JANANUDI.COM NETWORK
ಮೈಸೂರು,ಮೇ.14. ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಬಹಳ ಜೋರಾಗಿದ್ದು, ಈ ಸಮ್ಯದಲ್ಲಿ ಮೈಸೂರಿನಲ್ಲೆ ಔಷಧಿ ಕಂಪನಿಯೊಂದು ಕೊರೋನಾ ಚಿಕಿತ್ಸೆಗಾಗಿ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ. ಎಂದು ಹೇಳಿಕೊಂಡಿದೆ. ಇದೊಂದು ಮೌಖಿಕ (ಓರಲ್) ಔಷಧಿಯಾಗಿದೆಯೆಂದು ತಿಳಿಸಲಾಗಿದೆ.
ಡಿಆರ್’ಎಂ ಇನ್ನೋವೇಶನ್ಸ್ ಕೃತಕ ಬುದ್ಧಿಮತ್ತೆಯನ್ನು ಬಳಸಿ ಈ ಔಷಧಿಯನ್ನು ಅಭಿವೃದ್ಧಿ ಪಡಿಸಿದೆ. ಡಿಆರ್ ಎಮ್ ಎಂಡಿ ಡಾ.ಮಂಜುನಾಥ್ ಬಿ.ಹೆಚ್ ನೇತೃತ್ವದ ತಜ್ಞರ ತಂಡ ರಾಸಾಯನಿಕ ಜೀವಶಾಸ್ತ್ರದ ಪ್ರಯೋಗಾಲಯ, ಮೈಸೂರು ವಿಶ್ವವಿದ್ಯಾಲಯದ ಸಾವಯವ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಬಸಪ್ಪ ಮತ್ತು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರೊಫೆಸರ್ ಮಹೇಶ್ ಪಿಎ ಅವರು ಔಷಧಿಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಔಷಧಿಯು ಕೋಶ ಆಧಾರಿತ ವ್ಯವಸ್ಥೆಗಳಲ್ಲಿ ವೈರಸ್ ಅನ್ನು ಕೊಲ್ಲುವಲ್ಲಿ ಉತ್ತಮ ಪ್ರತಿಬಂಧಕ ಪರಿಣಾಮಗಳು ಬೀರುತ್ತವೆ ಎಂದು, ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಡಾ. ಪ್ರಿಯಾ ಅಬ್ರಹಾಂ, ಡಾ. ಅನಿತಾ ಶೇಟ್ ಮತ್ತು ಡಾ. ಪ್ರಜ್ಞಾ ಜಾಧವ್ ಇವರು ಅಧ್ಯಯನಗಳ ಮೂಲಕ ದೃಢಪಡಿಸಿದ್ದಾರೆ
ಮೈಸೂರಿನ ಜೆ.ಎಸ್.ಎಸ್. ಫಾರ್ಮಸಿ ಕಾಲೇಜಿನಲ್ಲಿ ಪ್ರಾಣಿ ಅಧ್ಯಯನದ ಪ್ರಾಂಶುಪಾಲರಾದ ಡಾ.ಪ್ರಮೋದ್ ಕುಮಾರ್ ಮತ್ತು ಸಂಶೋಧನಾ ಮುಖ್ಯಸ್ಥ ಡಾ.ಶರವಣ ಬಾಬು ಅವರು ಈ ಔಷಧವನ್ನು ಮೌಖಿಕವಾಗಿ ನೀಡಬಹುದು ಎಂದು ದೃಢಪಡಿಸಿದ್ದಾರೆ.
ಈ ಔಷಧಿ ರಕ್ತವು ಮಿದುಳಿನ ತಡೆಗೋಡೆ ದಾಟುವ ಸಾಮರ್ಥ್ಯವನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕೊರೋನಾ ಸೋಂಕಿತರು ನರ ವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ರೆಮ್ಡೆಸಿವಿರ್ ಔಷಧಿ ಆ ತಡೆಗೋಡೆಯನ್ನು ದಾಟುವ ಸಾಮರ್ಥ್ಯವನ್ನು ಹೊಂದಿಲ್ಲ. ನಾವು ಅಭಿವೃದ್ಧಿಪಡಿಸಿರುವ ಈ ಔಷಧಿಯು ಮಾನವನ ಮೇಲೆ ಪ್ರಯೋಗಕ್ಕೆ ಸಿದ್ಧವಿದೆ’ ಎಂದು ಡಾ.ಮಂಜುನಾಥ್ ಬಿ.ಹೆಚ್ ತಿಳಿಸಿದ್ದಾರೆ.