ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಒಮ್ಮತವಾಗಿ ಪದಾದಿಕಾರಿಗಳು ಅವಿರೋದವಾಗಿ ಆಯ್ಕೆಯಾದ ಸಭೆಯಲ್ಲಿ ಬಾಗವಹಿಸಿ ಮಾತನಾಡಿದ ಜಿಲ್ಲಾದ್ಯಕ್ಷ ಬಿ.ವಿ ಗೋಪಿನಾಥ್ ಪತ್ರಕರ್ತರು ಶಿಸ್ತು, ವಸ್ತುನಿಷ್ಠೆಯಿಂದ ಸೇವೆ ಮಾಡುವುದರ ಜೊತೆಗೆ ಭವನವನ್ನು ನಿರ್ಮಿಸಲೇ ಬೇಕೆಂದು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದರು.
ಪಟ್ಟಣದ ವೆಂಕಟೇ ಗೌಡ ಕಲ್ಯಾಣ ಮಂಟಪದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆದೇಶದ ಮೇರೆಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾದಿಕಾರಿಗಳಾಗಿ ಮೂರುವರ್ಷದ ಅವದಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು ಇದರಲ್ಲಿ ಕೆ.ವಿ ನಾಗರಾಜ್ ನಾಮಪತ್ರ ಹಿಂಪಡೆದಿದ್ದು ಎನ್.ಮುನಿವೆಂಕಟೇಗೌಡ ರವರು ಅವಿರೋದವಾಗಿ ಅದ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಹಾಗೆಯೇ ಉಳಿದ ಎಲ್ಲಾ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದು ಎಲ್ಲಾ ಕ್ರಮಬದ್ದವಾಗಿದ್ದು ನೂತನ ಪದಾದಿಕಾರಿಗಳಾಗಿ ಉಪಾದ್ಯಕ್ಷ ಶಬ್ಬೀರ್ ಅಹಮದ್, ಪ್ರದಾನಕಾರ್ಯದರ್ಶಿ ವೇಣುಗೋಪಾಲ್, ಖಜಾಂಚಿ ಆರ್.ಬಾಬು, ಕಾರ್ಯದರ್ಶಿ ಹೆಚ್.ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಂ.ಸೋಮಶೇಖರ್, ವಿ.ರಮೇಶ್ ಕುಮಾರ್, ಜಿ.ವಿ ಶ್ರೀನಿವಾಸ್, ಸಿ.ಕೆ ಲಕ್ಷ್ಮಣ್, ಎಸ್.ಲಕ್ಷ್ಮಣ್ ಬಾಬು, ಇವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅನಂತರಾಮ್ ಅಧಿಕೃತವಾಗಿ ಘೊಷಣೆÉ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪದಾದಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾದ ಬಿ.ವಿ.ಗೋಪಿನಾಥ್ ಸಂಘದಲ್ಲಿ ಪತ್ರಕರ್ತರು ಸಮಾಜದ ಕಣ್ಣು ಮೊದಲಿಗೆ ನೀವು ಕುಳಿತು ಕೊಳ್ಳಲು ನೆಲೆ ಅವಶ್ಯಕತೆ ಇದೆ. ಶೀಗ್ರದಲ್ಲೇ ಪತ್ರಕರ್ತರ ಭವನ ಖಾಸಗಿಯಾಗಾದರೂ ಪ್ರಾರಂಭಿಸಿ ನಿಮ್ಮ ಕಾರ್ಯ ಚಟುವಟಿಕೆಗಳು ಮುಂದು ವರಿಸಬೇಕು ಪ್ರತಿಯೊಬ್ಬರು ವಸ್ತುನಿಷ್ಠೆಯಿಂದ ಕೆಲಸ ಮಾಡಬೇಕು, ಅದ್ಯಕ್ಷರಾದವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘದ ಅಭೀವೃದ್ದಿಗೆ ಹೆಚ್ಚು ಹೊತ್ತು ನೀಡಬೇಕೆಂದು ತಿಳಿಸಿದರು.
