾಡಿದರು.
ನಮಗಿರುವುದು ಒಂದೇ ಭೂಮಿ. ನಾವು ಪ್ರತಿನಿತ್ಯ ಬಳಸುವ ಸಮಸ್ತ ವಸ್ತುಗಳೂ ಈ ಭೂಮಿಯಿಂದಲೇ ಒದಗಿ ಬರಬೇಕು . ಶುದ್ದವಾದ ಗಾಳಿ, ನೀರು, ವಿವಿಧ ಆಹಾರಪದಾರ್ಥಗಳು , ಬಟ್ಟೆ, ಖನಿಜಗಳು, ಕೈಗಾರಿಕ ಕಚ್ಚಾ ವಸ್ತುಗಳು , ಪೆಟ್ರೋಲಿಯಮ್,ಕಲ್ಲಿದ್ದಲು, ಸೌದೆ, ಮೇವು, ಔಷಧಸಾಮಾಗ್ರಿಗಳು ಮುಂತಾದ ನೂರಾರು ವಸ್ತುಗಳಿಗೆ ಈ ಭೂಮಿಯ ಮೇಲಿರುವ ಅರಣ್ಯ, ನೀರು, ನೆಲಗಳೇ ಆಧಾರವಾಗಿವೆ .
ಆದರೆ ಈ ವೈವಿಧ್ಯಪೂರ್ಣ ವಸ್ತುಗಳನ್ನು ಒದಗಿಸುವ ಭೂಮಿ ಒಂದು ಅಕ್ಷಯಪಾತ್ರೆಯಲ್ಲ, ಇತ್ತೀಚಿನ ದಿನಗಳಲ್ಲಿ ಮಾನವ ನೈಸರ್ಗಿಕ ಸಂಪತ್ತನ್ನು ಉತ್ಪಾದನೆಗಿಂತ ಹೆಚ್ಚು ಬಳಕೆ ಮಾಡುತ್ತಿದ್ದು , ಭೂಮಿಯೇನು ಅಕ್ಷಯಪಾತ್ರೆಯೇ?
ಇದಲ್ಲದೆ ಮಾನವನ ಸ್ವಾರ್ಥ ಹಾಗು ಭೋಗ ಜೀವನದಿಂದಾಗಿ ಓಜೂನ್ ಪದರದಲ್ಲಿ ಬಿರುಕು ಬಿಟ್ಟಿದ್ದು, ಇದರಿಂದಾಗಿ ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೈಮೇಲೆ ಬೀಳುವುದರಿಂದ ಚರ್ಮಕ್ಕೆ ಸಂಬಂದಿಸಿದ ವ್ಯಾದಿಗಳಿಂದ ಬಳಲುತ್ತಿದ್ದು, ಇವುಗಳಿಂದ ಪಾರಗಲೂ ನಾವೆಲ್ಲರೂ ಸೇರಿ ಸ್ವಾರ್ಥ ಹಾಗು ಭೋಗಜೀವನವನ್ನು ಬಿಟ್ಟು ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪತ್ತನ್ನು ಉಳಿಸಿ ಕಾಪಾಡಬೇಕಾಗಿದೆ ಎಂದರು.
ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಯರ್ರಂವಾರಿಪಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ, ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಚಕ್ಕಾ ಅಪ್ಪಿ, ಜಗನ್ನಾಥ್, ಪ್ರಸನ್ನ, ಬೈರಗಾನಪಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ ಇದ್ದರು.
ಪೋಟು; ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ಬಿ.ವಿ.ಶಿವಾರೆಡ್ಡಿ ವಿತರಿಸಿ ಮಾತನಾಡಿದರು.