

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಬೆಳ್ಮಣ್ಣು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರನ್ನು ನೆನಪಿಸಿ ಬುಧವಾರ ಸಂಘದ ಕಛೇರಿಯಲ್ಲಿ ಭಾರತಾಂಬೆಯ ಭಾವಚಿತ್ರದೆದುರು ಹಣತೆ ದೀಪ ಬೆಳಗಿಸಿ 24 ವರ್ಷಗಳ ಹಿಂದೆ ದೇಶಕ್ಕೆ ಕಾರ್ಗಿಲ್ ವಿಜಯ ತಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿದವರು ಪ್ರತಿಯೊಂದು ಕೆಲಸ ಕಾರ್ಯ, ಸಾಧನೆ, ಗೆಲುವಿನ ಹಿಂದೆ ಬಹಳಷ್ಟು ಜನರ ಬಲಿದಾನವಿದೆ. 1999ರಲ್ಲಿ ಪಾಕ್ ಭಾರತೀಯ ಗಡಿ ಆಕ್ರಮಿಸಿದ್ದರ ವಿರುದ್ಧ ನಡೆದ ಯುದ್ಧದಲ್ಲಿ 527 ಸೈನಿಕರು ವೀರ ಮರಣವನ್ನಪ್ಪಿದರು. 1350ಕ್ಕೂ ಅಧಿಕ ವೀರ ಯೋಧರು ಗಾಯಾಳುಗಳಾಗಿದ್ದರು. ಇಂದು ಕಾರ್ಗಿಲ್ ವಿಜಯೋತ್ಸವವಾಗಿ 24 ವರ್ಷಗಳೇ ಸಂದಿದೆ. ಕಾರ್ಗಿಲ್ ವಿಜಯ ಹಾಗೂ ಸೈನಿಕರ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಭಾರತಾಂಬೆಯ ಭಾವಚಿತ್ರದೆದುರು ನಮ್ಮ ವೀರ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ಧೇವೆ ಎಂದರು.
ಈ ಸಂದರ್ಭದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಬೆಳ್ಮಣ್ಣು ಯುವ ಜೇಸಿ ಅಧ್ಯಕ್ಷ ಕಾರ್ಯದರ್ಶಿ ಲಲಿತಾ ಆಚಾರ್ಯ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ವೀಣಾ ಪೂಜಾರಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಚೆಂಡೆ ಬಳಗದ ನಿರ್ದೇಶಕರಾದ ಸುರೇಶ್ ಅಬ್ಬನಡ್ಕ, ಸದಸ್ಯರಾದ ವೀಣಾ ಆಚಾರ್ಯ, ಪ್ರೇರಣ್ ಮೂಲ್ಯ, ಹಂಶಿಕಾ ಮೂಲ್ಯ ಮೊದಲಾದವರಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಸೆಣಸಾಡಿ ಹುತಾತ್ಮರಾದ ವೀರ ಯೋಧರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.