ಶ್ರೀನಿವಾಸಪುರ : ಸರ್ಕಾರಿ ಕಛೇರಿಗಳಲ್ಲಿ ಎಲ್ಲಾ ಗ್ರಾ.ಪಂ. ಕಛೇರಿಗಳಲ್ಲಿ ಹಾಗೂ ಶಾಲಾಕಾಲೇಜುಗಳಲ್ಲಿ ರಾಷ್ಟ್ರೀಯ ಜಯಂತಿಗಳನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಸೋಮವಾರ ಸಂತ ಸೇವಾಲಾಲ್ ಜಯಂತಿ, ಕಾಯಕ ಶರಣರ ಜಯಂತಿ, ಛತ್ರಪತಿ ಶಿವಾಜಿ ಜಯಂತಿ, ಸರ್ವಜ್ಞ ಜಯಂತಿಗಳನ್ನು ಆಚರಿಸುವ ಸಲುವಾಗಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಪೂರ್ವಬಾವಿ ಸಭೆ ನಡೆಸಿ ಮಾತನಾಡಿದರು.
ಸಮುದಾಯದ ಆಶಯ ತಕ್ಕಂತೆ ಜಯಂತಿಗಳನ್ನು ಆಚರಣೆ ಮಾಡೋಣ . ಆಚರಣೆ ಮಾಡುವು ಉದ್ದೇಶ ಮಹನೀಯರನ್ನ ಸ್ಮರಣೆ ಮಾಡುವುದು ಹಾಗೂ ಸಮುದಾಯದವರನ್ನ ಸಮಾನತೆಯಿಂದ ಕಾಡುವುದು ಜಯಂತಿಗಳ ಉದ್ದೇಶವಾಗಿರುತ್ತದೆ ಎಂದರು. ಎಲ್ಲರೂ ಸಮಾಜದ ಮುಖವಾಹಿನಿಗೆ ಬರಬೇಕು. ಆದ್ದರಿಂದ ಜಯಂತಿಗಳನ್ನು ಆಚರಣೆ ಮಾಡುವುದು. ಆಯಾ ಸಮುದಾಯದ ಮುಖಂಡರು ಸರ್ಕಾರದೊಂದಿಗೆ ಕೈಜೋಡಿಸಿ ಜಯಂತಿಗಳನ್ನು ಯಶ್ವಸಿಯಾಗಿ ಮಾಡಿಕೊಡವಂತೆ ಮನವಿ ಮಾಡಿದರು. ಪೂರ್ವಬಾವಿ ಸಭೆಗೆ ಗೈರುಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದರು.
ಗ್ರೇಡ್-2 ತಹಶೀಲ್ದಾರ್ ಕೆ.ಎಲ್.ಜಯರಾಮ್, ತಾ.ಪಂ ವ್ಯವಸ್ಥಾಪಕ ಮಂಜುನಾಥ್, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕ ಎಚ್,ಎಂ.ಪ್ರಸನ್ನ, ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ವೆಂಕಟೇಶ್, ಪುಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್, ಪುರಸಭೆ ಆರೋಗ್ಯ ಹಿರಿಯ ಅಧಿಕಾರಿ. ಕೆ.ಜಿ.ರಮೇಶ್, ಫುಡ್ ಇನ್ಸಪೆಕ್ಟರ್ ಖುರ್ಷಿದ್ಆಲಂಖಾನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಅಬಕಾರಿ ಇನ್ಸ್ಪೆಕ್ಟರ್ ಉಮರ್ಬಾನು, ಖಜಾನೆ ಅಧಿಕಾರಿ ಕುಂದುವಳ್ಳಿ, ದೈಹಿಕ ಶಿಕ್ಷಣ ಪರಿವೀಕ್ಷಕರು ವೆಂಕಟಸ್ವಾಮಿ, ಶತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೈರಾರೆಡ್ಡಿ , ತಹಶೀಲ್ದಾರ್ ಕಛೇರಿ ಸಿಬ್ಬಂದಿ ಎಚ್.ಎಸ್.ಅಭಿಷೇಕ್ ಹಾಗು ವಿವಿಧ ಸಮುದಾಯಗಳ ಮುಖಂಡರು ಇದ್ದರು.