ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್‍ಸಿಟಿ ರೌಂಡ್ಸ್: ಪ್ಲಾಸಿಕ್ ಮಾರುವವರಿಗೆ, ಬಳಸುವ ಗ್ರಾಹಕರಿಗೂ ದಂಡ.ಇನ್ನಿತರ ಪರಿಶೀಲನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ:- 40 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸಿಕ್ ಮಾರಾಟಮಾಡುವವರಿಗೂ ಹಾಗೂ ಅದನ್ನು ಬಳಸುವ ಗ್ರಾಹಕರಿಗೂ ಇಬ್ಬರಿಗೂ ದಂಡ ವಿಧಿಸುವಂತೆ ಕೋಲಾರ ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬೆಳಗ್ಗೆ ಸಿಟಿ ರೌಂಡ್ಸ್ ನಡೆಸಿ, ಕೋಲಾರ ಹೊಸ ಬಸ್ ನಿಲ್ದಾಣ, ಹಳೇ ತರಕಾರಿ ಮಾರುಕಟ್ಟೆ, ಟವರ್ ಸೇರಿದಂತೆ ವಿವಿಧ ಕಡೇ ಪ್ಲಾಸಿಕ್ ಮಾರುವ ಅಂಗಡಿಯಿಂದ 40 ಮೈಕ್ರಾನ್ ಗಿಂತ ಕಡಿಮೆ ಇರುವ ಸುಮಾರು 10 ಕೆಜಿ ಪ್ಲಾಸಿಕ್ ಕವರ್‍ಗಳನ್ನು ವಶಪಡಿಸಿಕೊಂಡರು. ವಶಪಡಿಸಿಕೊಂಡ ಪ್ಲಾಸಿಕ್‍ಕವರ್‍ಗಳನ್ನು ಸ್ಥಳದಲ್ಲಿಯೇ ಕತ್ತರಿಸಿಹಾಕಿ ಕಸ ವಿಲೇವಾರಿ ಮಾಡಿ ಇಂದಿನಿಂದ ಪ್ಲಾಸಿಕ್ ಮಾರುವ ಅಂಗಡಿಯವರಿಗೆ ಹಾಗೂ ಅದನ್ನು ಬಳಸುವ ಗ್ರಾಹಕರಿಗೆ ದಂಡ ವಿಧಿಸಿಸುವುದಾಗಿ ಎಚ್ಚರಿಸಿದರು.
ನಗರದ ಶ್ರೀರಾಮ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಡ್ರೈನೇಜ್ ಬ್ಲಾಕ್ ಆಗಿರುವುದನ್ನು ಪರಿಶೀಲಿಸಿ ಚರಂಡಿ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಬೇಸಿಗೆ ಕಾಲ ಶುರುವಾಗುತ್ತಿದ್ದು ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಕಾರಣ ನಗರಸಭೆ ವತಿಯಿಂದ ಪ್ರತಿ ವಾರ್ಡಗಳಲ್ಲಿ ನೀರಿನ ಸಂಪ್ ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸುವುದಾಗಿ ತಿಳಿಸಿದರು.
2020-21 ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 35ವಾರ್ಡಗಳಲ್ಲಿ ಕೊಳವೆ ಬಾವಿ ಕೊರೆಸಲು ತೀರ್ಮಾನಿಸಿದ್ದು, ಇದುವರೆಗೂ 6 ಕೊಳವೆ ಬಾವಿ ಕೊರೆಸಿದ್ದು ಎಲ್ಲವೂ ಯಶಸ್ವಿಯಾಗಿ ಉತ್ತಮವಾದ ನೀರು ದೊರಕಿರುವುದು ಸಂತಸ ತಂದಿದೆ ಎಂದರು.
ಇಂದು ಹವೇಲಿ ಮೊಹಲ್ಲಾ ಸೇರಿದಂತೆ ಇತರೆ ವಾರ್ಡಗಳಲ್ಲಿ ಪಾಯಿಂಟ್ ಗುರುತಿಸಿದ್ದು, ಸಂಜೆ ವೇಳೆಗೆ ಕೊಳವೆಬಾವಿ ಕೊರೆಸಲು ಚಾಲನೆ ನೀಡುವುದಾಗಿ ತಿಳಿಸಿದರು. ನಗರದ ಗಲ್‍ಪೇಟೆ, ಮಹಾಲಕ್ಷ್ಮೀ ಲೇಔಟ್, ಷಹೀನ್ ಷಾ ನಗರ ಸೇರಿದಂತೆ ಇತರೆ ವಾರ್ಡ್‍ಗಳಲ್ಲಿ ಕೊಳವೆ ಬಾವಿಯಲ್ಲಿ ನೀರಿದ್ದು ಕೆಟ್ಟುಹೊದ ಪಂಪ್‍ಮೋಟಾರ್ ಗಳನ್ನು ದುರಸ್ತಿಮಾಡಿ, ದುರಸ್ತಿಯಾಗದ ಕಡೇ ನೂತನ ಪಂಪ್‍ಮೋಟಾರ್ ಅಳವಡಿಸಿರುವುದಾಗಿ ಹೇಳಿದರು.
ನಗರದ 19ನೇ ವಾರ್ಡ್ ದರ್ಗ ಮೊಹಲ್ಲಾ ದಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದು ಅಧ್ಯಕ್ಷರು ಭೇಟಿನೀಡಿ ಪರಿಶೀಲಿಸಿದರು. ನಂತರ 6ನೇ ವಾರ್ಡ್ ಧರ್ಮರಾಯನಗರದಲ್ಲಿ ನೂತನ ಕೊಳವೆಬಾವಿಗೆ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ,ಎಂ.ಮುಬಾರಕ್ ಅಧ್ಯಕ್ಷರನ್ನು ಸೇರಿದಂತೆ ನಗರಸಭೆ ಸದಸ್ಯರನ್ನು, ನಗರಸಭೆ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ಸದಸ್ಯರಾದ ಅಪೂರ್ವ ರಾಮಚಂದ್ರ, ನಗರಸಭೆ ಸದಸ್ಯರಾದ ಜುಗ್ನು ಅಸ್ಲಾಂ, ಗೂಡ್ ಹಿದಾಯತ್, ಗುಣಶೇಖರ್, ಸಂಗೀತಾ ಜಗದೀಶ್, ಮಾಜಿ ನಗರಸಭೆ ಸದಸ್ಯ ರಮೇಶ್, ನಗರಸಭೆ ಆರೋಗ್ಯ ನಿರೀಕ್ಷಕರಾದ ದೀಪಾ, ಜೆಇ ಎನ್.ಪೂರ್ಣಿಮಾ, ಮುಖಂಡರಾದ ಶಬರೀಶ್, ಉರಗಿಲಿ ರುದ್ರಸ್ವಾಮಿ, ಮಹೇಂದ್ರ ಗಾಣಿಗ, ರಾಮಯ್ಯ, ಬಾಬು ಮತ್ತಿತರರಿದ್ದರು.