ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವರಕವಿ ಮುದ್ದಣನ 152ನೇ ವರ್ಷದ ಜನ್ಮ ದಿನಾಚರಣೆ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಇದರ ಸಹಯೋಗದಲ್ಲಿ ನಂದಳಿಕೆ ವರಕವಿ ಮುದ್ದಣನ 152ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಸೋಮವಾರ ನಡೆಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ನಿಕಟ ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮುದ್ದಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದವರು ನಂದಳಿಕೆಯ ಪುಣ್ಯ ಮಣ್ಣಿನಲ್ಲಿ ಜನಿಸಿದ ಮುದ್ದಣ (ಲಕ್ಷ್ಮೀನಾರಾಯಣಪ್ಪ) ನಂದಳಿಕೆಯ ಹೆಸರನ್ನು ಸಾಹಿತ್ಯ ಲೋಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರಿಸುವಂತೆ ಮಾಡಿದ ಮಹಾನ್ ಸಾಧಕ. ಜೀವನವಿಡಿ ಕಷ್ಟಗಳ ಕಹಿಯುಂಡ ಮುದ್ದಣ ಸಾರಸ್ವತ ಲೋಕಕ್ಕೆ ಮಹಾನ್ ಕೃತಿಗಳನ್ನು ನೀಡಿದ ಹಿರಿಮೆಯೊಂದಿಗೆ ಅವರ ಹೆಸರು ಚಿರಸ್ಥಾಯಿಯಾಗಿಸಿವೆ ಎಂದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಸತೀಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸದಸ್ಯರಾದ ಸುದರ್ಶನ್ ಸಾಲ್ಯಾನ್, ಹರಿಪ್ರಸಾದ್ ಆಚಾರ್ಯ, ಸುಲೋಚನಾ ಕೋಟ್ಯಾನ್, ಹರಿಣಿ ಪೂಜಾರಿ, ಪದ್ಮಶ್ರೀ ಪೂಜಾರಿ, ಆರತಿ ಕುಮಾರಿ, ಲೀಲಾ ಎನ್. ಪೂಜಾರಿ, ಕೀರ್ತನ್ ಕುಮಾರ್, ಹರಿಣಾಕ್ಷಿ ಪೂಜಾರಿ, ವೀಣಾ ಪೂಜಾರಿ ಅಶ್ವಿನಿ ಪ್ರಶಾಂತ್, ಮಂಜುನಾಥ ಆಚಾರ್ಯ, ಅಶ್ವಿನಿ ಪ್ರಭಾಕರ್, ರಾಜೇಂದ್ರ ಶೆಟ್ಟಿಗಾರ್, ಹರೀಶ್ ಪೂಝಾರಿ ಮೊದಲಾದವರಿದ್ದರು.
ಸಂಘದ ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್ ವಂದಿಸಿದರು.

Nandali-Abanadka Friends Club: Warakawi Muddana’s152nd Birthday


Nehru Youth Center Udupi, State and District Award Winning Organization Nandali-Abanadka Sri Durgaparameshwari Friends Club in collaboration with Nandaldee Warakawi Muddana’s 152nd Birthday Celebration was held on Monday at the Abandadka Friends Club Theater.
Abhanadka Sandeep V, a close vice president of the Kannada Sahitya Parishad Belmont Hobali unit. Speaking to the portrait of Poojari Muddanna, the speaker was a great achievement in the literary world to make the name of Muddana (Lakshminarayanappa) born in the soil of Nandalaka as a nation. He said that his great name has made him a great masterpiece of life and hardship.
Prashant Poojary, President of Sri Durgaparameshwari Friends Club, Nandalikkam Abanadka.
The association’s former president Raghuveer Shetty, Rajesh Kotyan, Satish Abanadka, treasurer Veena Poojary, women’s organizing secretary Sandhya Shetty members Sudarshan Salyan, Hariprasad Acharya, Sulochana Kotyan, Harini Poojary, Padmashri, Padmashri, Padmashri and Padmashri. Poojary, Kirtan Kumar, Harinakshi Poojary, Veena Poojary Ashwini Prashanth, Manjunatha Acharya, Ashwini Prabhakar, Rajendra Shettigar, Harish Poozari.
Lalitha Acharya, Chairperson of the Association, Abanadka Sri Vanadurga Self Help Society, Secretary Suresh Kasrabailu presented the program. Secretary Pushpa Kulal saluted.