ಶ್ರೀನಿವಾಸಪುರ : ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ 27 ರಂದು ಕೆಂಪೇಗೌಡ ಆಚರಣೆಯನ್ನು ಎಲ್ಲಾ ಕಚೇರಿಗಳಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಬೇಕು ನಂತರ ತಾಲೂಕು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗುಳ್ಳಬೇಕು ಎಂದು ವಿವಿಧ ಇಲಾಖಾಧಿಕಾರಿಗಳಿಗೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ಕೆಂಪೇಗೌಡ ಜಂಯಿತಿ ಆಚರಣೆಗಾಗಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಅಲ್ಲದೆ ಕೆಂಪೇಗೌಡರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುವ ನಿಟ್ಟಿನಲ್ಲಿ ಶಾಲಾಕಾಲೇಜುಗಳಲ್ಲಿ ಪ್ರಬಂದ ಸ್ಪರ್ದೆ ಮಾಡಿಸಿ ಪ್ರಬಂದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲು ಚರ್ಚೆ ಮಾಡಲಾಯಿತು. ಹಾಗೂ ಹೋಬಳಿ ಕೇಂದ್ರಗಳಿಂದ ಒಂದು ಪಲ್ಲಕ್ಕಿಗಳನ್ನು ವ್ಯವಸ್ಥೆ ಮಾಡಲು ಇಒ ರವರಿಗೆ ಸೂಚಿಸಿದರು. ಅಲ್ಲದೆ ಕಾರ್ಯಕ್ರಮದ ಉಸ್ತವಾರಿ ನೋಡಿಕೊಳ್ಳಲು ಕೆಲ ಇಲಾಖಾಧಿಕಾರಿಳಿಗೆ ಹಾಗೂ ಸಮುದಾಯದ ಮುಖಂಡರಿಗೆ ಸೂಚಿಸಿದರು.
ಇಒ ಎ.ಎನ್.ರವಿ, ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಕಾರ್ಯದರ್ಶಿ ವೆಂಕಟರೆಡ್ಡಿ, ಮುಖಂಡರಾದ ಲಕ್ಷ್ಮಣರೆಡ್ಡಿ, ಬೈರಾರೆಡ್ಡಿ, ಬಚ್ಚಿರೆಡ್ಡಿ, ಕೃಷಿ ಇಲಾಖೆ ಕೆ.ಸಿ.ಮಂಜುನಾಥ್, ವಾಟರ್ಬೋರ್ಡ್ ಅಭಿಯಂತರ ನಾರಾಯಣಸ್ವಾಮಿ, ಸಿಡಿಪಿಒ ನವೀನ್, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಶಶಿಕಲಾ, ಸಬ್ರಿಜಿಸ್ಟರ್ ರಾಮಕೃಷ್ಣಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್, ಬಿಸಿಎಂ ಇಲಾಖೆ ಅಧಿಕಾರಿ ಎಚ್.ಎನ್.ರವಿಕುಮಾರ್, ಅಬಕಾರಿ ಇಲಾಖೆ ಸಿಬ್ಬಂದಿ ಮಂಜುನಾಥ್, ರತಹಶೀಲ್ದಾರ್ ಕಚೇರಿ ಸಿಬ್ಬಂದಿ ಕೆ.ಎಂ.ಶ್ರೀನಾಥ್ ಇದ್ದರು.