![](https://jananudi.com/wp-content/uploads/2024/02/2-walter-moteiro.jpg)
![](https://jananudi.com/wp-content/uploads/2024/02/IMG-20240212-WA0137.jpg)
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ - ನಂದಳಿಕೆಯ ರಜತ ವರ್ಷದ ಸರಣಿ ಕಾರ್ಯಕ್ರಮದ ಅಂಗವಾಗಿ ಮಹಿಳಾ – ಯುವತಿಯರ ವಿಭಾಗದ ಥ್ರೋಬಾಲ್ ಪಂದ್ಯಾಟವು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ರಂಗ ಮಂದಿರದ ಬಳಿ ಆದಿತ್ಯವಾರ ಜರಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮಹಿಳಾ ಸಂಘಟನಾ ಕಾರ್ಯದರ್ಶಿ ಅಬ್ಬನಡ್ಕ ಪದ್ಮಶ್ರೀ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಕ್ಷೇತ್ರದ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ರೇಶ್ಮಾ ಉದಯ ಶೆಟ್ಟಿ, ಬೋಳ ಕ್ಷೇತ್ರದ ನಿಕಟ ಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಪುಷ್ಪ ಸತೀಶ್ ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಬೆಳ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮೇಶ್ವರೀ ಶೆಟ್ಟಿ, ಮೂಡಬಿದಿರೆ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಇನ್ನಾ ಕ್ಷೇತ್ರದ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯ ಎಸ್. ಕೋಟ್ಯಾನ್, ರೋಟರಿ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕೆ., ನಿಟ್ಟೆ-ಕೆಮ್ಮಣ್ಣು ರೋಟರಿ ಸಮುದಾಯದಳದ ಅಧ್ಯಕ್ಷರಾದ ಪ್ರದೀಪ್ ಸುವರ್ಣ, ಬೋಳ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಸಂಧ್ಯಾ ಶೆಟ್ಟಿ, ಬೆಳ್ಮಣ್ಣು ಶ್ರೀ ದೇವಿ ಕ್ಯಾಟರರ್ಸ್ ಮಾಲಕರಾದ ಸತ್ಯನಾರಾಯಣ ಭಟ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಪಂದ್ಯಾಟದ ನಿರ್ದೇಶಕರಾದ ಹರಿಣಾಕ್ಷಿ ಪೂಜಾರಿ ಮೊದಲಾದವರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಪದ್ಮಶ್ರೀ ಪೂಜಾರಿ ಸ್ವಾಗತಿಸಿದರು, ಲೀಲಾ ಪೂಜಾರಿ ವಂದಿಸಿದರು, ಬೋಳ ನಿಶ್ಮಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಬೆಳುವಾಯಿ ಪ್ರಕಾಶ್ ಫ್ರೆಂಡ್ಸ್ ತಂಡಕ್ಕೆ ಪ್ರಥಮ ಪ್ರಶಸ್ತಿ ಹಾಗೂ ಬೋಳ ವೀರ ಮಾರುತಿ ‘ಎ’ ತಂಡಕ್ಕೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.
ಒಟ್ಟು ನಂದಳಿಕೆ, ಬೆಳ್ಮಣ್ಣು, ಬೋಳ, ಕೆದಿಂಜೆ, ಮಾಳ, ನಿಟ್ಟೆ, ಶಿರ್ವ, ಕಾರ್ಕಳ, ಬೇಲಾಡಿ, ಬೆಳುವಾಯಿ, ಮೂಡಬಿದ್ರೆ, ಹೆಬ್ರಿ ಪರಿಸರದ ಒಟ್ಟು 19 ತಂಡಗಳು ಮಹಿಳಾ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿವೆ.