ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು
ಏಕತೆಯ ಹರಿಕಾರ, ದಿಟ್ಟ ನಿರ್ಧಾರಗಳಿಂದ ಉಕ್ಕಿನ ಮನುಷ್ಯನೆಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಬಾಯಿ ಪಟೇಲರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಐಕ್ಯತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟದ್ದರು. ಸ್ವಾತಂತ್ರ್ಯದ ನಂತರ ದೇಶವನ್ನು ಒಗ್ಗೂಡಿಸಲು ಹಾಗೂ ದೇಶದ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿದು ಭಾರತೀಯರಿಗೆ ಆದರ್ಶಪ್ರಾಯವಾಗಿದ್ದಾರೆ. ಪಟೇಲರ ತತ್ವ-ಆದರ್ಶಗಳು ಇಂದಿಗೂ ಜೀವಂತವಾಗಿದೆ ಎಂದು ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ವೀಣೇಶ್ ಅಮೀನ್ ಹೇಳಿದರು.
ಅವರು ಆದಿತ್ಯವಾರ ನೆಹರೂ ಯುವ ಕೇಂದ್ರ ಉಡುಪಿ ಮತ್ತು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಜೇಸಿಐ ಬೆಳ್ಮಣ್ಣು ಇದರ ಸಂಯುಕ್ತ ಆಶ್ರಯದಲ್ಲಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಜರಗಿದ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಸರ್ದಾರ್ ವಲ್ಲಭಭಾಯಿ ಪಟೇಲರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪರ್ಚನೆ ಸಲ್ಲಿಸಿ ದೀಪ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಂದಳಿಕೆ ಹರಿಪ್ರಸಾದ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಅಬ್ಬನಡ್ಕ ಸತೀಶ್ ಪೂಜಾರಿ, ಉದಯ ಅಂಚನ್, ಸದಸ್ಯರಾದ ಸುರೇಶ್ ಅಬ್ಬನಡ್ಕ, ಹರೀಶ್ ಪೂಜಾರಿ, ಸುದರ್ಶನ್ ಸಾಲ್ಯಾನ್, ಕೀರ್ತನ್ ಕುಮಾರ್, ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ, ಆರತಿ ಕುಮಾರಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಸುಲೋಚನಾ ಕೋಟ್ಯಾನ್, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪ್ರಶಾಂತ್ ಮೊದಲಾದವರಿದ್ದರು.
ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾಸ್ರಬೈಲು ಸುರೇಶ್ ಪೂಜಾರಿ ವಂದಿಸಿದರು.