ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ 1 : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಕೆ.ಆರ್.ರಮೇಶ್‍ಕುಮಾರ್ ಹೇಳಿದರು.ನೆಲವಂಕಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿವಿಧ ಕಾಮಾಗಾರಿಗಳನ್ನು ಗುರುವಾರ ಉದ್ಗಾಟಿಸಿ, ವೀಕ್ಷಿಸಿ ಮಾತನಾಡಿದರು.
ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ರಸ್ತೆಗಳು ಸೇರಿದಂತೆ ಸಾರ್ವಜನಿಕರ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದರು.
ತ್ಯಾಜ್ಯ ನಿರ್ವಹಣೆಯ ಪ್ರಮುಖ ಉದ್ದೇಶವೇ ಕಸ ಹಾಗೂ ನಿರುಪಯುಕ್ತ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಇರುವಂತೆ ನೋಡಿಕೊಂಡು, ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ ಮಾಡಿಕೊಳ್ಳುವುದು ಉತ್ತಮ ಎಂದರು.
ತಾಲೂಕಿನ ಒಟ್ಟು 20 ತ್ಯಾಜ್ಯವಿಲೇವಾರಿ ಘಟಕಗಳ ಪೈಕಿ 5 ತ್ಯಾಜ್ಯ ವಿಲೇವಾರಿ ಘಟಕಗಳ ಬಾಕಿ ಇದ್ದು, ಅಧಿಕಾರಿಗಳೊಂದಿಗೆ ಚೆರ್ಚಿಸಿ, ಕಾಮಾಗಾರಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಮಲ್ಲಾರಗಾನಪಲ್ಲಿ ತ್ಯಾಜ್ಯವಿಲೇವಾರಿ ಘಟಕ , ಪಾತನೆಲವಂಕಿಯ ಸಿಸಿ ರಸ್ತೆ,ಜೋಡಿಕೊತ್ತಪಲ್ಲಿಯ ಅಂಬೇಡ್ಕರ್ ಸಮುದಾಯಭವನ,ಅಂಗನವಾಡಿ ಕಟ್ಟಡ ಉದ್ಗಾಟನೆ, ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿ, ಸರ್ಕಾರಿ ಶಾಲೆಯ ಕಾಂಪೌಡ್, ಗುಂದೇಡು ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಇಒ ಎಸ್.ಆನಂದ್,ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್‍ರೆಡ್ಡಿ,ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ , ತಾ.ಪಂ ಮಾಜಿ ಸದಸ್ಯ ಕೆ.ಕೆ.ಮಂಜು, ವಿಎಸ್‍ಎಸ್‍ಎಸ್ ಅಧ್ಯಕ್ಷ ರೆಡ್ಡಪ್ಪ, ಗ್ರಾ.ಪಂ.ಅಧ್ಯಕ್ಷ ಗೌತಮಿಮುನಿರಾಜು,ಉಪಾಧ್ಯಕ್ಷೆ ಮಮತ ಸೋಮಶೇಖರ್,ಸದಸ್ಯರಾದ ಬಾಬುರೆಡ್ಡಿ, ರಾಧಮ್ಮರಘುನಾಥರೆಡ್ಡಿ, ನಾರಾಯಣಸ್ವಾಮಿ ಮುಖಂಡ ರಾಮಾನುಜಚಾರ್, ನಾಗರಾಜರೆಡ್ಡಿ, ರಾಮನ್ನರೆಡ್ಡಿ, ಬಟ್ಟುವಾರಿಪಲ್ಲಿ ಉಪೇಂದ್ರ, ಚಿಕ್ಕರಂಗೇಪಲ್ಲಿ ವೆಂಕಟೇಶ್‍ಮೂರ್ತಿ ಇತರರು ಇದ್ದರು.