ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿಯ ಪಾತ ಮುತ್ತಕಪಲ್ಲಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಅಶ್ವಿನಿ ಜಯಗಳಿಸಿದ್ದಾರೆ.
ಮೇ.19 ರಂದು ಚುನಾವಣೆ ನಡೆದಿದ್ದು, ಭಾನುವಾರ ನಡೆದ ಮತ ಎಣಿಕೆ ನಡೆಯಿತು. ಒಟ್ಟು ಮತದಾರರ ಸಂಖ್ಯೆ 664. ಡಿ.ಅಶ್ವಿನಿ 367 ಮತ ಪಡೆದು ಗೆಲುವು ಸಾಧಿಸಿದ್ದರೆ, ಅವರ ಪ್ರತಿಸ್ಪರ್ಧಿ ಶಾಮಲಮ್ಮ 291 ಮತ ಪಡೆದಿದ್ದಾರೆ. ಕ್ಷೇತ್ರದ ಸದಸ್ಯೆ ಗುರಮ್ಮ ಅವರ ನಿಧನದಿಂದಾಗಿ ಉಪ ಚುನಾವಣೆ ನಡೆಸಲಾಯಿತು.
ಗೆದ್ದ ಅಭ್ಯರ್ಥಿಯ ಬೆಂಬಲಿಗರು ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ವಿಜಯೋತ್ಸವ ನಡೆಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಮುಖಂಡರಾದ ಹರೀಶ್ ರೆಡ್ಡಿ, ಆಂಜಿ ಇದ್ದರು.