ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ದಿನಾಂಕ 11/08/2024 ರಂದು ಯುವ ಆಯೋಗದ ನೇತೃತ್ವದಲ್ಲಿ ರಾಷ್ಟ್ರೀಯ ಯುವಜನ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಭಾನುವಾರ ಬೆಳಿಗ್ಗೆ ಆಚರಿಸಲಾಯಿತು. ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ಆಗಮಿಸಿದ ವಂದನೀಯ ಫಾ. ನೆಲ್ಸನ್ ಪಿಂಟೋ ಒ ಸಿ ಡಿ ಇವರು ನೆರವೇರಿಸಿದರು.
ತದನಂತರ ಸಭಾಂಗಣದಲ್ಲಿ ಪೋಷಕರೊಂದಿಗೆ ಸ್ನೇಹಕೂಟವನ್ನು ಆಯೋಜಿಸಲಾಗಿತ್ತು. ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಯುವಕ ಯುವತಿ ಹಾಗೂ ಪೋಷಕರನ್ನು ಉದ್ದೇಶಿಸಿ ಹಿತನುಡಿಗಳನ್ನು ಆಡಿದರು.
ಸಂಜೆ ಯುವಜನರಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಬಸ್ರೂರು, ಸಂತ ಫಿಲಿಪ್ ನೇರಿ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ರೊಯ್ ಲೋಬೊರವರು ಹಾಜರಿದ್ದು,ಕಥೋಲಿಕ ಯುವಕರು ಚರ್ಚಿನ ಹಾಗೂ ಸಮಾಜದ ಶಕ್ತಿ. ಅವರು ಶಿಕ್ಷಣದ ಜೊತೆ ಜೊತೆಗೆ ಚರ್ಚಿನ ಪ್ರತಿಯೊಂದು ಚಟುವಟಿಕೆಗಳಲ್ಲಿ ದೂರ ಉಳಿಯದೆ ಸಕ್ರಿಯರಾಗಿ ಭಾಗವಹಿಸಬೇಕು. ಯುವಪ್ರಾಯದಲ್ಲಿ ಚರ್ಚಿನಲ್ಲಿ ಇರುವ ಜವಾಬ್ದಾರಿಯನ್ನು ಒಪ್ಪಿಕೊಂಡು ಧರ್ಮಗುರುಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದರೆ ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ಹೆತ್ತವರು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ನಂತರ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ, ವಂದನೀಯ ಫಾ. ನೆಲ್ಸನ್ ಪಿಂಟೋರವರು ರಚಿಸಿ, ನಿರ್ದೇಶಿಸಿದ “ಜಿಲ್ಲಿ ಬಾಯೆಚೊ ಶೆರ್ಮಾವ್ “ ಎಂಬ ಹಾಸ್ಯ ನಾಟಕವನ್ನು ಯುವಕ-ಯುವತಿಯರು ಪ್ರದರ್ಶಿಸಿದರು. ಕೃತಕ ಬುದ್ಧಿ ಮತ್ತೆ ಬಿಂಬಿಸುವ ಮೈಮ್ ಶೋ, ಸಂಗೀತ, ಪರಿಸರ ಜಾಗ್ರತಿಯ ನ್ರತ್ಯ, ಕೊಂಕಣಿಯವರ ಸಂಪ್ರದಾಯಿಕ ಗುಮ್ಟಾo ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾಷ್ಟ್ರೀಯ ಮಟ್ಟದ ಯುವ ತರಬೇತಿಯಲ್ಲಿ ಭಾಗವಹಿಸಿದ ಆಶಿಕಾ ಆಳ್ವ, ಆಡೋರಿಯನ್ ಮೆಂಡೋನ್ಸ ಹಾಗೂ ಪ್ರಿನ್ಸನ್ ಪಸನ್ನ, ದೇವಾಲಯದಲ್ಲಿ ಭಾನುವಾರ ಕ್ರೈಸ್ತ ಶಿಕ್ಷಣ ಭೋಧಿಸುವ ಜೆನಿಫರ್ ಲೋಬೊ, ವಿನಿತಾ ಮೆಂಡೋನ್ಸ ಹಾಗೂ ಅನಿಶಾ ಮೆಂಡೋನ್ಸ, ಕೀಬೋರ್ಡ್ ವಾದಕ ರೋನ್ಸನ್ ಮಿನೆಜಸ್, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜೋನಿಟ ಮೆಂಡೋನ್ಸ,ಯುವ ಸಚೇತಕರಾದ ನೀತಾ ಮೆಂಡೋನ್ಸ ಹಾಗೂ ಜಾನ್ಸನ್ ಮಿನೆಜೆಸ್,ಮಂಗಳೂರು ವಿಶ್ವ ವಿದ್ಯಾಲಯದ ಸೆನೆಟ್ ಆಗಿ ಆಯ್ಕೆಯಾದ ಜೂಡಿತ್ ಮೆಂಡೋನ್ಸ, ರಾಜೇಶ್ ಮೆಂಡೋನ್ಸ ಹಾಗೂ ಅಮಿತ್ ಇವರೆಲ್ಲರನ್ನು ಅಥಿತಿಗಳಾಗಿ ಆಗಮಿಸಿದ ವಂದನೀಯ ಫಾ. ರೊಯ್ ಲೋಬೊ, ವಂದನೀಯ ಫಾ. ನೆಲ್ಸನ್ ಹಾಗೂ ವಂದನೀಯ ಫಾ. ರಿಜಿನಾಲ್ಡ್ ಪಿಂಟೋರವರು ಸನ್ಮಾನಿಸಿ ಗೌರವಿಸಿದರು.
ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿದ ಚರ್ಚಿನ ಧರ್ಮ ಗುರುಗಳಾದ ವಂದನೀಯ ಎಡ್ವಿನ್ ಡಿಸೋಜಾರವರನ್ನು ವೈ.ಸಿ.ಎಸ್ ಮತ್ತು ಐ.ಸಿ.ವೈ.ಎಮ್. ಸದಸ್ಯರು ಸನ್ಮಾನಿಸಿ ಗೌರವಿಸಿದರು. ಐ.ಸಿ.ವೈ.ಎಮ್. ಅಧ್ಯಕ್ಷ ನಿಶಾನ್ ಮಿನೆಜಸ್ ಸ್ವಾಗತಿಸಿದರು. ಚರ್ಚಿನ ಧರ್ಮ ಗುರುಗಳು ವಂದಿಸಿದರು. ವೈ.ಸಿ.ಎಸ್ ನ ಜೋನಿಟ ಮೆಂಡೋನ್ಸ ಹಾಗೂ ಐ.ಸಿ.ವೈ.ಎಮ್. ಜೋಯ್ವಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.