ಜಿಲ್ಲಾ ಸಂಘದ ಪ್ರದಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ ಪತ್ರಕರ್ತರು ಸುದ್ದಿಗೆ ಪ್ರಾದಾನ್ಯತೆ ನೀಡಿ ಪತ್ರಿಕೆಗಳು ಪ್ರತಿದಿನ ತರಿಸಿಕೊಳ್ಳುವುದು ದಾಸ್ಥಾನು ಪುಸ್ತಕ ನಿರ್ವಹಣೆ ಮಾಡುವುದು ಬಹಳ ಪ್ರಮುಖ ವಾಗಿದೆ ಮುಂದಿನ ವರ್ಷದಲ್ಲಿ ಸಂಘದ ಸದಸ್ಯತ್ವ ಪಡೆಯಲು ನಿಮ್ಮ ಅರ್ಹತೆಗಳನ್ನು ಪರಿಗಣಿಸಿ ಪರೀಕ್ಷೆ ನಡೆಸಿ ಸದಸ್ಯತ್ವ ಮುಂದುವರಿಸಲು ತೀರ್ಮಾನಿಸಿ ಜಿಲ್ಲಾ ಸಂಘ ವಿನೂತನ ನಿರ್ದಾರಗಳನ್ನು ತೆಗೆದುಕೊಳ್ಳುತ್ತಿದ್ದು ಇದಕ್ಕೆ ಬದ್ದರಾಗಿ ವರದಿಗಾರರು ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಸಂಘದ ಖಜಾಂಚಿ ಸುರೇಶ್ ಮಾತನಾಡಿ ಪತ್ರಕರ್ತರು ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ಕ್ರೀಡೆ ಕಾರ್ಯಾಗಾರಗಳಿಗೆ ಬಾಗವಹಿಸಿ ತಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ತಾಲ್ಲೂಕಿನ ಎಲ್ಲಾ ಪತ್ರಕರ್ತರು ಸೌಜನ್ಯದಿಂದ ಪರಸ್ಪರ ವೈಮನಸ್ಸುಗಳನ್ನು ಬಿಟ್ಟು ಸಂಘದ ಅಭಿವೃದ್ದಿಗೆ ಕೆಲಸಮಾಡಬೇಕೆಂದು ಕೋರಿದರು.
ನೂತನ ಅದ್ಯಕ್ಷರಾಗಿ ಆಯ್ಕೆಯಾದ. ಎನ್.ಮುನಿವೆಂಕಟೇಗೌಡ ಖಜಾಂಚಿ ಆರ್.ಬಾಬು ಮಾತನಾಡಿ ನಮ್ಮ ಸಂಘದ ಎಲ್ಲಾ ಸ್ಥಾನಗಳ ಆಯ್ಕೆಗೆ ಸಹಕರಿಸಿದ ಎಲ್ಲಾ ಸಂಘದ ವೃಂದಕ್ಕೆ ಕೃತಜ್ನತೆಗಳನ್ನು ಸಲ್ಲಿಸಿ ಜಿಲ್ಲಾ ಸಂಘದ ಮಾರ್ಗ ದರ್ಶನದಲ್ಲಿ ಈ ತಾಲ್ಲೂಕಿನಲ್ಲಿ ಎಲ್ಲರ ಸಹಕಾರ ದಿಂದ ಭವನವನ್ನು ನಿರ್ಮಿಸಿ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಂ. ಲಕ್ಷ್ಮಣ್, ಮುರಳಿ ಮೋಹನ್, ಹಾಗು ಜಿಲ್ಲಾ ಮತ್ತು ತಾಲ್ಲೂಕಿನ ಎಲ್ಲಾ ಪತ್ರಕರ್ತರು ಹಾಜರಿದ್ದರು.