

ಕುಂದಾಪುರ (ನ. 11) : ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 7ರಂದು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಸುರಕ್ಷತೆಯ ಬಗ್ಗೆ ಎರವೆಯಲ್ಲಿಯೇ ಅರಿವು ಇರಬೇಕೆಂಬ ಕಾಳಜಿಯಿಂದ ನನ್ನ ಸುರಕ್ಷತೆ ನನ್ನ ಧ್ವನಿ ಎನ್ನುವ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಮಾಜಿ ಶಿಕ್ಷಕಿ ಹಾಗೂ ಯೂಟ್ಯೂಬರ್ ಆಗಿರುವ ಶ್ರೀಮತಿ ಭಾರತಿ ಎನ್ ರವರು ವಿದ್ಯಾರ್ಥಿಗಳಿಗೆ ಗುಡ್ ಟಚ್ ಬ್ಯಾಡ್ ಟಚ್ ಕುರಿತಾದ ಪರಿಪೂರ್ಣ ಮಾಹಿತಿಯನ್ನು ಅವರ ವಯಸ್ಸಿಗನುಸಾರವಾಗಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲರು, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರು, ಸಹಾಯಕ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಶೃತಿ ಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

