ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿಯವರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್”


ಕುಂದಾಪುರ, ಅ.24: ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಇವರಿಗೆ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬಿನಿಂದ “ನೇಶನಲ್ ಬ್ಯುಲ್ಡ್ ಎವಾರ್ಡ್” ಲಭಿಸಿದೆ.
ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182 ವಲಯ 3 ಮತ್ತು 4ರ ಆತಿಥ್ಯದಲ್ಲಿ ಆಯೋಜಿಸಿದ ಮಾಧವಕೃಷ್ಣ ಸಭಾಭವನ, ಹೋಟೆಲ್ ಕಿದಿಯೂರು, ಉಡುಪಿಯಲ್ಲಿ ನಡೆದ 20ನೇ ಅಕ್ಟೋಬರ್ ರಂದು “ಜ್ಞಾನ ಪೂರ್ಣ” ರೋಟರಿ ಜಿಲ್ಲಾ ಸಾಕ್ಷರತಾ ಕಾರ್ಯಾಗಾರ ಹೊಸ ಶಿಕ್ಷಣ ನೀತಿ ಎಂಬ ಕಾರ್ಯಕ್ರಮದಲ್ಲಿ ಆಯ್ದ ಶಿಕ್ಷಕರಿಗೆ ನೇಷನ್ ರೋಟರಿ ಇಂಡಿಯಾ ಮಿಷನ್ ವತಿಯಿಂದ ಶೈಕ್ಷಣಿಕ ಕ್ಷೇತ್ರದ ವಿಶೇಷ ಸಾಧನೆಗಾಗಿ ನೀಡುವ ಆಯ್ದ ಶಿಕ್ಷರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್” ನೀಡಲಾಯಿತು, ಅವರಲ್ಲಿ ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಒರ್ವರಾಗಿದ್ದಾರೆ.


ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಎಚ್. ಭಾ.ಸೇ.ಆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲೆ ಉದ್ಘಾಟಕರಾಗಿದ್ದು, ಅಧ್ಯಕ್ಷತೆಯನ್ನು ರೊ. ಡಾ. ಜಯ್‍ಗೌರಿ, ಜಿಲ್ಲಾ ರೋಟರಿ ಗವರ್ನರ್, 3182 ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಶಿವರಾಜ್ ಎನ್. ಕೆ.ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ, ರೊ. ಅಭಿನಂದನ ಶೆಟ್ಟಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ತರಬೇತುದಾರರು, ರೊ. ಡಿ.ಎಸ್. ರವಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ಸಲಹೆಗಾರರು ರೊ. ಎಚ್. ಎಲ್. ರವಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ವೃತ್ತಿ ಸೇವಾ ನಿರ್ದೇಶಕರು ರೊ. ಬಿ. ಸಿ. ಗೀತಾ, ಜಿಲ್ಲಾ ಗವರ್ನರ್ 2023-24 ರೊ. 03 ದೇವಾನಂದ್, ಜಿಲ್ಲಾ ಗವರ್ನರ್ 2024-25 ಯಾಗಿದ್ದು, ಸಂಪನ್ಮೂಲ ಅತಿಥಿಗಳಾಗಿ ಪ್ರೊ. ಕರುಣಾಕರ ಕೋಟೆಕಾರ್ ನಿರ್ದೇಶಕರು, ಅಂತರಾಷ್ಟೀಯ ಶೈಕ್ಷಣಿಕ ಸಂಯೋಜಕರು, ಮಾಹೆ, ಮಣಿಪಾಲ ಡಾ. ಅಶೋಕ ಸಾಮ್ಯ ಉಪ. ಪ್ರಾಂಶುಪಾಲ, ಡಯಟ್, ಉಡುಪಿ ಶ್ರೀ ಒ.ಆರ್. ಪ್ರಕಾಶ್, ಉಪನ್ಯಾಸಕರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಶ್ರೀ ವಿಠಲ ನಾಯಕ್, ಶಾಲಾ ಶಿಕ್ಷಕರು, ಕಲ್ಲಡ್ಕ, ಬಂಟ್ವಾಳ ಇವರಿದ್ದ ಕಾರ್ಯಕ್ರಮದಲ್ಲಿ ಚಂದ್ರ ಶೇಖರ ಬೀಜಾಡಿಯವ
ರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್” ನ್ನು ಕೊಡಮಾಡಲಾಯಿತು.

ಈ ಮೊದಲು ಕೂಡ ಚಂದ್ರ ಶೇಖರ ಬೀಜಾಡಿಯವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ತಾಲೂಕು, ಜಿಲ್ಲಾ ಮಟ್ಟದ ಕ್ರೀಡೋತ್ವವಗಳಲ್ಲಿ ಅತ್ಯುತ್ತಮ ನಿರೂಪರಾಗಿದ್ದು, ರಾಜ್ಯ ಮಟ್ಟದ ಕೂಡ ಅತ್ಯುತ್ತಮ ಕಾರ್ಯ ನಿರೂಪಕರೆಂದು ಹೆಸರು ಗಳಿಸಿದ್ದಾರೆ.