

ಕೋಲಾರ, ಫೆಬ್ರವರಿ 27 : ಪ್ರಸಕ್ತ ಸಾಲಿನಲ್ಲಿ ಮೊದಲ ದಿನದಿಂದ ಎಲ್ಲಾ ತಂಡವನ್ನು ಗಮನಿಸಿದ್ದೇವೆ. ಅದರಲ್ಲಿ ಮುಸ್ತಫಾ ರವರು ಒಬ್ಬ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುವ ಮತ್ತು ನಾಯಕತ್ವದ ಗುಣಮಟ್ಟ, ನಡವಳಿಕೆ, ಭಾಗವಹಿಸುವಿಕೆಯ ಮಟ್ಟ ಅತ್ಯುತ್ತಮವಾಗಿದೆ ಎಂದು ಪೂರಿ ನೆಹರು ಯುವ ಕೇಂದ್ರದ ಕಾರ್ಯಕ್ರಮ ಆಯೋಜಕ ಅಶೋಕ್ ಬೆಹ್ರಾ ತಿಳಿಸಿದರು.
ಒಡಿಶಾ ರಾಜ್ಯದಲ್ಲಿ ಜಿಲ್ಲಾ ಯುವಜನ ಕೇಂದ್ರ “ಫೆಬ್ರವರಿ 22-26, 2025 ರವರೆಗೆ ಆಯೋಜಿಸಿದ 5-ದಿನದ ಮೈ ಭಾರತ್ (ನೆಹರು ಯುವ ಕೇಂದ್ರ) ಅಂತರ-ರಾಜ್ಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಂಪಿನ ಸಂಘಟಕರಾದ ನಿರಂಜನ್, ರಾಮಕೃಷ್ಣ ಮೊಹಂತಿ ಸೇರಿದಂತೆ ನಮ್ಮ ಸಂಘಟಕರಾದ ಸುನಿಲ್ ಹಾಗೂ ಭಾಗವಹಿಸಿದ ಕೆಲವರ ಮತ್ತು ನನ್ನ ವಿಮರ್ಶೆಯನ್ನು ತೆಗೆದುಕೊಂಡೆವು. ನಂತರ ನಾವು ತೀರ್ಮಾನಕ್ಕೆ ಬಂದೆವು ಮತ್ತು ಕ್ರಿಯಾತ್ಮಕ ನಾಯಕ ಮುಸ್ತಫಾನನ್ನು ಕಂಡುಕೊಂಡೆವು. ಮುಸ್ತಫಾ ಅವರ ಎಲ್ಲಾ ಗುಣಗಳೊಂದಿಗೆ ರೋಮಾಂಚನವಾಗಿದೆ. ಅವರ ಉಜ್ವಲ ಭವಿಷ್ಯವನ್ನು ನಾವು ನೋಡಲು ಬಯಸುತ್ತೇವೆ ಎಂದರು.
ಕೋಲಾರ ಜಿಲ್ಲೆಯಿಂದ ಕರ್ನಾಟಕ ರಾಜ್ಯದ ಹೆಮ್ಮೆಯ ಪ್ರತಿನಿಧಿಯಾಗಿ, ಕರ್ನಾಟಕದ ಎಲ್ಲಾ ತಂಡದ ಪ್ರತಿನಿಧಿಗಳಲ್ಲಿ ಅತ್ಯುತ್ತಮ ಪ್ರದರ್ಶನಕಾರ, ನಾಯಕ, ವೀಕ್ಷಕ ಮತ್ತು ಸ್ವಯಂಸೇವಕನಾಗಿ ಆಯ್ಕೆಯಾಗಿರುವ ಮುಸ್ತಫಾ.ಎಂ.ಪಿ. ರವರನ್ನು ಅಭಿನಂದಿಸಿ, ಕೋಲಾರ ಜಿಲ್ಲಾ ಯುವಜನ ಅಧಿಕಾರಿ ರಾಜೇಶ್ ಕಾರಂತ್ ಹಾಗೂ ಪ್ರವೀಣ್ ಕುಮಾರ್ ನೆಹರು ಯುವ ಕೇಂದ್ರ ಕೋಲಾರ ಇವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಪೂರಿ ಜಿಲ್ಲಾ ಯುವ ಅಧಿಕಾರಿ ನವನೀತ್ ಕುಮಾರ್ ಮಾತನಾಡಿ ಮುಸ್ತಪಾ ರವರ ಸಾಧನೆಗೆ ಅಭಿನಂದನೆಗಳು. ನಿಮ್ಮ ಉತ್ಸಾಹ, ಸಮರ್ಪಣೆ ಮತ್ತು ಉತ್ಕøಷ್ಟತೆಯ ಬದ್ಧತೆಯು ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಮತ್ತು ಈ ಮನ್ನಣೆಗೆ ಅರ್ಹವಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕøತ ಮುಸ್ತಪಾ ಮಾತನಾಡಿ ಇದು ನಮ್ಮ ಕರ್ನಾಟಕಕ್ಕೆ ಗೌರವವಾಗಿದೆ. “ಬುಡಕಟ್ಟು ಜನರು” ಕುರಿತು ನಮ್ಮ ತಂಡದ ಪ್ರಸ್ತುತಿಗೆ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನು ಸಹ ನೀಡಲಾಯಿತು. ಇದು ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಅಂತರ-ರಾಜ್ಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧಕ ಎಂದು ಗುರುತಿಸಲ್ಪಟ್ಟಿದ್ದರಿಂದ, ಮುಸಫಾ ಎಂಪಿ ಅಪಾರ ಸಂತೋಷ, ಹೆಮ್ಮೆ ಮತ್ತು ತೃಪ್ತಿಯ ಭಾವದಿಂದ ತಿಳಿಸಿದರು.
ತಂಡದಲ್ಲಿ ಮತ್ತೊಬ್ಬ ಯುವಕ ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಷಮ್ಸ್ ಎಂ.ಬಿ ಮಾತನಾಡಿ ಮುಸ್ತಫಾ ಅವರು ಮಾಡಿರುವ ಸಾಧನೆಗೆ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ. ಅವರು ಒಡಿಸ್ಸಾದಲ್ಲಿ ಕರ್ನಾಟಕದ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಕನಾಟಕದ ಜನಾಂಗ, ಇತಿಹಾಸ, ಆಚಾರ, ಸಂಸ್ಕøತಿ ಎಲ್ಲವನ್ನು ತಿಳಿದು ಅಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಅವರ ಈ ಸಾಧನೆಗೆ ಅಭಿನಂದನೆಗಳು ಎಂದರು.
ಕೋಲಾರ ಜಿಲ್ಲೆಯಿಂದ ವಿನಯ್ ಕುಮಾರ್, ತೇಜಾನಂದ, ವಸಂತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು ಅವರು ಸಹ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದರು ಇವರೆಲ್ಲರಿಗೆ ನೆಹರು ಯುವ ಕೇಂದ್ರ ಕೋಲಾರದ ಕಡೆಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.